ETV Bharat / state

ಡಿ.ಕೆ. ಶಿವಕುಮಾರ್​ಗೆ​ ಹುಟ್ಟುಹಬ್ಬದ ಸಂಭ್ರಮ: ಉಪರಾಷ್ಟ್ರಪತಿ, ಸಿಎಂ ಸಿದ್ದರಾಮಯ್ಯ, ಗೆಹ್ಲೋಟ್ ರಿಂದ ಶುಭಾಶಯ - DK Shivakumar birthday

author img

By ETV Bharat Karnataka Team

Published : May 15, 2024, 1:54 PM IST

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೆ ಇಂದು ಹುಟ್ಟುಹಬ್ಬದ ದಿನವಾಗಿದ್ದು, ಪ್ರಮುಖ ರಾಜಕೀಯ ನಾಯಕರು ಶುಭಾಶಯ ಕೋರಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್​
ಡಿಸಿಎಂ ಡಿ.ಕೆ. ಶಿವಕುಮಾರ್​ (IANS)

ಬೆಂಗಳೂರು: ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮ ದಿನವಾಗಿದ್ದು​ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಶುಭಾಶಯ ಕೋರಿದ್ದಾರೆ.

ಉಪರಾಷ್ಟ್ರಪತಿಗಳು ಬುಧವಾರ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ಜತೆಗೆ ಅವರಿಗೆ ಶುಭಾಶಯ ಪತ್ರವನ್ನೂ ಬರೆದಿದ್ದಾರೆ.

"ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶದ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ ತಮಗೆ ದೇವರು ಸಂತೋಷ, ಆರೋಗ್ಯ ಹಾಗೂ ಸುದೀರ್ಘ ಫಲಪ್ರದಾಯಕ ಜೀವನವನ್ನು ನೀಡಲಿ" ಎಂದು ಜಗದೀಪ್ ಧನಕರ್ ಅವರು ಪತ್ರದ ಮೂಲಕ ಹಾರೈಸಿದ್ದಾರೆ.

ಉಪರಾಷ್ಟ್ರಪತಿಗಳ ಶುಭಕಾಮನೆಗೆ ಧನ್ಯವಾದ ತಿಳಿಸಿ ಶಿವಕುಮಾರ್ ಅವರು ಕೂಡ ಪತ್ರ ಬರೆದಿದ್ದು, "ನನ್ನ ಜನ್ಮದಿನದ ಅಂಗವಾಗಿ ನಿಮ್ಮ ಶುಭಾಶಯ ಪಡೆದು ಸಂತೋಷವಾಗಿದೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ ನಡುವೆ ನೀವು ನನ್ನನ್ನು ನೆನಪಿಸಿಕೊಂಡು ಶುಭಾಶಯ ಕೋರಿದ್ದೀರಿ. ನಿಮ್ಮ ನಿರೀಕ್ಷೆಯಂತೆ ನನ್ನ ಜೀವನವನ್ನು ಜನ ಸೇವೆಗೆ ಮುಡುಪಿಡುತ್ತೇನೆ. ಇದಕ್ಕೆ ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್​ ಎಕ್ಸ್​ ಖಾತೆಯಿಂದ ವಿಶೇಷ ಶುಭಾಶಯ: "ವಿದ್ಯಾರ್ಥಿ ನಾಯಕರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕರಾಗಿ, ರಾಜ್ಯದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ, ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಇಂಧನ, ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ, ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ, ಎಐಸಿಸಿಯ ಸದಸ್ಯರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ, ಸಂಘಟಿತ, ಅವಿರತ ಪರಿಶ್ರಮದಿಂದ 136 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಜನ್ಮ ದಿನದ ಶುಭಾಶಯಗಳು" ಎಂದು ಬರೆದು ಪೋಸ್ಟ್​ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ವಿಶ್​: "ನನ್ನ ಆತ್ಮೀಯ ಸ್ನೇಹಿತ ಮತ್ತು ಸಹೋದ್ಯೋಗಿ ಡಿ.ಕೆ. ಶಿವಕುಮಾರ್​ಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸಮರ್ಪಣೆ, ಸಂಘಟನಾ ಕೌಶಲ್ಯಗಳು ಮತ್ತು ಅಚಲವಾದ ಬದ್ಧತೆ ಯಾವಾಗಲೂ ಎದ್ದು ಕಾಣುತ್ತದೆ. ನೀವು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುನ್ನಡೆಯುವಂತೆ ಬಯಸುತ್ತೇನೆ. ವರ್ಷವಿಡೀ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ತುಂಬಿರಲಿ ಎಂದು ಶುಭಾಯಿಸುತ್ತೇನೆ" ಎಂದು ಎಕ್ಸ್​ನಲ್ಲಿ ಸಿಎಂ ಶುಭಾಶಯ ಕೋರಿದ್ದಾರೆ.

ರಾಜಸ್ಥಾನ​ ಮಾಜಿ ಸಿಎಂ ಶುಭಾಶಯ: ರಾಜಸ್ಥಾನ​ ಮಾಜಿ ಸಿಎಂ ಅಶೋಕ್​ ಗೆಹ್ಲೋಟ್ ಡಿಕೆಶಿಗೆ ಎಕ್ಸ್​ ಮೂಲಕ ಶುಭಾಶಯ ತಿಳಿಸಿದ್ದಾರೆ. "ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಡಿ.ಕೆ. ಶಿವಕುಮಾರ್​​ ಅವರಿಗೆ ಜನ್ಮದಿನದ ಶುಭಾಶಯಗಳು. ಎಂದಿನಂತೆ ನಿಮ್ಮ ಅದೇ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ನಿಮ್ಮ ಜನರ ಸೇವೆ ಮುಂದುವರಿಯಲಿ. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ" ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕಗ್ಗಂಟಾಗಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್​​ನ ವಿವೇಕಾನಂದ ಕಣಕ್ಕೆ: ಬಿ ಫಾರಂ ನೀಡಿದ ದೇವೇಗೌಡರು - Vivekananda Gets B Form

ETV Bharat Logo

Copyright © 2024 Ushodaya Enterprises Pvt. Ltd., All Rights Reserved.