ETV Bharat / state

ಬೆಂಗಳೂರು: ಸ್ಟೇಡಿಯಂನಲ್ಲಿ ಕುಳಿತು ಬೆಟ್ಟಿಂಗ್ ದಂಧೆಯಲ್ಲಿ ನಿರತವಾಗಿದ್ದ ಇಬ್ಬರು ಆರೋಪಿಗಳ ಬಂಧನ - betting case

author img

By ETV Bharat Karnataka Team

Published : Apr 9, 2024, 6:27 PM IST

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್​ ಪಂದ್ಯ ನಡೆಯುವಾಗ ಬೆಟ್ಟಿಂಗ್ ದಂಧೆಯಲ್ಲಿ ನಿರತವಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇಬ್ಬರು ಆರೋಪಿಗಳ ಬಂಧನ
ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು : ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಮೈದಾನದ ಕುಳಿತುಕೊಂಡೇ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂಜೀವ್ ಕುಮಾರ್ ಬೆಹರಾ ಹಾಗೂ ಪವನ್ ಬಂಧಿತ ಆರೋಪಿಗಳು.

ಏಪ್ರಿಲ್​​ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಆರೋಪಿಗಳನ್ನ ಬಂಧಿಸಲಾಗಿದೆ.

ಮೈದಾನದಲ್ಲಿ ಪಂದ್ಯ ನಡೆಯುವುದು ಹಾಗೂ ನೇರಪ್ರಸಾರದಲ್ಲಿ ವೀಕ್ಷಿಸುವುದಕ್ಕೂ ನಡುವೆ ಕನಿಷ್ಠ 30-40 ಸೆಕೆಂಡ್​ಗಳ ಅಂತರ ಇರುತ್ತದೆ. ಈ ಅವಧಿಯನ್ನು ಬಳಸಿಕೊಳ್ಳುತ್ತಿದ್ದ ಆರೋಪಿಗಳು ಸ್ಟೇಡಿಯಂನಲ್ಲಿ‌ ಕುಳಿತು ಫೋನ್ ಮೂಲಕ ಬಾಲ್ - ಟು - ಬಾಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ 2 ಮೊಬೈಲ್​ ಫೋನ್‌ಗಳು, ಬ್ಯಾಂಕ್ ಖಾತೆಯಲಿದ್ದ 1.17 ಲಕ್ಷ ರೂ ನಗದು ಜಪ್ತಿ ಮಾಡಲಾಗಿದೆ. ಹಾಗೂ ತಲೆಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಪತಿಯ ಕ್ರಿಕೆಟ್​​ ಬೆಟ್ಟಿಂಗ್​ನಿಂದ ಸಾಲಗಾರರ ಕಿರುಕುಳ ಆರೋಪ: ಮನನೊಂದು ಪತ್ನಿ ಆತ್ಮಹತ್ಯೆ - Cricket Betting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.