ETV Bharat / state

ರೇವ್ ಪಾರ್ಟಿ ಪ್ರಕರಣ: ಹೆಬ್ಬಗೋಡಿಯ ಮೂವರು ಪೊಲೀಸರು ಸಸ್ಪೆಂಡ್ - Three police staff suspend

author img

By ETV Bharat Karnataka Team

Published : May 24, 2024, 5:34 PM IST

ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿಯ ಮೂವರು ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಸಸ್ಪೆಂಡ್ ಮಾಡಿದ್ದಾರೆ.

rave-party-case
ರೇವ್ ಪಾರ್ಟಿ (ETV Bharat)

ಆನೇಕಲ್ (ಬೆಂಗಳೂರು) : ಆನೇಕಲ್ ಹೆಬ್ಬಗೋಡಿ ಜಿ ಆರ್ ಫಾರ್ಮ್ ಹೌಸ್​ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರಾದ ಬೀಟ್ ಪೊಲೀಸ್ ದೇವರಾಜ್, ಎಎಸ್ಐ ನಾರಾಯಣಸ್ವಾಮಿ ಹಾಗೂ ಹೆಚ್​ಸಿ ಗಿರೀಶರನ್ನು ಹೊಣೆ ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಸ್ಪೆಂಡ್ ಮಾಡಿದ್ದಾರೆ.

ಮೊದಲು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತರ ರೇವ್ ಪಾರ್ಟಿ ಹೆಬ್ಬಗೋಡಿ ಠಾಣಾ ವ್ಯಾಪ್ತಿ ಎಂದು ತಿಳಿಯುತ್ತಿದ್ದಂತೆ ಪ್ರಕರಣ ಹೆಬ್ಬಗೋಡಿಗೆ ವರ್ಗಾಯಿಸಲಾಗಿತ್ತು. ಅನಂತರ ಸಿಸಿಬಿ ತನಿಖೆ ಬೆಂಗಳೂರು ಗ್ರಾಮಾಂತರ ಎಸ್​ಪಿ ನೇತೃತ್ವದ ಸಹಕಾರದಲ್ಲಿ‌ ನಡೆದಿದ್ದು, ಡಿಜಿ ಆದೇಶದಂತೆ ಮತ್ತೆ ಸಿಸಿಬಿಗೆ ಹೆಬ್ಬಗೋಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ವರ್ಗಾಯಿಸಿತ್ತು. ಈ ನಡುವೆ ವಾರದಿಂದ ರಜೆಯಲ್ಲಿದ್ದ ಎಸ್ಪಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್​ ಸಿ ಗಿರೀಶ್ ಮೇಲೆಯೂ ಹೊಣೆ ಹೊರಿಸಿ ಸಸ್ಪೆಂಡ್ ಮಾಡಲಾಗಿದೆ.

ಅಲ್ಲದೇ ಅಂದು ಸ್ಟೇಷನ್ ಎಸ್​ಹೆಚ್​ಒ ಇದ್ದ ನಾರಾಯಣ ಸ್ವಾಮಿ, ಬೀಟ್ ಪೊಲೀಸರನ್ನು ಹೊಣೆಗಾರರನ್ನಾಗಿಸಿ ಸಸ್ಪೆಂಡ್ ಮಾಡಲಾಗಿದೆ. ಅದಲ್ಲದೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸರಹದ್ದಿಗೆ ಸಂಬಂಧಿಸದೇ ಇದ್ದರೂ ಲಂಚ ನೀಡಿ ಅನುಮತಿ ಪಡೆದಿದ್ದರ ಬಗ್ಗೆ ತನಿಖೆ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇವಿಷ್ಟೇ ಅಲ್ಲದೆ ಅಂದು ರಾತ್ರಿ ಪಾಳೆಯದಲ್ಲಿದ್ದ ಆನೇಕಲ್ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಬಚಾವಾಗಿದ್ದು ಹೇಗೆ? ಎನ್ನುವ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಫಾರ್ಮ್ ಹೌಸ್ ರೇವ್ ಪಾರ್ಟಿ ಪ್ರಕರಣ: ಎಲೆಕ್ಟ್ರಾನಿಕ್ ಸಿಟಿ ಠಾಣೆಯಿಂದ ಹೆಬ್ಬಗೋಡಿ ಪೊಲೀಸರಿಗೆ ಹಸ್ತಾಂತರ - Bengaluru Rave Party

ETV Bharat Logo

Copyright © 2024 Ushodaya Enterprises Pvt. Ltd., All Rights Reserved.