ETV Bharat / state

ಹುಬ್ಬಳ್ಳಿ: ಬಸ್​ಗೆ ಕಾರು ಡಿಕ್ಕಿ ಹೊಡೆದು ಮೂವರು ಸಾವು, ಒಬ್ಬನ ಸ್ಥಿತಿ ಗಂಭೀರ - Three died in Accident

author img

By ETV Bharat Karnataka Team

Published : Apr 16, 2024, 10:59 AM IST

Updated : Apr 16, 2024, 11:39 AM IST

ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಕಾರು - ಬಸ್​ ಅಪಘಾತ ನಡೆದು ಕಾರಿನ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ.

accident
ಬಸ್​ಗೆ ಕಾರು ಡಿಕ್ಕಿ

ಹುಬ್ಬಳ್ಳಿ: ಖಾಸಗಿ ಬಸ್​ಗೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಚಟಗೇರಿ ಸಮೀಪದ ಕಾರವಾರ ರಸ್ತೆಯಲ್ಲಿ ಸಂಭವಿಸಿದೆ.

ಕಾರಿನಲ್ಲಿದ್ದ ನಾಲ್ವರು ಆಂಧ್ರ ಕರ್ನೂಲು ಜಿಲ್ಲೆಯವರು. ಕಾರಿನಲ್ಲಿ ಮದ್ಯದ ಬಾಟಲಿಗಳು ದೊರಕಿವೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುವನ್ನು ಪ್ರದೀಪ ಕುಮಾರ್ ಹೈದರಾಬಾದ್​ ಗಾಯತ್ರಿನಗರ ಬೋರಬಂಡಾ ನಿವಾಸಿ ಎಂದು ಗುರುತಿಸಲಾಗಿದೆ. ಈತನನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂವರು ಮೃತರಲ್ಲಿ ಒಬ್ಬನ ಗುರುತು ಸಿಕ್ಕಿದ್ದು ಮೃತನನ್ನು ಹೈದರಾಬಾದ್​ ಉಪ್ಪಳ ನಿವಾಸಿ ಸೀತಾರಾಮ್ ಎಂದು ಗುರುತಿಸಲಾಗಿದೆ‌. ಕೆಲಸದ ನಿಮಿತ್ತ ಸ್ನೇಹಿತರ ಜೊತೆ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ತಿಳಿಸಿದ್ದ. ಕಾರಿನಲ್ಲಿ ಇನ್ನುಳಿದವರ ಬಗ್ಗೆ, ಮತ್ತೆ ಯಾರಿದ್ದರು ಎಂಬ ಮಾಹಿತಿ ಇಲ್ಲ ಎಂದು ಮೃತನ ಸಂಬಂಧ ವರ್ಧನ್​​ ಎಂಬುವವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಯುವಕ ಸಾವು: ಇಬ್ಬರ ಸ್ಥಿತಿ ಗಂಭೀರ - young man died

Last Updated : Apr 16, 2024, 11:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.