ETV Bharat / state

ಬೆಂಗಳೂರು: ನಿಂದಿಸುತ್ತಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಫೈರಿಂಗ್, ಮಾಜಿ ಯೋಧನ ಬಂಧನ

author img

By ETV Bharat Karnataka Team

Published : Feb 7, 2024, 1:38 PM IST

Updated : Feb 7, 2024, 5:21 PM IST

ಅವಾಚ್ಯ ಪದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಗುಂಡು ಹಾರಿಸಿದ ಮಾಜಿ ಯೋಧನ ಬಂಧನವಾಗಿದೆ.

Etv Bharatthe-retired-army-man-arrested-for-he-fired-at-the-youth-in-bengaluru
ಬೆಂಗಳೂರು: ನಿಂದಿಸುತ್ತಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಫೈರಿಂಗ್, ಮಾಜಿ ಯೋಧನ ಬಂಧನ

ಬೆಂಗಳೂರು: ಮನೆ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಮಾಜಿ ಯೋಧ ಫೈರಿಂಗ್​​ ಮಾಡಿರುವ ಘಟನೆ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೂರಜ್ (31)​​ ಎಂಬ ಯುವಕನ ಮೇಲೆ ಮಾಜಿ ಯೋಧ ಪರಶುರಾಮ್ (65)​ ಎಂಬುವರು ಫೈರಿಂಗ್​ ಮಾಡಿದ್ದು, ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ.

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ಪರಶುರಾಮ್​​, ಪರವಾನಗಿ ಹೊಂದಿರುವ ಗನ್​ ಇಟ್ಟುಕೊಂಡಿದ್ದಾರೆ. ಮೊದಲೇ ಪರಿಚಯಸ್ಥನಾಗಿದ್ದ ಆರೋಪಿ ಯಾವುದೋ ಒಂದು ವಿಚಾರಕ್ಕೆ ಸೋಮವಾರ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದನ್ನು ಪ್ರಶ್ನಿಸಲು ಸೂರಜ್ ಹಾಗೂ ಆತನ ತಂದೆ ಹೋದಾಗ ದಿಢೀರ್​ ಗನ್​ ತೆಗೆದು ಗುಂಡು ಹಾರಿಸಿದ್ದಾರೆ. ತಕ್ಷಣ ಸೂರಜ್​ ತಪ್ಪಿಸಿಕೊಂಡ ಕಾರಣ ಯಾವುದೇ ಗಾಯಗಳಾಗಿಲ್ಲ.

ಪೊಲೀಸ್​ ಮಾಹಿತಿ ಪ್ರಕಾರ, ಮನೆಗೆ ಪ್ರವೇಶಿಸಲು ಸೂರಜ್​ ಹಾಗೂ ಆತನ ತಂದೆ ಪರಶುರಾಮ್​ಗೆ ತಡೆದಿದ್ದು, ಇದರಿಂದ ಗಲಾಟೆ ನಡೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ, ಏಕಾಏಕಿ ತಮ್ಮ ಬಳಿ ಇದ್ದ​ ಗನ್​ ತೆಗೆದು ಸೂರಜ್​ನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದ ಯುವಕ ತಪ್ಪಿಸಿಕೊಂಡಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ ಪರಶುರಾಮ್ ಆತಂಕ ಸೃಷ್ಟಿಸಿದ್ದರು.

ಬಳಿಕ ನೆರೆಹೊರೆಯವರು ಪರಶುರಾಮ್​ಗೆ ತಿಳಿಹೇಳಿ ಸಮಾಧಾನ ಮಾಡಿದ್ದಾರೆ. ಈ ನಡುವೆ ಘಟನೆ ಕುರಿತಂತೆ ಸೂರಜ್​ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಗನ್​ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪರಶುರಾಮ್ ತಮಗೆ ಪರಿಚಯವಿದ್ದು, ಆಗಾಗ ಮದ್ಯ ಸೇವಿಸಿ ತಮ್ಮ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು ಎಂದು ಸೂರಜ್​ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಸೆಕ್ಷನ್​​ 307 ರ ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೈಕ್​ನಿಂದ ವೀಲಿಂಗ್​​ ಮಾಡಬೇಡಿ ಎಂದು ಬುದ್ಧಿಮಾತು ಹೇಳಿದವನಿಗೆ ಚಾಕು ಇರಿದ ಯುವಕರು

Last Updated : Feb 7, 2024, 5:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.