ETV Bharat / state

ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

author img

By ETV Bharat Karnataka Team

Published : Feb 20, 2024, 3:24 PM IST

Updated : Feb 20, 2024, 9:37 PM IST

ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ.

ಎಸ್​ಎಸ್​ಎಲ್​ಸಿ
ಎಸ್​ಎಸ್​ಎಲ್​ಸಿ

ಬೆಂಗಳೂರು: ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 25ರಿಂದ ಎಸ್​ಎಸ್​ಎಲ್​ಸಿ, ಮಾರ್ಚ್ 1 ರಿಂದ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಶಿಕ್ಷಣ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಡ್ಡಿ-ಆತಂಕವಿಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ತಿಳಿಸಲಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯ ವೇಳಾಪಟ್ಟಿ :

  • ಮಾರ್ಚ್ 25 - ಪ್ರಥಮ ಭಾಷೆ ಪರೀಕ್ಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, + ಇಂಗ್ಲಿಷ್ NCERT, ಸಂಸ್ಕೃತ
  • ಮಾ. 27- ಸಮಾಜ ವಿಜ್ಞಾನ ಪರೀಕ್ಷೆ.
  • ಮಾ. 30 ರಂದು ವಿಜ್ಞಾನ, ರಾಜ್ಯಶಾಸ್ತ್ರ ಪರೀಕ್ಷೆ.
  • ಏಪ್ರಿಲ್ 2 ರಂದು ಗಣಿತ, ಸಮಾಜ ಶಾಸ್ತ್ರ ಪರೀಕ್ಷೆ.
  • ಏ. 3ರಂದು ಅರ್ಥಶಾಸ್ತ್ರ ಪರೀಕ್ಷೆ
  • ಏ.4 ತೃತೀಯ ಭಾಷೆ - ಹಿಂದಿ, ಕನ್ನಡ, ಇಂಗ್ಲಿಷ್​, ಪರ್ಷಿಯನ್​, ಅರೇಬಿಕ್​, ತುಳು, ಉರ್ದು, ಸಂಸ್ಕೃತ, ಕೊಂಕಣಿ
  • ಏ. 6 ದ್ವಿತೀಯ ಭಾಷೆ- ಇಂಗ್ಲಿಷ್​, ಕನ್ನಡ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ :
ಮಾರ್ಚ್.1 ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
ಮಾ.4 ಗಣಿತ ಪರೀಕ್ಷೆ
ಮಾ.5 ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ
ಮಾ.6 ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್ ಪರೀಕ್ಷೆ
ಮಾ.7 ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ
ಮಾ.9 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ ಪರೀಕ್ಷೆ
ಮಾ.11 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಪರೀಕ್ಷೆ
ಮಾ.13 ಇಂಗ್ಲಿಷ್ ಪರೀಕ್ಷೆ
ಮಾ.15 ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ ಪರೀಕ್ಷೆ
ಮಾ.16 ಅರ್ಥಶಾಸ್ತ್ರ ಪರೀಕ್ಷೆ
ಮಾ.18 ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
ಮಾ.20 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ
ಮಾ.22 ಹಿಂದಿ ಪರೀಕ್ಷೆ

ಇದನ್ನೂ ಓದಿ: ಸರ್ಕಾರಿ, ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ

Last Updated : Feb 20, 2024, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.