ETV Bharat / state

ಆದಾಯ ತೆರಿಗೆ ಅಧಿಕಾರಿಗಳ ವಿಶೇಷ ಕಾರ್ಯಾಚರಣೆ: ಎರಡೇ ದಿನದಲ್ಲಿ ಹದಿನಾರು ಕೋಟಿಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ - Income Tax Raid

author img

By ETV Bharat Karnataka Team

Published : Apr 24, 2024, 12:50 PM IST

ಆದಾಯ ತೆರಿಗೆ ಅಧಿಕಾರಿಗಳ ವಿಶೇಷ ಕಾರ್ಯಾಚರಣೆ ಮಾಡಿ ಎರಡೇ ದಿನದಲ್ಲಿ ಹದಿನಾರು ಕೋಟಿಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.

INCOME TAX OFFICERS  SPECIAL OPERATION  ASSETS SEIZED  BENGALURU
ಎರಡೇ ದಿನದಲ್ಲಿ ಹದಿನಾರು ಕೋಟಿಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನದಲ್ಲಿ ಹತ್ತಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 16 ಕೋಟಿ 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಈ ಸ್ವತ್ತುಗಳಲ್ಲಿ 22 ಕೆಜಿ 923 ಗ್ರಾಂ ಚಿನ್ನ ಹಾಗೂ 1.33 ಕೋಟಿ ನಗದು ಸಹ ಸೇರಿದೆ. ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧೆಡೆ ದಾಳಿ‌ ನಡೆಸಲಾಗಿದ್ದು, ಅನೇಕರ ಆಸ್ತಿ-ಪಾಸ್ತಿ ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಕೆಜಿಗಟ್ಟಲೆ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಐಟಿ ಇಲಾಖೆ ಮಾಹಿತಿ ನೀಡಿದೆ.

ವಶಪಡಿಸಿಕೊಳ್ಳಲಾದ ಸ್ವತ್ತುಗಳ ವಿವರ:

1) ಶಂಕರಪುರಂನಲ್ಲಿ - 3.10 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ

2) ಶಾರದಾದೇವಿ ರಸ್ತೆ - 3.39 ಕೋಟಿ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನ

3) ಮರ್ಕೈಂಟಲ್ ಬ್ಯಾಂಕ್ ಲಾಕರ್ - 2.13 ಕೋಟಿ ಮೌಲ್ಯದ 3 ಕೆಜಿ 400 ಗ್ರಾಂ

4) ಜಯನಗರ 3ನೇ ಬ್ಲಾಕ್ - 5.33 ಕೋಟಿ ಮೌಲ್ಯದ 7 ಕೆಜಿ 598 ಗ್ರಾಂ ಚಿನ್ನ

5) ಸಾರಸ್ವತ್ ಬ್ಯಾಂಕ್, ಚಾಮರಾಜಪೇಟೆ - 84.31ಲಕ್ಷ ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ

6) ಬಸವನಗುಡಿ ಅಂಚೆ ಕಚೇರಿ ಹತ್ತಿರ - 3.34 ಲಕ್ಷ ಮೌಲ್ಯದ 6.38 ಕ್ಯಾರೆಟ್ ವಜ್ರ

7) ಮಾತಾ ಶಾರದಾ ದೇವಿ ರಸ್ತೆ - 3.14 ಲಕ್ಷ ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆ

8) ಜಯನಗರ - 6.40 ಕೋಟಿ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆ

9) ಬಸವನಗುಡಿ ಅಂಚೆ ಕಚೇರಿ ಸಮೀಪ - 18 ಲಕ್ಷ ರೂ ನಗದು ಪತ್ತೆ

10) ಶಂಕರಪುರಂ 3ನೇ ಕ್ರಾಸ್ ಹತ್ತಿರ - 55 ಲಕ್ಷ ರೂ ನಗದು ಪತ್ತೆ

11) ಮಾತಾ ಶಾರದಾದೇವಿ ರಸ್ತೆ ಹತ್ತಿರ - 16 ಲಕ್ಷ ನಗದು ಪತ್ತೆ

12) ಜಯನಗರ 3ನೇ ಬ್ಲಾಕ್ ಹತ್ತಿರ - 8.77 ಲಕ್ಷ ನಗದು ಪತ್ತೆ

13) ವಿ.ವಿ.ಪುರಂ ವಾಣಿವಿಲಾಸ ರಸ್ತೆ ಹತ್ತಿರ - 37 ಲಕ್ಷ ನಗದು ಪತ್ತೆ

14) ಬಸವನಗುಡಿ ಅಂಚೆ ಕಚೇರಿ ಹತ್ತಿರ - 1.29 ಕೋಟಿ ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನ ಪತ್ತೆ

ಓದಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ: ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ - public campaign ends today

ETV Bharat Logo

Copyright © 2024 Ushodaya Enterprises Pvt. Ltd., All Rights Reserved.