ETV Bharat / state

ಅಂಜಲಿ ಹತ್ಯೆಗೆ ಖಂಡನೆ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ - Anjali murder case

author img

By ETV Bharat Karnataka Team

Published : May 17, 2024, 5:54 PM IST

ಅಂಜಲಿ ಹತ್ಯೆಯ ಆರೋಪಿಯ ಎನ್​ಕೌಂಟರ್​ಗೆ ಒತ್ತಾಯಿಸಿ ಶ್ರೀರಾಮಸೇನೆ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

Protest by various organizations for the encounter of Anjali murder accused
ಅಂಜಲಿ ಹತ್ಯೆ ಆರೋಪಿಯ ಎನ್​ಕೌಂಟರ್​ಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ (ETV Bharat)

ಅಂಜಲಿ ಹತ್ಯೆ ಆರೋಪಿಯ ಎನ್​ಕೌಂಟರ್​ಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ (ETV Bharat)

ಹುಬ್ಬಳ್ಳಿ : ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಿರೀಶ ಎನ್‌ಕೌಂಟರ್‌ ಮಾಡುವಂತೆ ಆಗ್ರಹಿಸಿ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ನೇಹಾ ಹತ್ಯೆ ಬಳಿಕ ಈತ ಹಾಗೆ ಮಾಡುವೆ ಎಂದು ಹೇಳಿ ಕೊಲೆ ಮಾಡಿದ್ದಾನೆ. ಪೊಲೀಸರ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಹೀಗಾಗಿ ಪೊಲೀಸರ ನಿರ್ಲಕ್ಷ್ಯದಿಂದಲೇ ಕೊಲೆಯಾಗಿದೆ ಎಂದು ಆರೋಪಿಸಿ, ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅವಳಿ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು. ಭಾರತೀಯ ಮಾನವ ಅಧಿಕಾರ ಪರಿಷತ್, ಅಪ್ಪಾಜಿ ಜನ ಸೇವಾ ಟ್ರಸ್ಟ್, ಉತ್ತರ ಕರ್ನಾಟಕ ಜನಶಕ್ತಿ ಸೇನೆ, ವಿಪಿ ಗ್ರೂಪ್, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ, ಜೈ ಭೀಮ ಸಂಘ, ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಗಳು ಭಾಗಿಯಾಗಿದ್ದವು.

ಆರೋಪಿಯನ್ನು ತಕ್ಷಣವೇ ಎನ್‌ಕೌಂಟರ್ ಮಾಡಬೇಕು : ಅಂಜಲಿ ಹತ್ಯೆಯನ್ನು ಶ್ರೀ ರಾಮಸೇನೆ ಖಂಡಿಸುತ್ತದೆ. ಕೊಲೆ ಆರೋಪಿಯನ್ನು ತಕ್ಷಣವೇ ಎನ್‌ಕೌಂಟರ್ ಮಾಡಬೇಕು. ಸರ್ಕಾರಕ್ಕೆ ಎನ್‌ಕೌಂಟರ್ ಮಾಡೋಕ್ಕೆ ಆಗದಿದ್ದಲ್ಲಿ ನಮಗೆ ಒಪ್ಪಿಸಿ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದರು.

ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಸಂಘಟನೆಗಳು ಆರೋಪಿಗೆ ತಕ್ಕ ಶಿಕ್ಷೆ ನೀಡುತ್ತವೆ. ಸಿದ್ದರಾಮಯ್ಯನವರೇ ಇದನ್ನು ಪರ್ಸನಲ್ ಅಂತಾ ಹೇಳುತ್ತೀರಾ? ನೇಹಾ ಹತ್ಯೆಯಲ್ಲಿ ಹೇಳಿಕೆ ನೀಡಿದ ಹಾಗೆ ಇಲ್ಲೂ ನೀಡುತ್ತೀರಾ? ಸರ್ಕಾರ ನಮ್ಮ ಮಹಿಳೆಯರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಮಹಿಳೆಯರ ‌ರಕ್ಷಣೆಗಾಗಿ ಶ್ರೀ ರಾಮ‌ ಸೇನೆ‌ಯಿಂದ ಹೆಲ್ಪ್​ಲೈನ್ ಆರಂಭಿಸುತ್ತಿದ್ದೇವೆ ಎಂದರು.

ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರಿಂದ ಪ್ರತಿಭಟನೆ: ಅಂಜಲಿ ಹತ್ಯೆ ಮಾಡಿದ ಆರೋಪಿಗೆ ಎನ್​ಕೌಂಟರ್ ಮಾಡುವಂತೆ ಆಗ್ರಹಿಸಿ, ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶಿಲ್ದಾರ್​ ಕಚೇರಿವರೆಗೆ ಪ್ರತಿಭಟನೆ ಮಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಅಂಜಲಿ ಹತ್ಯೆ ಮಾಡಿರುವ ಆರೋಪಿಗೆ ಕೂಡಲೇ ಎನ್ ಕೌಂಟರ್ ಮಾಡಬೇಕು ಎಂದು ಒತ್ತಾಯ ಮಾಡಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಅಂಜಲಿ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಕೋಳಿ ಬೆಸ್ತ ಸಮಾಜದ ಪ್ರತಿಭಟನೆ - Protest Against Anjali Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.