ETV Bharat / state

ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

author img

By ETV Bharat Karnataka Team

Published : Feb 14, 2024, 12:33 PM IST

ಎಲ್ಲೆಡೆ 'ಮೋದಿ ಮತ್ತೊಮ್ಮೆ' ಎಂಬ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

modi-again-atmosphere-everywhere-says-bjp-state-president-vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ''ನಮ್ಮ ಮುಂದೆ ಲೋಕಸಭಾ ಚುನಾವಣೆಯ ಬಹುದೊಡ್ಡ ಸವಾಲಿದ್ದು, ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆ ಆಗುವ ಸಂದರ್ಭದಲ್ಲಿ ನಾವಿದ್ದೇವೆ. ಆದರೂ, ಇಡೀ ದೇಶ ಮತ್ತು ಕರ್ನಾಟಕದಲ್ಲಿ ಮೋದಿ ಮತ್ತೊಮ್ಮೆ ಎಂಬ ವಾತಾವರಣವಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಭೂಪಸಂದ್ರ ಮುಖ್ಯರಸ್ತೆ, ಸಂಜಯನಗರದಲ್ಲಿ ಇಂದು ಹೆಬ್ಬಾಳ ಮಂಡಲ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ''ರಾಜ್ಯದ 28 ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಬಿಜೆಪಿಗೆ ಹಿನ್ನಡೆ ಎಂಬಂತಿಲ್ಲ. 28ರಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಎಂಬ ವಾತಾವರಣ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರದ ದಕ್ಷ ಆಡಳಿತವೇ ಇದಕ್ಕೆ ಕಾರಣ'' ಎಂದರು.

BJP office
ಹೆಬ್ಬಾಳ ಮಂಡಲ ಕಾರ್ಯಾಲಯ ಉದ್ಘಾಟನಾ ಸಮಾರಂಭ

''ಈ ಕ್ಷೇತ್ರದಿಂದ ಬಿಜೆಪಿ ಅತ್ಯಧಿಕ ಮತಗಳಿಂದ ಜಯಭೇರಿ ಬಾರಿಸಲು ನಾವೆಲ್ಲರೂ ಸಹ ಒಗ್ಗಟ್ಟಾಗಿ, ಒಂದಾಗಿ ದುಡಿಯೋಣ. ಪ್ರತಿಯೊಬ್ಬರೂ ನಾವೇ ನರೇಂದ್ರ ಮೋದಿ ಎಂಬಂತೆ ಭಾವಿಸಿಕೊಂಡು ಕಾರ್ಯಕರ್ತರಾಗಿ ಶಕ್ತಿ ಹಾಕೋಣ'' ಎಂದು ಹುರಿದುಂಬಿಸಿದ ವಿಜಯೇಂದ್ರ, ''ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗುವ ಶುಭ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

BJP office
ಹೆಬ್ಬಾಳ ಮಂಡಲ ಕಾರ್ಯಾಲಯ ಉದ್ಘಾಟನಾ ಸಮಾರಂಭ

ಇದನ್ನೂ ಓದಿ: ನಮ್ಮ ಸಮಾಜಕ್ಕೆ ಆದ್ಯತೆ ಕೊಡುವುದು, ಬಿಡುವುದು ಹೈಕಮಾಂಡ್​ಗೆ ಬಿಟ್ಟಿದ್ದು: ಶಾಮನೂರು ಶಿವಶಂಕರಪ್ಪ

''8 ತಿಂಗಳ ಹಿಂದೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ನಾವು ನಿರೀಕ್ಷೆ ಮಾಡದೆ ಇದ್ದರೂ ಸಾಕಷ್ಟು ಹಿನ್ನಡೆ ಆಗಿತ್ತು. ಆಡಳಿತ ಪಕ್ಷದಲ್ಲಿ ಇದ್ದವರು 66 ಸ್ಥಾನ ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ನಾವು ಕೂತಿದ್ದೇವೆ. ಆದರೆ, ಈಗ ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ'' ಎಂದು ತಿಳಿಸಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸಹ-ಸಂಚಾಲಕ ಸಚ್ಚಿದಾನಂದಮೂರ್ತಿ, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ: ಮಂಡ್ಯ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿ ಹೆಗಲಿಗೆ: ಲೋಕಸಭೆಗೆ ಹೆಚ್​ಡಿಕೆ ಸ್ಪರ್ಧಿಸಲ್ಲವೆಂದ ದೇವೇಗೌಡರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.