ETV Bharat / state

ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಿದರೆ ಈ ಸರ್ಕಾರಕ್ಕೆ ನೋವಾಗುತ್ತದೆ: ಶಾಸಕ ಚನ್ನಬಸಪ್ಪ

author img

By ETV Bharat Karnataka Team

Published : Feb 14, 2024, 10:04 PM IST

Updated : Feb 14, 2024, 10:40 PM IST

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಶಿವಮೊಗ್ಗ ಗಲಾಟೆ, ಈದ್ ಮಿಲಾದ್ ವೇಳೆ ನಡೆದ ಅಹಿತಕರ ಘಟನೆಗಳ ಬಗ್ಗೆ ಶಾಸಕ ಚನ್ನಬಸಪ್ಪ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

MLA Channabasappa spoke in the assembly.
ಶಾಸಕ ಚನ್ನಬಸಪ್ಪ ವಿಧಾನಸಭೆಯಲ್ಲಿ ಮಾತನಾಡಿದರು.

ವಿಧಾನಸಭೆಯಲ್ಲಿ ಶಾಸಕ ಚನ್ನಬಸಪ್ಪ ಮಾತನಾಡಿದರು.

ಬೆಂಗಳೂರು: ಹಿಂದೂ ಧರ್ಮದ ಮೇಲೆ ದೌರ್ಜನ್ಯ ನಡೀತಿದೆ ಅಂದಾಗ ಇವರಿಗೆ ನೋವಾಗಿಲ್ಲ. ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಿದರೆ ಇವರಿಗೆ ನೋವಾಗುತ್ತೆ ಎಂದು ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ದೇಶದ್ರೋಹಿ ಚಟುವಟಿಕೆ ಮಾಡುವವರ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಿಲ್ಲ. ಯಾರು ಅವರವರ ಪಾಡಿಗೆ ಕೆಲಸ ಮಾಡ್ಕೊಂಡಿದ್ರೋ ಅವರನ್ನು ಬಂಧಿಸಿ ಗುಲ್ಬರ್ಗಾಕ್ಕೆ ಕಳಿಸ್ತಾರೆ ಎಂದು ಆಕ್ಷೇಪಿಸಿದರು.

ಶಿವಮೊಗ್ಗ ಸೂಕ್ಷ್ಮ ಪ್ರದೇಶ. ಬಾಂಬ್ ತಯಾರು ಮಾಡೋರು ಅಲ್ಲೇ ವಾಸವಿದ್ದಾರೆ. ಮನೆಗಳ ಮೇಲೆ ದಾಳಿ ಮಾಡಿದ್ರೂ, ಗೂಂಡಾಗಿರಿ ಮಾಡಿದ್ರೂ, ಕಾರುಗಳನ್ನು ಜಖಂ ಮಾಡಿದ್ರೂ, ಸಂತ್ರಸ್ತರಿಗೆ ಒಂದು ರೂಪಾಯಿ ಪರಿಹಾರ ಕೊಡ್ಲಿಲ್ಲ ಈ ಸರ್ಕಾರ. ಯಾಕೆ ಅವರೆಲ್ಲ ಹಿಂದೂಗಳು ಅಂತನಾ? ಇದನ್ನು ಕೇಳಿದರೆ ಕೋಮುವಾದಿಗಳು ಅಂತಾರೆ. ಗಲಾಟೆ ಮಾಡಿದವರು ಮುಸ್ಲಿಮರು, ಒಟ್ಟಿಗೆ ಮುಸ್ಲಿಂ ಗೂಂಡಾಗಳು ಸೇರಿ ಮನೆಗಳ ಮೇಲೆ ದುಷ್ಕೃತ್ಯ ನಡೆಸಿದರು. ಇದರಿಂದ ಲಕ್ಷಾಂತರ ರೂ ಹಾನಿಯಾಗಿದೆ ಎಂದು ವಿವರಿಸಿದರು.

ಲಾ ಆ್ಯಂಡ್ ಆರ್ಡರ್ ಇದೆಯೋ? ಚೆನ್ನಾಗಿದೆಯೋ?. ಯಾರ ಕುಮ್ಮಕ್ಕಿನಿಂದ ಗೂಂಡಾಗಳು ಬೆಳೆಯುತ್ತಿದ್ದಾರೆ?. ಸಿಕ್ಕಿಕೊಂಡಿರೋರು, ಎಫ್ಐಆರ್ ಹಾಕಿಸಿಕೊಂಡವರೆಲ್ಲ‌ ಮುಸ್ಲಿಮರೇ. ಆಸ್ಪತ್ರೆಗೆ ದಾಖಲಾದವರು ಹಿಂದೂಗಳು. ಸಿಗ್ನಲ್​​ನಲ್ಲಿ ಗಾಡಿ ಟಚ್ ಆಯ್ತು ಅಂತ ಹಿಂದೂ ಒಬ್ಬನ ಮೇಲೆ ಹಲ್ಲೆ ಆಗಿದೆ, ಆಸ್ಪತ್ರೆ ದಾಖಲಾಗಿದ್ದಾನೆ. ಶಿವಮೊಗ್ಗದಲ್ಲಿ ನಾಲ್ಕು ತಿಂಗಳಲ್ಲಿ ಎರಡು ಮರ್ಡರ್ ಆಗಿದೆ. ಕೊತ್ವಾಲ್ ರಾಮಚಂದ್ರನ ಕಾಲಕ್ಕೆ ಶಿವಮೊಗ್ಗದಲ್ಲಿ ರೌಡಿಸಂ ಮುಗಿದು ಹೋಯ್ತು ಅನ್ಕೊಂಡಿದ್ವು. ಆದ್ರೆ ಶಿವಮೊಗ್ಗದಲ್ಲಿ ರೌಡಿಗಳ ಹಾವಳಿ ಮತ್ತೆ ಶುರುವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಬುರ್ಕಾ ಹಾಕಿದ ಮಹಿಳೆ ಅಲ್ಲಾ ಹೋ ಅಕ್ಬರ್ ಅಂತ ಕೂಗಿದರು. ಮನಸ್ಸಿಗೆ ಬಂದಿದ್ದು ಮಾತಾಡಿದರು. ಆಕೆ ಮಗು ಜತೆ, ಸ್ಕೂಟಿ ಓಡಿಸ್ಕೊಂಡು ಬಂದಿದ್ದರು. ಪೊಲೀಸರ ಮಾನಸಿಕತೆ ಬದಲಾಗಿದೆ. ಶಿವಮೊಗ್ಗದಲ್ಲಂತೂ ಹದಗೆಟ್ಟಿದೆ. ತಕ್ಷಣ ಆ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ ಅಂತ ಎಸ್‌ಪಿ ಘೋಷಿಸಿ ಬಿಟ್ಟರು. ಆಕೆಯನ್ನು ಬಂಧಿಸಿ‌ ಮಾನಸಿಕ ಅಸ್ವಸ್ಥೆ ಅಂತಾರೆ. ಅಲ್ಲಾ ಹೋ ಅಕ್ಬರ್ ಅಂದಾಗ, ಬಾಯಿಗೆ ಬಂದಿದ್ದು ಮಾತಾಡಿದಾಗ ಆ ಮಹಿಳೆ ಮಾನಸಿಕತೆ ಸರಿ ಇತ್ತಾ ಎಂದು ಪ್ರಶ್ನಿಸಿದರು.

ಇದನ್ನೂಓದಿ: ಪರಿಷತ್‌ನಲ್ಲೂ ಪ್ರತಿಧ್ವನಿಸಿದ ಗೋಪಾಲಯ್ಯಗೆ ಕೊಲೆ ಬೆದರಿಕೆ ವಿಚಾರ

Last Updated : Feb 14, 2024, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.