ETV Bharat / state

ಬೆಂಗಳೂರು: ಮಹಿಳೆಯ ಕೊಂದು ಚಿನ್ನ, ಫೋನ್​, ಕಾರು ದೋಚಿ ಹಂತಕರು ಪರಾರಿ - WOMAN MURDER

author img

By ETV Bharat Karnataka Team

Published : Apr 20, 2024, 7:51 PM IST

ಮಹಿಳೆಯನ್ನು ಹತ್ಯೆಗೈದು ಚಿನ್ನಾಭರಣ, ಫೋನ್​ ಹಾಗೂ ಕಾರಿನೊಂದಿಗೆ ಹಂತಕರು ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು: ಮಹಿಳೆಯ ಕೊಂದು ಚಿನ್ನ, ಫೋನ್​, ಕಾರು ದೋಚಿ ಹಂತಕರು ಪರಾರಿ
ಬೆಂಗಳೂರು: ಮಹಿಳೆಯ ಕೊಂದು ಚಿನ್ನ, ಫೋನ್​, ಕಾರು ದೋಚಿ ಹಂತಕರು ಪರಾರಿ

ಬೆಂಗಳೂರು: ಮಹಿಳೆಯೊಬ್ಬರನ್ನ ಹತ್ಯೆಗೈದು ಚಿನ್ನಾಭರಣ, ಫೋನ್​ ಹಾಗೂ ಕಾರಿನೊಂದಿಗೆ ಹಂತಕರು ಪರಾರಿಯಾಗಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ನಗರದಲ್ಲಿ ನಡೆದಿದೆ. ಶೋಭಾ (48) ಕೊಲೆಯಾದ ಮಹಿಳೆ. ಮೃತಳ ಮಗಳು ಹರ್ಷಿತಾಳಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು. ತಾಯಿ ಮನೆಗೆ ಬಂದಿದ್ದ ಹರ್ಷಿತಾ ಗುರುವಾರವಷ್ಟೇ ಜೆ.ಪಿ. ನಗರದಲ್ಲಿರುವ ತನ್ನ ಗಂಡನ ಮನೆಗೆ ತೆರಳಿದ್ದರು.

ಶುಕ್ರವಾರ ಹರ್ಷಿತಾ, ತಾಯಿಗೆ ಎಷ್ಟು ಬಾರಿ ಫೋನ್‌ ಮಾಡಿದರೂ ಶೋಭಾ ಸ್ವೀಕರಿಸಿರಲಿಲ್ಲ. ನಂತರ ಅವರು ತನ್ನ ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡು, ಮನೆಗೆ ಬಂದು ನೋಡಿದಾಗ ಬೆಡ್ ರೂಮ್​ನಲ್ಲಿ ಶೋಭಾ ಮೃತದೇಹ ಪತ್ತೆಯಾಗಿದೆ. ಜೊತೆಗೆ ಆಕೆಯ ಚಿನ್ನದ ತಾಳಿ, ಸರ, ಮೊಬೈಲ್ ಫೋನ್​ ಹಾಗೂ ಕಾರು ನಾಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೊಡಿಗೇಹಳ್ಳಿ ಠಾಣಾ ಪೊಲೀಸರು, ಮೃತಳ ಮಗಳು ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಯಾರೋ ಮಾಡಿದ್ದ ಗಲಾಟೆಗೆ ಅಮಾಯಕ ಯುವಕನ ಮೇಲೆ‌ ಹಲ್ಲೆ - Assault on youth

ETV Bharat Logo

Copyright © 2024 Ushodaya Enterprises Pvt. Ltd., All Rights Reserved.