ETV Bharat / state

ದೇಶದಲ್ಲಿ 10 ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯತ್ತಿದೆ: ಸಂತೋಷ ಲಾಡ್ ವಾಗ್ದಾಳಿ

author img

By ETV Bharat Karnataka Team

Published : Feb 18, 2024, 6:25 PM IST

Updated : Feb 18, 2024, 7:22 PM IST

ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೀತಿದೆ. ಹತ್ತು ವರ್ಷದಲ್ಲಿ ಏನೇ ಉದ್ಘಾಟಿಸಿದ್ರೂ ಮೋದಿ ಒಬ್ಬರೇ. ಬಿಜೆಪಿಯಿಂದ ಬಡವರಿಗೆ ಅನುಕೂಲ ಅಗಿರುವ ಒಂದು ಕಾರ್ಯಕ್ರಮವೂ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆರೋಪಿಸಿದರು.

Minister Santosh Lad spoke to the media.
ಸಚಿವ ಸಂತೋಷ ಲಾಡ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಿಂದ ದೇಶದ ಬಡತನ ನಿರ್ಮೂಲನೆ ಆಗಲ್ಲ. ಬಿಜೆಪಿಯವರು ರಾಜಕೀಯ ಇಚ್ಛಾಶಕ್ತಿಗೋಸ್ಕರ ರಾಮ ಮಂದಿರ ಕಟ್ಟಿರೋದು ಎಂದು‌ ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದವರ ಜೊತೆ ‌ಮಾತನಾಡಿದ ಅವರು, ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರುವ ಜಾಗದಲ್ಲಿ ಇವರು ಮಂದಿರ ನಿರ್ಮಿಸಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದಾರೆ. ರಾಮ ಮಂದಿರದಿಂದ ನಿಮ್ಮ ಬಡತನ ನಿರ್ಮೂಲನೆ ಆಗಿದೆಯಾ‌? ಅದನ್ನು ಹೇಳಿ ಯಾಕೆ ವೋಟ್ ಕೇಳತೀರಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಸರ್ವಾಧಿಕಾರಿ ಧೋರಣೆ: ''ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೀತಿದೆ. ಹತ್ತು ವರ್ಷದಲ್ಲಿ ಏನೇ ಉದ್ಘಾಟನೆ ಮಾಡಿದ್ರು ಮೋದಿ ಒಬ್ಬರೇ. ದೇಶ ಹಳ್ಳ ಹಿಡಿದು ಹೋಗಿದೆ. ಈ ಅವಧಿಯಲ್ಲಿ ಬಡವರಿಗೆ ಅನುಕೂಲ ಅಗಿರುವ ಒಂದು ಕಾರ್ಯಕ್ರಮ ಇಲ್ಲ. ಇವರ ಸಾಧನೆ ಏನು? ಪೆಟ್ರೋಲ್, ಡಿಸೇಲ್ ರೇಟ್ ಕಡಿಮೆ ಆಗಿದೆಯಾ.? ಚುನಾವಣೆ ಬಂದಾಗ ಒಂದು ಅಜೆಂಡಾ ಸೆಟ್ ಮಾಡ್ತಾರೆ. ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ರೆ ಟಿವಿ ಆಫ್ ಮಾಡಿ ಬನ್ನಿ'' ಎಂದು ಬಿಜೆಪಿ ನಾಯಕರಿಗೆ ಸಚಿವ ಲಾಡ್​ ಸವಾಲು ಹಾಕಿದರು.

''ರಾಮ-ರಹೀಮ್, ಪಾಕಿಸ್ತಾನ -ಅಫ್ಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದ್ರು. ಹಾಗಿದ್ರೆ RDX ಹೇಗೆ ಬಂತು. ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಸೋತ ಕಮಲನಾಥ್ ಅವರನ್ನು ಬಿಜೆಪಿಗೆ ಸೆಳೆಯುತ್ತಿದ್ದಿರಿ. ಇದಕ್ಕೆಲ್ಲ ಅಂತ್ಯ ಇದೆ, ದೇವರಿದ್ದಾನೆ'' ಎಂದರು.

ಲೋಕಸಭೆಗೆ ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ: ''ಬಿಜೆಪಿ ಏನೂ ಮಾಡಿಲ್ಲ. ಜನ ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ರೆ ಬಿಜೆಪಿಯವರು ಗೆಲ್ಲಲ್ಲ. ಗ್ಯಾರಂಟಿ ತಪ್ಪಿಸೋಕೆ ರಾಮ-ರಹೀಮ್ ಬರ್ತಾರೆ. ಅಭಿವೃದ್ಧಿ ವಿಚಾರದ ಮೇಲೆ ಹೋದ್ರೆ ಬಿಜೆಪಿ ಗೆಲ್ಲಲ್ಲ. ಬರೋ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ವೋಟ್ ತಗೋತಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ. ಮೋದಿ ಸಾಹೇಬರು ಟಿವಿ ಮಾಧ್ಯಮ ನೆಚ್ಚಿಕೊಳ್ಳದೇ ವೋಟ್ ಕೇಳಲಿ'' ಎಂದು ಲಾಡ್​ ಸವಾಲು ಹಾಕಿದರು.

10 ವರ್ಷದಲ್ಲಿ ಬಿಜೆಪಿಯವರ ಸಾಧನೆ ಏನು: ''ಈ ದೇಶ ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ತೀದ್ದಾರೆ. ಈ ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ. ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಅಂತಿದ್ದಾರೆ. ಹಾಗಾದ್ರೆ ಬಿಜೆಪಿಯವರು ಏನು ಮಾಡಿದ್ದಾರೆ'' ಎಂದು ಪ್ರಶ್ನಿಸಿದರು.

ರೈತರ ಆದಾಯ ದುಪ್ಪಟ್ಟು ಆಯ್ತಾ : ''ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತಾಡಿದ್ರು. ಬರುವ 90 ದಿನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರು ಕೋಟಿ ಮನೆ ನಿರ್ಮಾಣ ಅಂದ್ರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಅಂತಾರೆ. ನರೇಗಾದಲ್ಲಿ ಇವರ ಸಾಧನೆ ಏನು? ಇವರು ಕಾಂಟ್ರವರ್ಸಿ ಬಗ್ಗೆ ಮಾತಾಡದೆ, ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ'' ಎಂದು ಆಗ್ರಹಿಸಿದರು.

ಇದನ್ನೂಓದಿ:ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿ ನಂಬರ್ ಒನ್​: ಸಂತೋಷ್ ಲಾಡ್ ಕಿಡಿ

Last Updated :Feb 18, 2024, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.