ETV Bharat / state

ಪಿಯುಸಿ ಫಲಿತಾಂಶ ಶೇ. 6 ರಷ್ಟು ಹೆಚ್ಚಿಗೆ ಬಂದಿರುವುದು ಖುಷಿ ತಂದಿದೆ: ಮಧು ಬಂಗಾರಪ್ಪ - PUC result

author img

By ETV Bharat Karnataka Team

Published : Apr 13, 2024, 1:56 PM IST

ಪ್ರಸ್ತುತ ಸಾಲಿನ ಪಿಯುಸಿ ಫಲಿತಾಂಶ ಶೇ. 6 ರಷ್ಟು ಹೆಚ್ಚಿಗೆ ಬಂದಿರುವುದು ಖುಷಿ ತಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಮಧು ಬಂಗಾರಪ್ಪ
ಮಧು ಬಂಗಾರಪ್ಪ

ಪಿಯುಸಿ ಫಲಿತಾಂಶ ಶೇ. 6 ರಷ್ಟು ಹೆಚ್ಚಿಗೆ ಬಂದಿರುವುದು ಖುಷಿ ತಂದಿದೆ

ಶಿವಮೊಗ್ಗ : ಈ ಬಾರಿಯ ಪಿಯುಸಿ ಫಲಿತಾಂಶ ಉತ್ತಮವಾಗಿ ಬಂದಿದ್ದು, ಶೇ 81.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷದ ಫಲಿತಾಂಶದಲ್ಲಿ ಶೇ 6 ರಷ್ಟು ಹೆಚ್ಚುವರಿ ಸಕ್ಸಸ್ ರೇಟ್ ಬಂದಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಸಚಿವನಾದ ಮೇಲೆ ಸಾಕಷ್ಟು ಟೀಕೆ - ಟಿಪ್ಪಣಿಗಳು ಬಂದವು. ಆದರೇ ನಾನು ಇದ್ಯಾವುದಕ್ಕೂ ಉತ್ತರ ನೀಡಲಿಲ್ಲ. ಶಿಕ್ಷಣ ಸಚಿವನಾದವನು ಮಕ್ಕಳಿಗೆ ಪಾಠ ಮಾಡುವವನಲ್ಲ. ಇಲಾಖೆ ನಡೆಸುವ ವ್ಯವಸ್ಥಾಪಕನಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು‌ ನಾನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ಶೇ 6 ರಷ್ಟು ಹೆಚ್ಚುವರಿ ಫಲಿತಾಂಶವನ್ನು ವಿದ್ಯಾರ್ಥಿಗಳು ನಮಗೆ ಕೊಡುಗೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ತಿಂಗಳ ಕೊನೆಯಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಬರಲಿದೆ. ಪಿಯುಸಿಯಲ್ಲಿ ಈಗ ಮೂರು ಪರೀಕ್ಷೆಯನ್ನು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಇದೇ ವೇಳೆ ಮಧು ಬಂಗಾರಪ್ಪ ತಿಳಿಸಿದರು.

ಇದನ್ನೂ ಓದಿ : ಪಿಯುಸಿ ಫಲಿತಾಂಶ; ಎಂದಿನಂತೆ ದಕ್ಷಿಣ ಕನ್ನಡವೇ ಫಸ್ಟ್​ - ಈ ಬಾರಿ ಗದಗ ಲಾಸ್ಟ್​​​: ಶೇ. 81.15ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ - 2nd Puc Results

ETV Bharat Logo

Copyright © 2024 Ushodaya Enterprises Pvt. Ltd., All Rights Reserved.