ETV Bharat / state

ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆ ಸಂಭ್ರಮ; 3 ಸಾವಿರ ಮಂದಿಗೆ ಭರ್ಜರಿ ಬಾಡೂಟ - ANKALA PARAMESHWARI

author img

By ETV Bharat Karnataka Team

Published : Mar 31, 2024, 8:12 PM IST

Updated : Mar 31, 2024, 8:29 PM IST

ಎರಡು ವರ್ಷಕೊಮ್ಮೆ ನಡೆಯುವ ಅಂಕಾಳ ಪರಮೇಶ್ವರಿ ಜಾತ್ರೆಯು ಭಾನುವಾರ ವಿಜೃಂಭಣೆಯಿಂದ ನಡೆದಿದೆ.

meat-meal-to-three-thousand-people-in-ankala-parameshwari-jatra-at-madhuvanalli-village
ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆ ಸಂಭ್ರಮ - 3 ಸಾವಿರ ಮಂದಿಗೆ ಭರ್ಜರಿ ಬಾಡೂಟ

ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆ ಸಂಭ್ರಮ; 3 ಸಾವಿರ ಮಂದಿಗೆ ಭರ್ಜರಿ ಬಾಡೂಟ

ಚಾಮರಾಜನಗರ: ಎತ್ತ ನೋಡಿದರತ್ತ ಜನಸಾಗರ, ಮಕ್ಕರಿಯಲ್ಲಿ ಮಾಂಸ ತುಂಬಿಕೊಂಡು ಬಗೆಬಗೆದು ವಿತರಿಸುತ್ತಿರುವ ಜನ, ಈ ಅದ್ಧೂರಿ ಆಚರಣೆ, ಭರ್ಜರಿ ಬಾಡೂಟ ಕಂಡುಬಂದಿದ್ದು ಅಂಕಾಳ ಪರಮೇಶ್ವರಿ ಜಾತ್ರೆಯಲ್ಲಿ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ 2 ವರ್ಷಕ್ಕೊಮ್ಮೆ ನಡೆಯುವ ಅಂಕಾಳ ಪರಮೇಶ್ವರಿ ಜಾತ್ರೆಯು ಭಾನುವಾರ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಮಂದಿ ಸಹಪಂಕ್ತಿ ಭೋಜನ ಸೇವನೆ ಮಾಡಿದರು.

meat meal to three thousand people in ankala parameshwari jatra at madhuvanalli village
ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆ ಸಂಭ್ರಮ - 3 ಸಾವಿರ ಮಂದಿಗೆ ಭರ್ಜರಿ ಬಾಡೂಟ

ಮಣ್ಣಿನಿಂದ ತಯಾರಿಸಿದ ದೇವರ ಮಂಟಪದಲ್ಲಿ ಅಂಕಾಳ ಪರಮೇಶ್ವರಿ ಮೂರ್ತಿ ತಯಾರಿಸಿ 48 ತಾಸು ಉಪವಾಸವಿದ್ದ ಅರ್ಚಕರಾದ ತಾಂಡವಶೆಟ್ಟಿ, ನಟರಾಜು, ಮಹಾದೇವಣ್ಣ ಎಂಬವರು ಪೂಜೆ ಸಲ್ಲಿಸಿದ ಬಳಿಕ 250ಕ್ಕೂ ಕುರಿ, ಮೇಕೆಗಳನ್ನು ಬಲಿ ಕೊಟ್ಟು ಎಲ್ಲರೂ ಸೇರಿ ಅಡುಗೆ ತಯಾರಿಸಿ 3 ಸಾವಿರಕ್ಕೂ ಅಧಿಕ ಮಂದಿಗೆ ಮಾಂಸದಡುಗೆ ಉಣಬಡಿಸಲಾಯಿತು. ಒಟ್ಟಿನಲ್ಲಿ, ಜಾತ್ರೆಗಳ ಸುಗ್ಗಿ ಕಾಲ ಇದಾಗಿದ್ದು, ವಿಶೇಷ ಆಚರಣೆ, ಬಾಡೂಟಗಳ ಮೂಲಕ ಗಡಿಜಿಲ್ಲೆ ಜನರು ಗಮನ ಸೆಳೆಯುತ್ತಿದ್ದಾರೆ.

ಈ ಕುರಿತು ಗ್ರಾಮದ ಮುಖಂಡ ವೆಂಕಟಶೆಟ್ಟಿ ಮಾತನಾಡಿ, ಎರಡು ವರ್ಷಕ್ಕೊಮ್ಮೆ 60 ಕುಟುಂಬಗಳ ನೇತೃತ್ವದಲ್ಲಿ ಈ ಆಚರಣೆ ನಡೆಯುತ್ತದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಜಾತ್ರೆಯಲ್ಲಿ ಪಾಲ್ಗೊಂಡು ಸಹಪಂಕ್ತಿ ಭೋಜನ ಸವಿಯುವುದು ಈ ಆಚರಣೆಯ ವಿಶೇಷವಾಗಿದೆ. ಈ ಬಾರಿ 250ಕ್ಕೂ ಹೆಚ್ಚು ಕುರಿ ಬಲಿ ಕೊಟ್ಟು 3 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕಲಬುರಗಿ: ಶರಣಬಸವೇಶ್ವರರ ವೈಭವದ ರಥೋತ್ಸವ - Kalaburagi Maharathotsava

Last Updated : Mar 31, 2024, 8:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.