ETV Bharat / state

ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಣು ಬಾಂಬ್​ ಸ್ಫೋಟದ ಅವಕಾಶ ಇದೆ: ಕೋಡಿಮಠದ ಶ್ರೀ ಹೊಸ ಭವಿಷ್ಯ

author img

By ETV Bharat Karnataka Team

Published : Jan 26, 2024, 10:59 PM IST

2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಅಣು ಬಾಂಬ್​ ಸ್ಪೋಟಿಸುವ ಅವಕಾಶ ಇದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ಹೇಳಿದ್ಧಾರೆ.

kodimatha-shivananda-sri-new-prediction
ಕೋಡಿಮಠದ ಶ್ರೀ ಹೊಸ ಭವಿಷ್ಯ

ಕೋಡಿಮಠದ ಶ್ರೀ ಹೊಸ ಭವಿಷ್ಯ

ಗದಗ: 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಬಾಂಬ್ ಸ್ಪೋಟದ ಸಂಭವ ಮತ್ತು ಯುದ್ಧದ ಭೀತಿ. ಅಸ್ಥಿರತೆ ಉಂಟಾಗುತ್ತದೆ. ಜನರು ತಲ್ಲಣವಾಗುತ್ತಾರೆ. ಭೂಕಂಪನ ಮತ್ತು ಜಲ ಕಂಟಕ ಎದುರಾಗಲಿದೆ. ಜಗತ್ತಿನ ದೊಡ್ಡ ಸಂತರೊಬ್ಬರ ಕೊಲೆಯಾಗುತ್ತದೆ. ಜಗತ್ತಿನಲ್ಲಿ ಒಂದಿಬ್ಬರ ಪ್ರಧಾನಿಗಳ ಸಾವು ಸಂಭವಿಸುವ ಲಕ್ಷಣ ಇದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಸಾಮಾನ್ಯವಾಗಿ ಸಂಕಾಂತ್ರಿ ಮೇಲೆ ಬರುವ ಭವಿಷ್ಯ, ಮತ್ತೊಂದು ಯುಗಾದಿ ಮೇಲೆ ಬರುವಂತ ಭವಿಷ್ಯ ಇರುತ್ತದೆ. ವ್ಯಾಪಾರ, ವಾಣಿಜ್ಯ ಮತ್ತು ಅಭಿವೃದ್ಧಿ ಕುರಿತು ಸಂಕಾಂತ್ರಿ ಮೇಲೆ ಬರುವ ಭವಿಷ್ಯ ಹೇಳಲಾಗುತ್ತದೆ. ಯುಗಾದಿ ಭವಿಷ್ಯಯಲ್ಲಿ ಸಮಗ್ರ ಸಮಗ್ರ ಮಳೆ, ಬೆಳೆ, ಜನರು, ರಾಜರು, ಏನಾಗುತ್ತದೆ ಎಂಬುವುದು ತಿಳಿಸಬಹುದು. ಆಗ ಸಂಪೂರ್ಣವಾಗಿ ಭವಿಷ್ಯ ಹೇಳಬಹುದು ಎಂದರು.

ಲೋಕಸಭೆ ಚುನಾವಣೆಯಲ್ಲಿ ಏನಾಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ಯುಗಾದಿ ಮೇಲೆ ಬಂದಾಗ ಸಂಪೂರ್ಣವಾಗಿ ಎಲ್ಲವನ್ನೂ ಹೇಳಬಹುದು. ಈಗ ರಾಜಕೀಯವಾಗಿ ಹೇಳುವಂತಹದ್ದು ಸುಸ್ಥಿತಿ ಅಲ್ಲ. ಆದರೆ, 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಅಣು ಬಾಂಬ್​ ಸ್ಫೋಟಿಸುವ ಅವಕಾಶ ಇದೆ. ಇದರಿಂದ ಜಗತ್ತಿಗೆ ವಿನಾಶ, ತೊಂದರೆ, ತಾಪತ್ರಯಗಳು ಆಗುತ್ತವೆ. ರೋಗ, ರುಜಿನುಗಳು ಉಂಟಾಗುತ್ತದೆ. ಜಗತ್ತಿಗೆ ಅಪಾಯ ಇದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯ- ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ: ಕೋಡಿಮಠ ಶ್ರೀ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.