ETV Bharat / state

ಸಿದ್ದು ಬಜೆಟ್​​ನಲ್ಲಿ ಯಾವ ಜಿಲ್ಲೆಗೆ ಏನೆಲ್ಲ ಸಿಕ್ತು: ಇಲ್ಲಿದೆ ಸಂಕ್ಷಿಪ್ತ ಮಾಹಿತಿ

author img

By ETV Bharat Karnataka Team

Published : Feb 16, 2024, 12:45 PM IST

Updated : Feb 16, 2024, 2:23 PM IST

ಸಿಎಂ ಸಿದ್ದರಾಮಯ್ಯ ಇಂದಿನ ಬಜೆಟ್​ನಲ್ಲಿ ಜಿಲ್ಲಾವಾರು ಸಂಬಂಧಿಸಿದಂತೆ ಹತ್ತು ಹಲವು ಮಹತ್ತರ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಬಜೆಟ್​
ಬಜೆಟ್​

ಬೆಂಗಳೂರು: ವಿತ್ತೀಯ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್​ ಮಂಡನೆ ಮಾಡಿದ್ದಾರೆ. 15ನೇ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್​ನಲ್ಲಿ ಎಲ್ಲ ಜಿಲ್ಲೆಗಳಿಗೆ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನ ತಮ್ಮ ದಾಖಲೆ ಬಜೆಟ್​ನಲ್ಲಿ ಹಲವು ಹೊಸ ಯೋಜನೆ ಪ್ರಕಟಿಸಿದ್ದಾರೆ. ಹೊಸ ಆಸ್ಪತ್ರೆಗಳ ನಿರ್ಮಾಣ, ಶಾಲೆಗಳ ಉನ್ನತೀಕರಣ, ಅಕಾಡಮಿಗಳ ಸ್ಥಾಪನೆ, ರೆಷ್ಮೆ ಮಾರುಕಟ್ಟೆ, ಮೆಟ್ರೋ ಮಾರ್ಗ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.

  • ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ-ಡೆಕ್ ನಿರ್ಮಾಣಕ್ಕೆ ಕ್ರಮ
  • ಬೆಂಗಳೂರು ಮೆಟ್ರೋ ಜಾಲಕ್ಕೆ 44 ಕಿಮೀ ಮಾರ್ಗ ಸೇರ್ಪಡೆ
  • ಬೆಂಗಳೂರು ಸಾರಿಗೆ 1334 ಹೊಸ ಇಲೆಕ್ಟ್ರಿಕ್ ಬಸ್‌ಗಳು, 820 ಬಿಎಸ್ -6 ಡಿಸೇಲ್ ಬಸ್‌ಗಳ ಸೇರ್ಪಡೆ
  • ಕಾವೇರಿ ಹಂತ ಐದನೇ ಯೋಜನೆ ಮೇ 2024ರಲ್ಲಿ ಕಾರ್ಯಾರಂಭ
  • 441 ಕೋಟಿ ವೆಚ್ಚದಲ್ಲಿ 7 ತಾಜ್ಯ ನೀರು ಸಂಸ್ಕರಣ ಘಟಕಗಳ ಉನ್ನತೀಕರಣ
  • ಬಿಬಿಎಂಪಿಗೆ ಸೇರಿದ 110 ಗ್ರಾಮಗಳಿಗೆ 200 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ
  • ಬೆಂಗಳೂರು ಸೇರಿ 10 ಪಾಲಿಕೆಗಳಲ್ಲಿ ರಾತ್ರಿ ವೇಳೆಯ ವ್ಯಾಪಾರ ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ ಒಂದು ಗಂಟೆ ವರಗೆ ವಿಸ್ತರಣೆ
  • ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ತುಮಕೂರು, ಕೆಜಿಎಫ್‌ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್
  • ಬೆಳಗಾವಿ ನಗರ ಪರಿಮಿತಿಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ 4.50 ಕಿಮೀ ಉದ್ದದ ಮೇಲ್ಸೆತುವೆ ನಿರ್ಮಾಣ
  • ಮಂಗಳೂರು ಬಂದರಿನಿಂದ ಬೆಂಗಳೂರುವರಗೆ ಹಾಗೂ ಬೆಂಗಳೂರಿನಿಂದ ಬೀದರ್‌ ನಡುವೆ ಆರ್ಥಿಕ ಅಭಿವೃದ್ಧಿ ಕಾರಿಡಾರ್
  • ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ಹೊಸ ಆಳಸಮುದ್ರ ಸರ್ವಋತು ಬಂದರು, ಪಾವಿನ ಕುರುವೆಯಲ್ಲಿ ಪಿಪಿಪಿ ಮಾದರಿಯಲ್ಲಿ ಎರಡನೇ ಬೃಹತ್ ಬಂದರು ಅಭಿವೃದ್ಧಿ
  • ಕಾರವಾರ, ಮಲ್ಪೆ, ಹಳೇ ಮಂಗಳೂರು ಬಂದರುಗಳಲ್ಲ ನಾಲ್ಕು ಬರ್ತ್​ಗಳ ಅಭಿವೃದ್ಧಿ
  • 1600 ಕೋಟಿ ರೂ. ವೆಚ್ಚದಲ್ಲಿ ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ
  • ವಿಜಯಪುರ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ
  • ರಾಯಚೂರು, ಕಾರವಾರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ
  • ಮಂಡ್ಯ ಮೈಶುಗರ್ ಕಾರ್ಖಾನೆ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ
  • ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್
  • ಬಳ್ಳಾರಿಯಲ್ಲಿ ಜೀನ್ಸ್ ಅಪಾರೆಲ್ ಪಾರ್ಕ್ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ
  • 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್
  • ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆಗೆ ಪ್ರೋತ್ಸಾಹಕ್ಕೆ ಕ್ರಮ
  • ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ಹುಬ್ಬಳ್ಳಿಯಲ್ಲಿ ಉದಯೊನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
  • ವಿವಿಧ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ, ತಾರಾಲಯಗಳ ಕಾಮಗಾರಿಗೆ 170 ಕೋಟಿ ರೂ.
  • ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ
  • ಹಿರೇಕೆರೂರು ತಾಲೂಕಿನಲ್ಲಿ ವಚನಕಾರ ಸರ್ವಜ್ಞ ಸ್ಮಾರಕ ನಿರ್ಮಾಣ
  • ಬೆಂಗಳೂರು ಉತ್ತರ ತಾಲೂಕಿನಲ್ಲಿ ಕ್ರೀಡಾ ನಗರ ಸ್ಥಾಪನೆ
  • 14 ಸ್ಥಳಗಳಲ್ಲಿ 35 ಕೋಟಿ ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ
  • ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟದ ಬಳಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ
  • 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್/ರೋಪ್‌ ವೆೇ ಸೌಲಭ್ಯ ಅಭಿವೃದ್ಧಿ
  • ಕಲಬುರಗಿಯಲ್ಲಿ ವಚನ ಮಂಟಪ
  • ಬೀದರ್ ಮತ್ತು ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆ ಪುನಶ್ಚೇತನಕ್ಕೆ 15 ಕೋಟಿ ನೆರವು
  • ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್​ಪ್ರಿಟೇಷನ್ ಸೆಂಟರ್ ನಿರ್ಮಾಣ
  • ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಡಳಿತ ಕಚೇರಿ, ಅಗತ್ಯವಿರುವಲ್ಲಿ ತಾಲೂಕು ಆಡಳಿತ ಕಚೇರಿ ನಿರ್ಮಾಣ
  • ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಮತ್ತು ಹುಲಗೆಮ್ಮ ದೇವಾಲಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ
  • ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಕ್ರಮ-43 ಸಿಇಎನ್‌ ಪೊಲೀಸ್ ಠಾಣೆಗಳ ಉನ್ನತೀಕರಣ
  • ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಹೈ ಸೆಕ್ಯುರಿಟಿ ಕಾರಾಗೃಹ ನಿರ್ಮಾಣ
  • ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕಿರ್ಣ ನಿರ್ಮಾಣ

ಆಸ್ಪತ್ರೆ ನಿರ್ಮಾಣ ಮತ್ತು ಕಟ್ಟಡ ಉನ್ನತೀಕರಣ

  1. ಆಯ್ದ 20 ಜಿಲ್ಲೆಗಳಲ್ಲಿ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳಾಗಿ ಮೇಲ್ದರ್ಜೆಗೆರಿಸಲು 10 ಕೋಟಿ ರೂ.
  2. ಏಳು ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್‌ ಕೇರ್‌ ಬ್ಲಾಕ್ ಕಟ್ಟಡ ನಿರ್ಮಾಣ
  3. 20 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಡೇ-ಕೇರ್‌ ಕಿಮೋಥರಪಿ ಕೇಂದ್ರ
  4. 638 ಕೋಟಿ ಅಂದಾಜು ವೆಚ್ಚದಲ್ಲಿ 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ
  5. 20 ಹೊಬಳಿಗಳಲ್ಲಿ ಹೊಸ ವಸತಿ ಶಾಲೆ ನಿರ್ಮಾಣ
  6. ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ Nephro-Urology ಆಸ್ಪತ್ರೆ 100 ಹಾಸಿಗೆಗೆ ಉನ್ನತೀಕರಣ
  7. ಕಲಬುರಗಿಯ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕ ಸ್ಥಾಪನೆ
  8. ಕೆ ಆರ್ ಆಸ್ಪತ್ರೆ ಆವರಣದಲ್ಲಿ 75 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೊರ ರೋಗಿ ವಿಭಾಗದ ಕಟ್ಟಡ ನಿರ್ಮಾಣ
  9. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸಿಲ್ಕ್ ಅಕಾಡಮಿ ಸ್ಥಾಪನೆ
  10. ಕಲಬುರಗಿ, ತಳಕಲ್, ವರುಣಾದಲ್ಲಿ 350 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ
  11. ಬಳ್ಳಾರಿ, ಚಿತ್ರದುರ್ಗ ಮತ್ತು ರೋಣದಲ್ಲಿ ಹೊಸ ಜಿಟಿಟಿಸಿ ಪ್ರಾರಂಭ
  12. ಮಂಗಳೂರಿನ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ
  13. ಬೀದರ್ ಗುರುದ್ವಾರ ಅಭಿವೃದ್ಧಿಗೆ 1 ಕೋಟಿ
  14. 280 ಕೋಟಿ ರೂ. ವೆಚ್ಚದಲ್ಲಿ ಏಳು ತಾಲೂಕುಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣ
  15. ಪುತ್ತೂರು ಪಶು ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ
  16. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ
  17. ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಪೈಸ್ ಪಾರ್ಕ್

ತೋಟಗಾರಿಕೆ ಕಾಲೇಜು ಸ್ಥಾಪನೆ ಘೋಷಣೆ

  • ತೋಟಗಾರಿಕೆ ಉತ್ತೇಜನಕ್ಕಾಗಿ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ
  • ವಿಜಯಪುರ ಅಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
  • ಹೊನ್ನಾವರ ಮೀನುಗಾರಿಕೆ ಸಂಶೋಧನಾ ಕೇಂದ್ರ
  • ಮುರಡೇಶ್ವರ ಹೊರಬಂದರು ನಿರ್ಮಾಣ
  • ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ರೆಷ್ಮೆ ಮಾರುಕಟ್ಟೆ ನಿರ್ಮಾಣದ ಎರಡನೆ ಹಂತದ ಕಾಮಗಾರಿಗೆ ಕ್ರಮ
  • ಖಾಸಗಿ ಸಹಭಾಗೀತ್ವದೊಂದಿಗೆ ಕೆಆರ್‌ಎಸ್ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಕೇಂದ್ರವಾಗಿ ನಿರ್ಮಾಣ
  • 56 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ
  • 116 ಕೋಟಿ ರೂ. ವೆಚ್ಚದಲ್ಲಿ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ
  • ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭ
  • ಕಲಬುರಗಿ ನಗರಕ್ಕೆ ಕುಡಿಯುವ ನೀರು ಪೂರೈಕೆ - ಬೆಣ್ಣತೋರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನೆ
  • ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ
  • ಬೆಂಗಳೂರಲ್ಲಿ ಹೊಸದಾಗಿ 44 ಕಿಮೀ ಮೆಟ್ರೋ ಮಾರ್ಗ
  • ರಾಯಚೂರು, ರಾಣೆಬೆನ್ನೂರಿನಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ
  • ಮಂಗಳೂರಿನಲ್ಲಿ 35 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ
  • ಕೊಪ್ಪಳ ಜಿಲ್ಲೆಯ ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಯೋಜನೆಗೆ ಆದ್ಯತೆ

ಶಿಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆಯೂ ಸಿಎಂ ಪ್ರಸ್ತಾಪಿಸಿದ್ದಾರೆ. ಇದೇ ರೀತಿ ಜಿಲ್ಲಾವಾರು ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹತ್ತು ಹಲವು ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಆದಾಯ ಕೊರತೆಯ ಬಜೆಟ್ ಮಂಡನೆ: 1,05,246 ಕೋಟಿ ರೂ. ಸಾಲದ ಮೊರೆ

Last Updated : Feb 16, 2024, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.