ETV Bharat / state

ಮಂಗಳೂರು: ಮಾ.8ರಿಂದ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ

author img

By ETV Bharat Karnataka Team

Published : Feb 24, 2024, 5:28 PM IST

ಪೆಡಲ್ ಸರ್ಫಿಂಗ್ ಸ್ಪರ್ಧೆ
ಪೆಡಲ್ ಸರ್ಫಿಂಗ್ ಸ್ಪರ್ಧೆ

ಮಂಗಳೂರಿನಲ್ಲಿ ಮಾರ್ಚ್​ 8 ರಿಂದ 10ರ ವರೆಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ.

ಮಂಗಳೂರು: ಅಸೋಸಿಯೇಶನ್ ಆಫ್ ಪೆಡಲ್ ಸರ್ಫ್ ಪ್ರೊಫೆಶನಲ್ಸ್ ಎಸಿಪಿ ವರ್ಲ್ಡ್ ವತಿಯಿಂದ ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ಮಾರ್ಚ್​ 8 ರಿಂದ 10ರ ವರೆಗೆ ಸಸಿಹಿತ್ಲು ಮುಂಡಾ ಬೀಚ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ.

ಸರ್ಫಿಂಗ್ ಸ್ಪರ್ಧೆ
ಸರ್ಫಿಂಗ್ ಸ್ಪರ್ಧೆ

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಸ್ಪರ್ಧೆ ಹಾಗೂ ಬೀಚ್ ಫೆಸ್ಟಿವಲ್ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ವಿಶ್ವ ರ‌್ಯಾಂಕಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

ಸರ್ಫಿಂಗ್ ಸ್ಪರ್ಧೆ
ಸರ್ಫಿಂಗ್ ಸ್ಪರ್ಧೆ

ಈ ಅಂತಾರಾಷ್ಟ್ರೀಯ ಸ್ಪರ್ಧೆಯು ನಮ್ಮ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಇಲ್ಲಿನ ಸ್ಪರ್ಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳೊಡನೆ ಸೆಣೆಸುವುದು ಮತ್ತು ಹೆಚ್ಚು ತಂತ್ರಗಾರಿಕೆ ಕಲಿಯಲು ಅವಕಾಶ ಸಿಗಲಿದೆ. ವಿಶ್ವ ಪ್ರಶಸ್ತಿ ವಿಜೇತ ಜಪಾನಿನ 17 ವರ್ಷ ಪ್ರಾಯದ ಶೂರಿ ಆರ್ಕಿ ಸ್ಪರ್ಧೆಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಪಣಂಬೂರು ಬೀಚ್​​ನಲ್ಲಿ ಗಮನಸೆಳೆದ ಸರ್ಫಿಂಗ್ ಚಾಂಪಿಯನ್‌ಶಿಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.