ETV Bharat / state

ಮೈಸೂರು: ಬರಗಾಲದಲ್ಲಿ ವರವಾಗಿ ಬಂದ ವರುಣ, ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ - heavy rain

author img

By ETV Bharat Karnataka Team

Published : May 11, 2024, 10:19 AM IST

ಧಾರಾಕಾರ ಮಳೆ ಸುರಿದ ಹಿನ್ನೆಲೆ ನಂಜನಗೂಡು ತಾಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಕಾಡುಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

HEAVY RAIN MYSURU  KADUBASAVESHWAR TEMPLE
ಬರಗಾಲದಲ್ಲಿ ವರವಾಗಿ ಬಂದ ವರುಣ: ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ (ETV Bharat)

ಭಾರಿ ಮಳೆ ಹಿನ್ನೆಲೆ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ (ETV Bharat)

ಮೈಸೂರು: ತೀವ್ರ ಬರಗಾಲದಲ್ಲಿ ವರುಣ ಕೃಪೆ ತೋರಿದ್ದಾನೆ. ವರುಣಾ ಕ್ಷೇತ್ರದಲ್ಲಿ ವರುಣನ ಪ್ರವೇಶಕ್ಕೆ ಜನರಲ್ಲಿ ಸಂತಸ ಮಾಡಿದೆ. ನಂಜನಗೂಡು ತಾಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಕಾಡುಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ರೈತರು ಅನ್ನದಾಸೋಹ ನೆರವೇರಿಸಿ ಗ್ರಾಮದಲ್ಲಿ ಹಬ್ಬದಂತೆ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನ ಹಾಗೂ ಜಾನುವಾರುಗಳಿಗೆ ಮಳೆರಾಯ ಕೃಪೆ ತೋರಿ ತಂಪೆರೆದಿದ್ದಾನೆ‌. ಸಂಕಷ್ಟದಲ್ಲಿದ್ದ ರೈತರಿಗೆ ವರವಾಗಿ ಬಂದ ವರುಣನ ಅಬ್ಬರಕ್ಕೆ ಗ್ರಾಮಸ್ಥರು ಮತ್ತು ರೈತರು ಖುಷಿಯಾಗಿದ್ದಾರೆ. ಈಶ್ವರಗೌಡನಹಳ್ಳಿ, ಬೀರಿಹುಂಡಿ, ಕೊಟ್ಟರಾಯನ ಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು 10 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ. ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಕಣಗಲೆ ಹೂವು ಸಾವು ತರುತ್ತಾ?: ಕೇರಳದ ಬಹುತೇಕ ದೇಗುಲಗಳಲ್ಲಿ ಕಣಗಲೆ ಹೂವಿನ ಬಳಕೆ ನಿಷೇಧ: ಈ ಪ್ಲವರ್​​ ಅಷ್ಟೊಂದು ಅಪಾಯಕಾರಿಯೇ? - Oleander Flowers ban in temple

ETV Bharat Logo

Copyright © 2024 Ushodaya Enterprises Pvt. Ltd., All Rights Reserved.