ETV Bharat / state

ಹುಬ್ಬಳ್ಳಿ: ಅಂಜಲಿ ಹತ್ಯೆ ಖಂಡಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ - Anjali s murder case

author img

By ETV Bharat Karnataka Team

Published : May 18, 2024, 6:29 PM IST

Updated : May 18, 2024, 9:07 PM IST

ವಿಶೇಷ ನ್ಯಾಯಾಲಯ ರಚಿಸಿ ನೇಹಾ, ಅಂಜಲಿ ಹತ್ಯೆ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಪರಿಹಾರ ಸಿಗದಿದ್ದರೆ ನಾವೆಲ್ಲರೂ ಸೇರಿ ಸಿಎಂ ಹತ್ತಿರ ಹೋಗಿ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

DC Divya Prabhu received the plea.
ಪ್ರತಿಭಟನಾ ವೇದಿಕೆಗೆ ಆಗಮಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ ಸ್ವೀಕರಿಸಿದರು. (ETV Bharat)

ಅಂಜಲಿ ಹತ್ಯೆ ಖಂಡಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. (ETV Bharat)

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾ ವೇದಿಕೆಗೆ ಆಗಮಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವಾಮೀಜಿಗಳಿಂದ ಮನವಿ ಸ್ವೀಕರಿಸಿದರು.

ಇದೇ ವೇಳೆ, ಪ್ರತಿಭಟನೆ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಎರಡು ಅಮಾನುಷ ಘಟನೆ ನಡೆದಿವೆ. ಸಮಾಜ ಹಾಗೂ ಕಾನೂನು ತಲೆ ತಗ್ಗಿಸುವುಂತಾಗಿದೆ. ಆರೋಪಿಗಳಿಗೆ ಕಾನೂನು ಭಯಯಿಲ್ಲದಿರುವುದು ಆಗಿದೆ. ನಿರ್ಲಕ್ಷ್ಯ ಮಾಡುವುದಾದರೆ ಪೊಲೀಸ್ ಇಲಾಖೆ ಯಾಕೆ ಬೇಕು. ಹೋರಾಟ ಹತ್ತಿಕ್ಕಲು ಪೊಲೀಸ್ ಇದೆಯೇ ಹೊರತು ಅನ್ಯಾಯ ಹತ್ತಿಕ್ಕಲು ಪೊಲೀಸ್ ಇಲಾಖೆ ಇಲ್ಲ ಎಂದು ಆರೋಪಿಸಿದರು.

ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ನೇಹಾ ಹತ್ಯೆಯಾದಾಗ ರಾಜ್ಯ ಸರ್ಕಾರ ಕಠಿಣ ಕಾನೂನು ತಂದಿಲ್ಲ. ಅಂಜಲಿ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ, ಮನೆ ಹಾಗೂ ಸರ್ಕಾರಿ ನೌಕರಿ ಕೊಡಬೇಕು. ವಿಶೇಷ ನ್ಯಾಯಾಲಯ ರಚಿಸಿ ಎರಡು ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಪರಿಹಾರ ಸಿಗದಿದ್ದರೆ ನಾವೆಲ್ಲರೂ ಸೇರಿ ಸಿಎಂ ಹತ್ತಿರ ಹೋಗಿ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.

ಮನಸೂರು ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅಂಜಲಿ ಕೊಲೆ ಆರೋಪಿಯನ್ನು ಸುಮ್ಮನೇ ಬಿಡುವುದು ಬೇಡ.
ಪೊಲೀಸರು ರಕ್ಷಕರಲ್ಲ ಭಕ್ಷಕರು. ನನ್ನ ಪ್ರಾಣ ಹೋದರು ಪರವಾಗಿಲ್ಲ. ನೇಹಾ ಹಾಗೂ ಅಂಜಲಿಗೆ ನ್ಯಾಯ ಕೊಡಿಸುತ್ತೇನೆ. ಸರ್ಕಾರಗಳು ಏನು ಮಾಡುತ್ತಾ ಇವೆ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದು ಎಚ್ಚರಿಕೆ ನಿಮಗೆ, ಸರ್ಕಾರಕ್ಕೆ ತಾಕತ್ ಇಲ್ವ. ಪೊಲೀಸರ ವೈಫಲ್ಯ ಎರಡು ಪ್ರಕರಣದಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಅಸ್ವಸ್ಥಗೊಂಡ ಅಂಜಲಿ ಸಹೋದರಿ: ಪ್ರತಿಭಟನಾ ವೇದಿಕೆ ಮೇಲೆ ಅಂಜಲಿ ಸಹೋದರಿ ಯಶೋಧಾ ಅಸ್ವಸ್ಥಗೊಂಡ ಘಟನೆ ನಡೆಯಿತು. ವೇದಿಕೆ ಮೇಲೆ ಅಂಜಲಿ ಸಹೋದರಿ ಯಶೋಧಾಗೆ ಜ್ಯೂಸ್ ಕುಡಿಸಿ ಸಂತೈಸಿದರು. ಅಳುತ್ತಿದ್ದ ಅಂಜಲಿ ಸಹೋದರಿಗೆ ಸ್ವಾಮೀಜಿಗಳು ಸಾಂತ್ವನ ಹೇಳಿದರು.

ಅಂಜಲಿ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆ: ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯುವತಿಯರ ಮತ್ತು ಮಹಿಳೆಯರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ರಾಜ್ಯಸರ್ಕಾರದ ಮೃದು ದೋರಣೆ ತೋರಿಸುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ನೇಹಾ ಪ್ರಕರಣದ ಆರೋಪಿ ಮತ್ತು ಅಂಜಲಿ ಅಂಬಿಗೇರ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ನಿರಂತರವಾಗಿ ಹತ್ಯೆ ಪ್ರಕರಣ ನಡೆದರೂ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿ ಮಾಡಬೇಕು. ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಇದನ್ನೂಓದಿ:ಅಂಜಲಿ ಕೊಲೆ ಪ್ರಕರಣ: ’ಅವನು‌ ಮಾಡಿದ್ದು, ಅವನೇ ಅನುಭವಿಸಬೇಕು’: ಆರೋಪಿ ತಾಯಿಯ ಪ್ರತಿಕ್ರಿಯೆ - WHAT SAYS ACCUSED MOTHER

Last Updated : May 18, 2024, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.