ETV Bharat / state

ಮೈಸೂರು: ನಂಜುಂಡೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹೆಚ್‌.ಡಿ.ರೇವಣ್ಣ - H D Revanna

author img

By ETV Bharat Karnataka Team

Published : May 17, 2024, 1:12 PM IST

Updated : May 17, 2024, 2:31 PM IST

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗುರುವಾರ ರಾತ್ರಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಹೆಚ್‌.ಡಿ. ರೇವಣ್ಣ ಪೂಜೆ
ಶ್ರೀ ನಂಜುಂಡೇಶ್ವರ ದೇಗುಲದಲ್ಲಿ ಹೆಚ್‌.ಡಿ. ರೇವಣ್ಣ (ETV Bharat)

ನಂಜುಂಡೇಶ್ವರನ ಸನ್ನಿಧಿಯಲ್ಲಿ ಹೆಚ್‌.ಡಿ.ರೇವಣ್ಣ ವಿಶೇಷ ಪೂಜೆ (ETV Bharat)

ಮೈಸೂರು: ಮಹಿಳೆಯ ಅಪಹರಣ ಆರೋಪ​ ಪ್ರಕರಣದಲ್ಲಿ ಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಗುರುವಾರ ರಾತ್ರಿ ದಕ್ಷಿಣ ಕಾಶಿ ನಂಜನಗೂಡಿಗೆ ಆಗಮಿಸಿ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಸೋಮವಾರ ರಾತ್ರಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಬಳಿಕ ಬೆಂಗಳೂರು ನಗರ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಹೊಳೆನರಸೀಪುರ ಮಹಿಳೆಯ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬೆಂಗಳೂರಿನ 42ನೇ ಎಸಿಎಂಸಿ ನ್ಯಾಯಾಲಯ ರೇವಣ್ಣಗೆ ಒಂದು ದಿನದ ಮಧ್ಯಂತರ ಜಾಮೀನು ನೀಡಿದೆ.

ಇದನ್ನೂ ಓದಿ: ಪ್ರಜ್ವಲ್ ಸಂಸದರಾಗಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ- ಹೆಚ್​ಡಿಕೆ: ನಮ್ಮ ಸಂಪರ್ಕಕ್ಕೂ ಬಂದಿಲ್ಲ, ಕುಟುಂಬದವರಿಗೂ ಮಾಹಿತಿ ಇಲ್ಲ- ಜಿಟಿಡಿ - GT Deve Gowda on Prajwal Revanna

Last Updated : May 17, 2024, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.