ETV Bharat / state

ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಹೇಳಿಕೆ: ಕ್ಷಮೆ ಯಾಚಿಸಿದ ಅಶೋಕ್

author img

By ETV Bharat Karnataka Team

Published : Feb 23, 2024, 6:40 AM IST

ಸದನದಲ್ಲಿ ಬಜರಂಗದಳದ ಬಗ್ಗೆ ತಾವು ಆಡಿದ ಮಾತುಗಳಿಗೆ ವಿಪಕ್ಷ ನಾಯಕ ಆರ್​. ಅಶೋಕ್​ ಅವರು ಕ್ಷಮೆ ಯಾಚಿಸಿದ್ದಾರೆ.

Opposition leader R Ashok
ವಿಪಕ್ಷ ನಾಯಕ ಆರ್​. ಅಶೋಕ್​

ಬೆಂಗಳೂರು: ರಾಮನಗರ ಪ್ರಕರಣದಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸದನದಲ್ಲಿ ಮಾತನಾಡುವ ವೇಳೆ ನಮ್ಮ ಅವಧಿಯಲ್ಲಿ ನಡೆದಿದ್ದ ಪಬ್ ಗಲಾಟೆ ವೇಳೆ ಹಿಂದೂಪರ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎನ್ನುವ ಹೇಳಿಕೆ ನೀಡಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕ್ಷಮೆ ಯಾಚಿಸಿದ್ದಾರೆ.

ಸದನದಲ್ಲಿ ಅಶೋಕ್ ನೀಡಿದ್ದ ಹೇಳಿಕೆ ಖಂಡಿಸಿ ವಿಹೆಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ದೂರು ನೀಡಿದರು. ಅಶೋಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದರ ಬೆನ್ನಲ್ಲೇ ಅಶೋಕ್ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಿದ್ದಾರೆ. "ನಾನೂ ಕೂಡ ಬಜರಂಗದಳದ ಕಾರ್ಯಕರ್ತನಾಗಿದ್ದವನು, ನನ್ನ ಹೇಳಿಕೆಯಿಂದ ಬಜರಂಗದಳದವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ" ಎಂದರು.

"ರಾಮನಗರ ಮುಸ್ಲಿಂ ಲಾಯರ್, ಜ್ಞಾನವಾಪಿ‌ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಸದನದಲ್ಲಿ ಪ್ರಶ್ನೆ ಮಾಡಿದ್ದೆ. ಮಂಗಳೂರಿನ ಶಿಕ್ಷಕಿ ರಾಮನ ಬಗ್ಗೆ ಅವಹೇಳನವಾಗಿ ಹೇಳಿದ್ದನ್ನು ಪ್ರಸ್ತಾಪಿಸಿದ್ದೆ, ಆ ಸಂದರ್ಭದಲ್ಲಿ ನಾನೂ ಕೂಡ ಗೃಹಸಚಿವ ಆಗಿದ್ದವನು. ನಾನೂ ಕೂಡ ಬಜರಂಗದಳ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದೆ ಅಂತ ಹೇಳಿದ್ದೆ. ಅದು ಬಜರಂಗದಳದವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನೂ ಕೂಡ ಹತ್ತು ವರ್ಷ ಬಜರಂಗದಳದ ಕಾರ್ಯಕರ್ತ ಆಗಿದ್ದೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದರು.

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ವಿಜಯೇಂದ್ರಗೆ ವಿಹೆಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದೂರು ನೀಡಿದ್ದರು. "ಅಧಿವೇಶನ ಸಂದರ್ಭದಲ್ಲಿ ಅಶೋಕ್ ಅವರು ಮಂಗಳೂರಿನ ಶಿಕ್ಷಕಿ ರಾಮನ ಬಗ್ಗೆ ಅವಹೇಳನವಾಗಿ ಹೇಳಿದ್ದಾರೆ. ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ. ಹಿಂದೂ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಅಂತ ಹೇಳಿದ್ದಾರೆ. ವಿಹೆಚ್‌ಪಿ ಇದನ್ನು ಬಲವಾಗಿ ಖಂಡಿಸುತ್ತದೆ. ನಮ್ಮದು ಗೋ ಮಾತೆ, ಮಹಿಳೆಯರ ಪರ ಕೆಲಸ ಮಾಡುವ ಸಂಘಟನೆ. ಅಂತ‌ಹ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿರೋದಾಗಿ ಹೇಳಿದ್ದು ಮನಸ್ಸಿಗೆ ಬೇಸರ ಆಗಿದೆ. ಹಾಗಾಗಿ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದ್ದೇವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅಶೋಕ್ ಅವರನ್ನು ಪ್ರತಿಪಕ್ಷ ನಾಯಕರ ಸ್ಥಾನದಿಂದ ತೆಗೆಯಬೇಕು. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ" ಎಂದು ಒತ್ತಾಯಿಸಿದ್ದರು.

"ಅಶೋಕ್ ನಮ್ಮದೇ ವೈಚಾರಿಕ ಇರೋ ಪಕ್ಷದವರು. ಅವರ ಸಮರ್ಥನೆ ಸರಿಯಲ್ಲ. ಹಿಂದೂ ವಿರೋಧಿ ಹೇಳಿಕೆ ಸರಿಯಲ್ಲ. ಶಿಕ್ಷಕಿ ಮೇಲೆ ಕ್ರಮ ತೆಗೆದುಕೊಳ್ಳೋ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅದು ಬಿಟ್ಟು ಹಿಂದೂ ಸಂಘಟನೆ ಮೇಲೆ ಕ್ರಮ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಇದು ಸರಿಯಲ್ಲ. ಕೇಂದ್ರದ ನಾಯಕರನ್ನೂ ಭೇಟಿಯಾಗುತ್ತೇವೆ. ಪತ್ರದ ಮೂಲಕ ಅಶೋಕ್ ವಿರುದ್ಧ ದೂರು ಕೂಡ ನೀಡಲಿದ್ದೇವೆ" ಎಂದು ಹೇಳಿದ್ದರು.

ಇದನ್ನೂ ಓದಿ: ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತು ಮಾಡಿ: ಆರ್.ಅಶೋಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.