ETV Bharat / state

ಕೈ ತಪ್ಪಿದ ಎಂಎಲ್​ಸಿ ಟಿಕೆಟ್​: ಮಂಡ್ಯ ಸಭೆ ನಂತರ ಮುಂದಿನ ನಿರ್ಧಾರ ಎಂದ ಶ್ರೀಕಂಠೇಗೌಡ - k t SrikantheGowda

author img

By ETV Bharat Karnataka Team

Published : May 15, 2024, 9:07 PM IST

Updated : May 15, 2024, 9:21 PM IST

ಜೆಡಿಎಸ್​ ಈ ಹಿಂದೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿತ್ತು. ಆದರೆ, ಈಗ ಟಿಕೆಟ್​ ನಿರಾಕರಣೆ ಮಾಡಿದೆ ಎಂದು ಮಾಜಿ ಎಂಎಲ್​ಸಿ ಶ್ರೀಕಂಠೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಕಂಠೇಗೌಡ
ಶ್ರೀಕಂಠೇಗೌಡ (ETV Bharat)

ಶ್ರೀಕಂಠೇಗೌಡ (ETV Bharat)

ಮೈಸೂರು: ಪಕ್ಷ ಈ ಹಿಂದೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿತ್ತು, ಆದರೆ ಈಗ ಟಿಕೆಟ್​ ನಿರಾಕರಣೆ ಮಾಡಿದೆ. ಯಾವ ಕಾರಣಕ್ಕೆ ಟಿಕೆಟ್​ ನಿರಾಕರಿಸಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ, ಇದು ಯಕ್ಷಪ್ರಶ್ನೆಯಾಗಿದೆ ಎಂದು​ ಮಾಜಿ ಎಂಎಲ್​ಸಿ ಶ್ರೀಕಂಠೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರ ಸಂಬಂಧ ಇವತ್ತು ಶಿಕ್ಷರ ಸಭೆ ಆಯೋಜನೆ ಮಾಡಿದ್ದೆ. ನಂಜರಾಜ ಅರಸ್​ ಸೇರಿದಂತೆ ಅನುಭವಿ ಶಿಕ್ಷಕರ ವೃಂದ ಸಭೆಯಲ್ಲಿ ಪಾಲ್ಗೊಂಡಿತ್ತು. ಅವರೆಲ್ಲರೂ ಸ್ವಾಭಿಮಾನಿ ಶಿಕ್ಷಕರ ವೇದಿಕೆಯಿಂದ ನೀವು ಸ್ಪರ್ಧೆ ಮಾಡಬೇಕು ಎಂದು ಒಕ್ಕೊರಲಿನ ನಿರ್ಣಯ ಮಾಡಿದ್ದಾರೆ. ಮಂಡ್ಯ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಮಾಡಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದರು.

ಪಕ್ಷ ಯಾಕೆ ಟಿಕೆಟ್​ ನಿರಾಕರಿಸಿತು ಎಂಬ ಬಗ್ಗೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತೇನೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್​ ಈ ಹಿಂದೆ ಗೆದ್ದಿಲ್ಲ, ಕಾಂಗ್ರೆಸ್​ಗೂ ಶಿಕ್ಷಕರಿಗೂ ಆಗಿ ಬರುವುದಿಲ್ಲ, ಕಾಂಗ್ರೆಸ್​ಗೂ ನೌಕರರಿಗೂ ಆಗಿಬರುವುದಿಲ್ಲ. ಇಲ್ಲಿ ಗೆದ್ದಿರುವುದು ಜೆಡಿಎಸ್​ ಮತ್ತು ಬಿಜೆಪಿ ಮಾತ್ರ. ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ ಮತ್ತು ಶಿಕ್ಷಕ ಮತದಾರರಿಗೆ ಆದ್ಯತೆಯ ಮೇರೆಗೆ ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳಿಗೂ ಮತ ಹಾಕುವ ಅವಕಾಶ ಇದೆ. ಹೀಗಾಗಿ ನನಗೆ ಆದ್ಯತೆಯ ಮೇರೆ ಒಂದಲ್ಲ, ಎರಡನೇ ಮತ ಹಾಕುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ ಟಿಕೆಟ್​ಗೆ ಕೆ.ಟಿ.ಶ್ರೀಕಂಠೇಗೌಡ ಪಟ್ಟು - K T Srikantegowda

Last Updated : May 15, 2024, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.