ETV Bharat / state

ಕೆ ಆರ್ ನಗರ ಮಹಿಳೆಯನ್ನ ಕರೆದುಕೊಂಡು ಹೋದವರ ಮಾಹಿತಿ ಇದೆ: ಸಾ ರಾ ಮಹೇಶ್ - Former minister S R Mahesh

author img

By ETV Bharat Karnataka Team

Published : May 13, 2024, 9:14 PM IST

Updated : May 13, 2024, 9:35 PM IST

ಸತೀಶ್ ಬಾಬು ಅವರನ್ನು ಎಸ್‌ಐಟಿ ವಶಕ್ಕೆ ಪಡೆದ ಬಗ್ಗೆ ಮಾಜಿ ಸಚಿವ ಸಾ. ರಾ ಮಹೇಶ್ ಅವರು ಮಾತನಾಡಿದರು.

s-r-mahesh
ಮಾಜಿ ಸಚಿವ ಸಾ. ರಾ ಮಹೇಶ್ (ETV Bharat)

ಮಾಜಿ ಸಚಿವ ಸಾ. ರಾ ಮಹೇಶ್ (ETV Bharat)

ಮೈಸೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ. ಆರ್ ನಗರ ಮಹಿಳೆ ಅಪಹರಣ ಪ್ರಕರಣದ ಎಫ್​ಐಆರ್ ದಾಖಲಾಗುವ ಮುನ್ನವೆ ಸತೀಶ್ ಬಾಬು ಅವರನ್ನು ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು ಎಂದು ಮಾಜಿ ಸಚಿವ ಸಾ. ರಾ ಮಹೇಶ್ ಹೇಳಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಆರ್ ನಗರದ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ರಾತ್ರಿ 9.5 ನಿಮಿಷಕ್ಕೆ ಪ್ರಕರಣ ದಾಖಲಾಗಿದೆ. ಆದರೆ, ಅದಕ್ಕೂ ಮುನ್ನ ಮಧ್ಯಾಹ್ನ 12ರ ಸಮಯದಲ್ಲಿ ಸತೀಶ್ ಬಾಬು ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಇದಕ್ಕೆ ನಮ್ಮಲ್ಲಿ ಸಾಕ್ಷಿಗಳಿವೆ ಎಂದು ಅಚ್ಚರಿ ಮಾಹಿತಿ ಹೊರ ಹಾಕಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಅವರನ್ನು ಕರೆದ್ಯೊಯುತ್ತಿರುವ ವಿಡಿಯೋ ದಾಖಲೆ ನಮ್ಮ ಬಳಿ ಇದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಡಿಲಿಟ್ ಮಾಡಿಕೊಟ್ಟಿದ್ದಾರೆ. ಆದರೆ, ಮತ್ತೊಬ್ಬ ಮೊಬೈಲ್ ವಿಡಿಯೋ ಮಾಡಿ ಅದನ್ನು ಬೇರೊಬ್ಬರಿಗೆ ಕಳುಹಿಸಿದ್ದಾನೆ. ಮೈಸೂರಿನಿಂದ ಸಬ್​ ಇನ್‌ಸ್ಪೆಕ್ಟರ್​ವೊಬ್ಬರು ಆಲ್ಟೊ ಕಾರಿನಲ್ಲಿ ಹೋಗಿ ದಾಖಲೆಗಳನ್ನು ನಾಶ ಮಾಡಿದ್ದಾರೆ. ಇಷ್ಟೆಲ್ಲ ಸಾಕ್ಷಿಗಳು ನಮ್ಮ ಬಳಿ ಇದ್ದು, ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.

ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಹುಡುಗ ಅಮಾಯಕನಾಗಿದ್ದು, ಆತನಿಗೆ ಹಣ ನೀಡಿ ಖಾಲಿ ಪೇಪರ್‌ನಲ್ಲಿ ಸಹಿ ಪಡೆದುಕೊಂಡಿದ್ದಾರೆ. ದೂರು ಕೊಟ್ಟ ಯುವಕ ಈಗ ಎಲ್ಲಿದ್ದಾನೆ?, ಎಲ್ಲಿಗೆ ಹೋಗಿದ್ಧಾನೆ ಎಂದು ಪ್ರಶ್ನಿಸಿದರು.

ದೂರು ಕೊಟ್ಟ ಯುವಕ ಈವರೆಗೂ ಆತ ಎಲ್ಲಿ ಹೋಗಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ. ಆ ಮಹಿಳೆ ಬಳಿಯೂ ಈವರೆಗೆ 164ಎ ಹೇಳಿಕೆ ಏಕೆ ದಾಖಲಿಸಿಲ್ಲ. ಆಕೆ ತೋಟದ ಮನೆಗೆ ಹೋಗಿದ್ದು ಸತ್ಯ. ಇದಕ್ಕೆ ಅಲ್ಲಿರುವವರು ಸಾಕ್ಷಿ ಇದ್ದಾರೆ. ಅವರು ಹೇಳುವಂತೆ ಆಕೆ ಕುರಿ ಕಾಯುವಿಕೆ ಕೆಲಸ ಮಾಡುತ್ತಿದ್ದಳು. ಕುರಿ ಕಾಯುತ್ತಿದ್ದ ಮೇಲೆ ಕಿಡ್ನ್ಯಾಪ್​ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ ಎಂದು ಸಾ. ರಾ ಮಹೇಶ್ ಹೇಳಿದರು. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವಂತೆ ಹೆಚ್. ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮಲ್ಲಿ ವಿವೇಕಾನಂದ, ಕೆ. ಟಿ ಶ್ರೀಕಂಠೇಗೌಡ ಇಬ್ಬರೂ ಆಕಾಂಕ್ಷಿಗಳಿದ್ದಾರೆ. ಯಾರು ಅಭ್ಯರ್ಥಿ ಅಂತಾ ಪೈನಲ್ ಮಾಡಿ ನಾಮಿನೇಷನ್ ಮಾಡಿಸುತ್ತೇವೆ ಎಂದರು.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್​ಐಟಿ ಚಿಂತನೆ - Prajwal Revanna

Last Updated : May 13, 2024, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.