ETV Bharat / state

ಗಂಗಾವತಿ: ಸ್ಥಳೀಯರೊಂದಿಗೆ ಬಣ್ಣದೊಕುಳಿ ಆಡಿ ಸಂಭ್ರಮಿಸಿದ ವಿದೇಶಿಯರು - Foreigners celebrate Holi

author img

By ETV Bharat Karnataka Team

Published : Mar 26, 2024, 8:29 PM IST

ಆನೆಗೊಂದಿ - ಸಣಾಪುರ ಸೇರಿದಂತೆ ಸುತ್ತಲಿನಲ್ಲಿ ಪ್ರವಾಸಕ್ಕೆಂದು ಬಂದಿದ್ದ ವಿದೇಶಿಗರು ಸ್ಥಳೀಯರೊಂದಿಗೆ ಬಣ್ಣದೊಳಿಕೆ ಆಡಿ ಸಂತಸ ಪಟ್ಟರು.

ಬಣ್ಣದೊಕುಳಿ ಆಡಿ ಸಂಭ್ರಮಿಸಿದ ವಿದೇಶಿಯರು
ಬಣ್ಣದೊಕುಳಿ ಆಡಿ ಸಂಭ್ರಮಿಸಿದ ವಿದೇಶಿಯರು

ಗಂಗಾವತಿ: ಸ್ಥಳೀಯರೊಂದಿಗೆ ಬಣ್ಣದೊಕುಳಿ ಆಡಿ ಸಂಭ್ರಮಿಸಿದ ವಿದೇಶಿಯರು

ಗಂಗಾವತಿ : ಹಂಪಿ - ಆನೆಗೊಂದಿಯಂತ ಐತಿಹಾಸಿಕ ತಾಣಗಳಿಗೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿಗರು ಸ್ಥಳೀಯರೊಂದಿಗೆ ಮಂಗಳವಾರ ಹೋಳಿ ಹಬ್ಬದ ಪ್ರಯುಕ್ತ ಬಣ್ಣದೊಕುಳಿಯಲ್ಲಿ ಮಿಂದೆದ್ದರು.

ತಾಲೂಕಿನ ಆನೆಗೊಂದಿ - ಸಣಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ರೆಸಾರ್ಟ್​ಗಳಲ್ಲಿ ಉಳಿದುಕೊಂಡಿದ್ದ ನೂರಾರು ವಿದೇಶಿಗರು, ಬಣ್ಣದಾಟದಲ್ಲಿ ಭಾಗಿಯಾಗಿ ಭಾರತೀಯ ಸಂಸ್ಕೃತಿ, ಹಬ್ಬ- ಆಚರಣೆಗೆ ಮಾರು ಹೋದರು. ಪರಸ್ಪರ ತಮ್ಮ ಸಂಗಾತಿಗಳಿಗೆ ಬಣ್ಣ ಹಚ್ಚುವ ಮೂಲಕ ವಿದೇಶಿಯರು ಹೋಳಿ ಹಬ್ಬವನ್ನು ಆಚರಿಸಿದರು. ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾಗಿ ಸ್ಥಳೀಯ ಯುವಕರೊಂದಿಗೆ ಮೋಜು - ಮಸ್ತಿ, ನೃತ್ಯ ಮಾಡಿ ಗಮನ ಸೆಳೆದರು. ಅಲ್ಲದೆ, ನೆರೆ - ಹೊರೆ ರಾಜ್ಯದ ನೂರಾರು ಪ್ರವಾಸಿಗರು ಭಾಗಿಯಾಗಿದ್ದರು. ಕೆಲ ರೆಸಾರ್ಟ್​ ಮಾಲೀಕರು, ಡಿಜೆ ಸಂಗೀತ ಹಾಗೂ ಮೆರವಣಿಗೆ ಆಯೋಜಿಸಿದ್ದರು.

ಹೋಳಿಯಲ್ಲಿ ಮಿಂದೆದ್ದ ಮಹಿಳೆಯರು ಮತ್ತು ಮಕ್ಕಳು
ಹೋಳಿಯಲ್ಲಿ ಮಿಂದೆದ್ದ ಮಹಿಳೆಯರು ಮತ್ತು ಮಕ್ಕಳು

ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಜರ್ಮನಿ ಮುಖ್ಯವಾಗಿ ಇಸ್ರೇಲ್​ನಿಂ ದೊಡ್ಡ ಪ್ರಮಾಣ ಪ್ರವಾಸಿಗರು ಹಂಪಿ - ಆನೆಗೊಂದಿಗೆ ಭೇಟಿ ನೀಡುತ್ತಾರೆ. ಪ್ರತಿವರ್ಷ ನವಂಬರ್ - ಡಿಸೆಂಬರ್​ನಲ್ಲಿ ವಿದೇಶಿಗರು ಆನೆಗೊಂದಿಗೆ ಬರಲಾರಂಭಿಸುತ್ತಾರೆ. ಇಲ್ಲಿನ ವಾತಾವರಣದಲ್ಲಿ ಬದಲಾವಣೆಯಾಗಿ ಉಷ್ಣಾಂಶ ಏರಿಕೆಯಾಗುತ್ತಿದ್ದಂತೆಯೆ ಜನವರಿ - ಫೆಬ್ರವರಿ ತಿಂಗಳಲ್ಲಿ ವಿದೇಶಿಗರು ಮರಳಿ ತಮ್ಮ ತಾಯ್ನಾಡಿನತ್ತ ಪ್ರಯಾಣಿಸುತ್ತಾರೆ. ಉಳಿದ ಕೆಲವರು ಹೋಳಿ ಆಡಿದ ಬಳಿಕ ತಮ್ಮ ದೇಶಕ್ಕೆ ಇಲ್ಲವೇ ಮತ್ತೊಂದು ಪ್ರವಾಸಿ ತಾಣ ಹುಡುಕಿಕೊಂಡು ಹೋಗುತ್ತಾರೆ.

ಮಹಿಳೆಯರು ಮತ್ತು ಮಕ್ಕಳ ಹೋಳಿ ಆಚರಣೆ : ಜಯನಗರ, ಸತ್ಯನಾರಾಯಣ ಪೇಟೆ ಸೇರಿದಂತೆ ನಾನಾ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಅದ್ಧೂರಿಯಾಗಿ ಹೋಳಿ ಆಚರಿಸಿದರು. ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ನೃತ್ಯ, ಹಾಡುಗಳ ಮೂಲಕ ಸಂತಸ ಹಂಚಿಕೊಂಡರು.

ಹಿಮಾಲಯದಲ್ಲಿ ಬಣ್ಣದ ಹಬ್ಬ : ಹಿಮಾಲಯದ ತಪ್ಪಲಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಗಂಗಾವತಿ ಯುವಕರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ನೆಲಮಟ್ಟದಿಂದ ಸುಮಾರು ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಕುಲು - ಮನಾಲಿಯ ಸೇರಿದಂತೆ ನಾನಾ ಭಾಗದಲ್ಲಿ ಪ್ರವಾಸ ಕೈಗೊಂಡ ಯುವಕರು, ಸಿಸುವ್ಯಾಲಿ ಎಂಬಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಂಡದ ಸದಸ್ಯ ಜಿ.ಆರ್. ಅರ್ಜುನ್​, ಕಳೆದ ಹಲವು ವರ್ಷದಿಂದ ನಾವು ಪ್ರತಿ ವರ್ಷ ಹೋಳಿ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಪ್ರವಾಸಿ ಕೈಗೊಳ್ಳುತ್ತೇವೆ. ನಮ್ಮ ಸಂಸ್ಕೃತಿಯನ್ನು ಅಲ್ಲಿ ಆಚರಿಸುವ ಮೂಲಕ ಅಲ್ಲಿನ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತೇವೆ. ಅಲ್ಲದೇ ಲೀವ್ ವಿಥ್ ಹ್ಯೂಮಾನಿಟಿ (ಮಾನವೀಯತೆಯೊಂದಿಗೆ ಜೀವಿಸಿ) ಎಂಬ ಟ್ರಸ್ಟ್ ಸ್ಥಾಪಿಸಿಕೊಂಡು ನಮ್ಮ ಸ್ವಂತ ಹಣದಲ್ಲಿ ಗಂಗಾವತಿ ಸುತ್ತಲೂ ಸಾಕಷ್ಟು ಸಾಮಾಜಿಕ ಸೇವೆ ಮಾಡುತ್ತಿದ್ದೇವೆ. ಅರಣ್ಯ, ಕಾಡುಪ್ರಾಣಿ, ಪರಿಸರ, ಪ್ರಾಚ್ಯಸ್ಮಾರಕ ಉಳಿಸುವಂತ ಕೆಲಸ ಮಾಡುತ್ತಿದ್ದೇವೆ. ಅನ್ಯ ರಾಜ್ಯದಲ್ಲೂ `ಲೀವ್ ವಿಥ್ ಹ್ಯೂಮಾನಿಟಿ' ಎಂಬ ಸಾಮಾಜಿಕ ಕಳಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓಲಿ : ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬ್ರೇಕ್: ಮಣ್ಣಿನಲ್ಲಿಯೇ ಹೋಳಿ ಆಡಿ ಮಾದರಿಯಾದ ನೂಲ್ವಿ ಗ್ರಾಮದ ಯುವಕರು - Youths celebrated holi festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.