ETV Bharat / state

ಪೆಟ್ರೋಲ್​, ಡಿಸೇಲ್​ ಖಾಲಿ ಅಂತಾ ವಾಹನ ರಸ್ತೆಯಲ್ಲಿ ನಿಲ್ಲಿಸಿದ್ರೂ ಬೀಳುತ್ತೆ ಕೇಸ್​; ಈ ವರ್ಷ ದಾಖಲಾದ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳೆಷ್ಟು? - Drunk and drive case

author img

By ETV Bharat Karnataka Team

Published : May 28, 2024, 7:10 PM IST

Updated : May 28, 2024, 7:28 PM IST

ಬೆಂಗಳೂರಿನಲ್ಲಿ ಈ ಬಾರಿ ವಾಹನ ಸವಾರರು ಪಾನಮತ್ತರಾಗಿ ಚಾಲನೆ ಮಾಡದೆ ಸಂಚಾರ ನಿಯಮವನ್ನು ಪಾಲಿಸಿದ್ದಾರೆ.

DRUNK AND DRIVE CASE
ಡ್ರಂಕ್ ಅಂಡ್ ಡ್ರೈವ್ (ETV Bharat)

ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್ ಅನುಚೇತ್ (ETV Bharat)

ಬೆಂಗಳೂರು : ಕುಡಿದು ವಾಹನ ಚಲಾಯಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಸಂಚಾರ ಪೊಲೀಸರ ನಿರಂತರ ಜಾಗೃತಿ ಹಾಗೂ ದಂಡದ ಬಿಸಿಗೆ ಮಣಿದಿರುವ ವಾಹನ ಸವಾರರು ಪಾನಮತ್ತ ಚಾಲನೆ ಮಾಡದೆ ಸಂಚಾರ ನಿಯಮ ಪಾಲಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನವರಿಯಿಂದ ಇದುವರೆಗೂ ಪಾನಮತ್ತ ಚಾಲನೆ ಮಾಡಿ ಸಿಕ್ಕಿಬೀಳುವವರ ಸಂಖ್ಯೆ ಶೇ. 2.6ರಷ್ಟು ಇಳಿಕೆಯಾಗಿದೆ. 2023ರಲ್ಲಿ 4.6 ರಷ್ಟಿತ್ತು. ಇದರಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಮಾಣ ಕಳೆದ‌ ವರ್ಷ 5.2 ರಷ್ಟಿದ್ದರೆ, ಈ ವರ್ಷದ ಶೇ. 3.2 ರಷ್ಟು ಕಡಿಮೆಯಾಗಿದೆ.

ಇನ್ನು ಮದ್ಯಸೇವನೆ ಮಾಡಿ ಅಪಘಾತಕ್ಕೀಡಾಗುತ್ತಿದ್ದವರ ಪ್ರಮಾಣದಲ್ಲಿ ಈ ಬಾರಿ ತುಸು ಇಳಿಕೆಯಾಗಿದೆ. 2023 ರಲ್ಲಿ 4.5ರಷ್ಟಿದ್ದ ಪ್ರಮಾಣ ಈ‌ ವರ್ಷ 4.3ಕ್ಕೆ ಇಳಿದಿದೆ. ಈ ವರ್ಷ ನಡೆಸಿದ 1.56 ಲಕ್ಷ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯಲ್ಲಿ 4088 ಮಂದಿ ಸವಾರರು ಪಾನಮತ್ತರಾಗಿದ್ದರು ಎಂದು ಅಂಕಿ -ಅಂಶ ಸಮೇತ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್ ಅನುಚೇತ್ ಮಾಹಿತಿ ನೀಡಿದ್ದಾರೆ.‌

ಈ ವರ್ಷದ ಮೊದಲ‌ ಮೂರು ತಿಂಗಳಲ್ಲಿ ಅಪಘಾತ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದರೆ, ನಂತರ‌ ಎರಡು ತಿಂಗಳಲ್ಲಿ‌ ಆಕ್ಸಿಡೆಂಟ್ ಕೇಸ್​ಗಳು ಕಡಿಮೆಯಾಗಿವೆ. ಹೆಚ್ಚೆಚ್ಚು ಅಪಘಾತವಾಗುವ 63 ಬ್ಲಾಕ್ ಸ್ಪಾಟ್​ಗಳನ್ನ ಗುರುತಿಸಲಾಗಿದ್ದು, ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಮದ್ಯ ಸೇವಿಸಿ ಸ್ವಯಂಪ್ರೇರಿತವಾಗಿ ಅಪಘಾತ ಮಾಡಿಕೊಂಡಿರುವವರ ಸಂಖ್ಯೆ ಅಧಿಕವಾಗಿದೆ‌‌.‌ ಈ ಪೈಕಿ ಬೈಕ್ ಸವಾರರೇ ಹೆಚ್ಚಿದ್ದಾರೆ. ಈ ವರ್ಷದಲ್ಲಿ ದಾಖಲಾಗಿದ್ದ, 15 ಆಕ್ಸಿಡೆಂಟ್ ಪ್ರಕರಣಗಳಲ್ಲಿ 11 ಮಂದಿ ವಾಹನ ಸವಾರರು ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ.

ಕಳೆದ ವರ್ಷ ಕುಡಿದು ವಾಹನ ಚಾಲನೆ‌ ಮಾಡಿದ್ದ 21 ಪ್ರಕರಣ ದಾಖಲಾದ ಪೈಕಿ 10 ಪ್ರಕರಣಗಳಲ್ಲಿ ಬೇರೆ ವಾಹನಗಳಿಗೆ ಆಕ್ಸಿಡೆಂಟ್ ಮಾಡಿದರೆ, ಇನ್ನುಳಿದ 11 ಪ್ರಕರಣಗಳಲ್ಲಿ ಸೆಲ್ಫ್ ಆಕ್ಸಿಡೆಂಟ್ ಆಗಿವೆ ಎಂದು ಅನುಚೇತ್ ಅವರು ತಿಳಿಸಿದರು.

ಪೆಟ್ರೋಲ್- ಡೀಸೆಲ್ ಇಲ್ಲವೆಂದು ವಾಹನ ನಿಲ್ಲಿಸಿದರೆ ಕೇಸ್ ಬೀಳಲಿದೆ. ನಡುರಸ್ತೆಯಲ್ಲಿ ಇಂಧನ ಖಾಲಿಯಾಗಿದೆ ಎಂದು ವಾಹನ ನಿಲ್ಲಿಸುವ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 283ರಡಿ ಪ್ರಕರಣ ದಾಖಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಗೋರಗುಂಟೆಪಾಳ್ಯ ಸೇರಿದಂತೆ ಇನ್ನಿತರ ವಾಹನಸಾಂದ್ರತೆ ಪ್ರದೇಶಗಳಲ್ಲಿ ಇಂಧನವಿಲ್ಲ ಎಂಬ ನೆಪದಲ್ಲಿ ವಾಹನ ನಿಲ್ಲಿಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವ್ಹೀಲಿಂಗ್​ನಲ್ಲಿ ಅಪ್ರಾಪ್ತರು ಕಂಡು ಬಂದಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದ್ದು, ಜೆ. ಜೆ ಕಾಯ್ದೆಯಡಿಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲಿಗೆ ಚಿಂತನೆ ನಡೆಸಲಾಗಿದೆ ಎಂದು ಅನುಚೇತ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಬೆಂಗಳೂರು ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ; 386 ಪಾನಮತ್ತ ಚಾಲಕರ ವಿರುದ್ಧ ಕೇಸ್​ - DRUNK AND DRIVE CASE

Last Updated : May 28, 2024, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.