ETV Bharat / state

ಮಂಗಳೂರುನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ನೇರ ವಿಮಾನ ಸೇವೆ: ಆರಂಭ ಯಾವಾಗ ಗೊತ್ತಾ?

author img

By ETV Bharat Karnataka Team

Published : Feb 3, 2024, 10:14 PM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಡ್ಡಾಕ್ಕೆ ಏಪ್ರಿಲ್ 3 ರಿಂದ ನೇರ ವಿಮಾನ ಸೇವೆ ಆರಂಭಗೊಳ್ಳಲಿದೆ.

direct-flight-service-started-between-mangalore-and-jeddah-from-april-3
ಏ.3 ರಿಂದ ಮಂಗಳೂರು ಜೆಡ್ಡಾ ನಡುವೆ ನೇರ ವಿಮಾನ ಸೇವೆ ಆರಂಭ

ಮಂಗಳೂರು: ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಡ್ಡಾಕ್ಕೆ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಏಪ್ರಿಲ್ 3 ರಿಂದ ಪ್ರತಿ ಬುಧವಾರದಂದು ಕಾರ್ಯನಿರ್ವಹಿಸುವ ಸಾಪ್ತಾಹಿಕ ವಿಮಾನದ ಹಾರಾಟವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಿಸಿದೆ. ವಿಮಾನ IX 499 ಮಂಗಳೂರು-ಜೆಡ್ಡಾ ಮಧ್ಯಾಹ್ನ 2.50ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 6.25ಕ್ಕೆ ಜೆಡ್ಡಾವನ್ನು ತಲುಪುತ್ತದೆ. ಹಿಂದಿರುಗುವ ಪ್ರಯಾಣವು, IX 498 ಜೆಡ್ಡಾ ಸಮಯದಿಂದ ಸಂಜೆ 7.25ಕ್ಕೆ ಜೆಡ್ಡಾದಿಂದ ಹೊರಟು ಮರುದಿನ ಮುಂಜಾನೆ 3.40ಕ್ಕೆ ಮಂಗಳೂರನ್ನು ತಲುಪುತ್ತದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಹೊಸ ವಲಯಕ್ಕೆ ಬುಕಿಂಗ್ ವ್ಯವಸ್ಥೆ ಈಗಾಗಲೇ ತೆರೆದಿದೆ ಮತ್ತು ಈ ವಿಮಾನಕ್ಕಾಗಿ ಏರ್‌ಲೈನ್ 186 ಆಸನಗಳ ಬೋಯಿಂಗ್ 737-800 ವಿಮಾನವನ್ನು ನಿಯೋಜಿಸುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಿನಿಂದ ಹೊಸ ಅಂತಾರಾಷ್ಟ್ರೀಯ ವಲಯಗಳನ್ನು ಸೇರಿಸಲು ಏರ್‌ಲೈನ್ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯವಾಗಿ ಅಬುಧಾಬಿ, ಬಹ್ರೇನ್, ದಮ್ಮಾಮ್, ದೋಹಾ, ದುಬೈ, ಕುವೈತ್ ಮತ್ತು ಮಸ್ಕತ್​ಗೆ ಸಂಪರ್ಕ ಹೊಂದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿದಿನ ದುಬೈಗೆ ಎರಡು ವಿಮಾನಗಳನ್ನು ನಿರ್ವಹಿಸುತ್ತದೆ. ಇಂಡಿಗೋ ವಾರಕ್ಕೆ ನಾಲ್ಕು ವಿಮಾನಗಳನ್ನು ದುಬೈಗೆ ನಿರ್ವಹಿಸುತ್ತದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿಗೆ ವಾರದಲ್ಲಿ 4 ದಿನ, ದಮ್ಮಾಮ್ ಮತ್ತು ಮಸ್ಕತ್​ಗೆ ವಾರದಲ್ಲಿ 3 ದಿನ ವಿಮಾನಗಳನ್ನು ನಿರ್ವಹಿಸುತ್ತದೆ.

ಭಾರತದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ, ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ವಾಯು ಸೇವಾ ಒಪ್ಪಂದಗಳ (ASA) ಆಧಾರದ ಮೇಲೆ ಸಾಗರೋತ್ತರ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತವೆ. ಭಾರತವು ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಅನೇಕ ದೇಶಗಳೊಂದಿಗೆ ದ್ವಿಪಕ್ಷೀಯ ASA ಗಳನ್ನು ಹೊಂದಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ ಭಾರಿ ಬದಲಾವಣೆಗೆ ಬಜೆಟ್​​ನಲ್ಲಿ ಮುನ್ನುಡಿ: ಮೂರು ರೈಲ್ವೆ ಕಾರಿಡಾರ್​ಗಳ​ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.