ETV Bharat / state

ಬ್ಯಾಗ್ ಗೆ ಹೆಚ್ಚುವರಿ ಹಣ ಪಡೆದ ಶಾಪಿಂಗ್ ಮಳಿಗೆಗೆ 7 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ - Consumer Court

author img

By ETV Bharat Karnataka Team

Published : Apr 6, 2024, 10:59 PM IST

Updated : Apr 7, 2024, 9:37 AM IST

ರಿಟೈಲ್ ಬಟ್ಟೆ ಮಳಿಗೆಯಲ್ಲಿ ಪ್ಯಾಂಟ್ ಖರೀದಿಸಿದ್ದ ವೇಳೆ ಬ್ಯಾಗ್​​ಗೆ ಹೆಚ್ಚುವರಿ ಹಣ ಪಡೆದಿದ್ದ ಶಾಪಿಂಗ್ ಮಳಿಗೆ ವಿರುದ್ಧ ಗ್ರಾಹಕ ವಕೀಲ ಆರ್. ಬಸವರಾಜ್​ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

Consumer Disputes Redressal Commission
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ದಾವಣಗೆರೆ: ಬ್ಯಾಗ್​​ಗೆ ಹೆಚ್ಚುವರಿ ಹಣ ಪಡೆದ ಆರೋಪದ ಹಿನ್ನೆಲೆ ಶಾಪಿಂಗ್ ಮಳಿಗೆಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 7000 ದಂಡ ವಿಧಿಸಿ ತೀರ್ಪು ನೀಡಿದೆ.

ಶಾಪಿಂಗ್ ಗೆ ಬರುವ ಗ್ರಾಹಕರ ಬಳಿ ಬ್ಯಾಗ್​ಗೆ ಹೆಚ್ಚುವರಿ ಹತ್ತು ರೂಪಾಯಿ ಪಡೆದ ವಾಣಿಜ್ಯ ಮಳಿಗೆಗೆ(ವಾಣಿಜ್ಯ ಸಂಸ್ಥೆ) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 7000 ರೂಪಾಯಿ ದಂಡ ವಿಧಿಸಿದೆ. ವೃತ್ತಿಯಲ್ಲಿ ವಕೀಲ ಆರ್.ಬಸವರಾಜ್ ಅ​ವರು ಗುಂಡಿ ವೃತ್ತದಲ್ಲಿರುವ ಬಳಿ ಇರುವ ರಿಟೈಲ್ ಬಟ್ಟೆ ಮಳಿಗೆಯಲ್ಲಿ ಅಕ್ಟೋಬರ್ 2023 ರಂದು 1499 ರೂ. ಪಾವತಿಸಿ ಪ್ಯಾಂಟ್ ವೊಂದನ್ನು ಖರೀದಿಸಿದ್ದರು.

ಆಗ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್‌ಗೆ ಬ್ಯಾಗ್‌ ನೀಡಲು ಹೆಚ್ಚುವರಿಯಾಗಿ 10 ರೂಪಾಯಿ ಪಡೆದಿತ್ತು. ಅದನ್ನು ಅಂದು ವಕೀಲ ಆರ್. ಬಸವರಾಜ್ ಅವರು ಖಂಡಿಸಿ ಸಿಬ್ಬಂದಿಗೆ ಪ್ರಶ್ನಿಸಿದ್ದರು. ಬಳಿಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಇನ್ನು ರಿಟೈಲ್ ಮಳಿಗೆ (ವಾಣಿಜ್ಯ ಸಂಸ್ಥೆ) ವಿರುದ್ಧ 50,000 ರೂ. ಮಾನಸಿಕ ಕಿರುಕುಳ ಮತ್ತು ದೂರು ದಾಖಲಿಸಲು ಖರ್ಚು ಮಾಡಿದ 10,000 ಪಾವತಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು. ಗ್ರಾಹಕರ ಆಯೋಗ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‌ಗಳಿಗೆ ಹೆಚ್ಚಿನ ಹಣ ಪಡೆಯುವಂತಿಲ್ಲ ಎಂಬ ಹಿಂದಿನ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ 10 ರೂ. ಪಡೆದ ಸಂಸ್ಥೆಯ ಕ್ರಮ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಅನುಚಿತ ವ್ಯಾಪಾರ ಪದ್ಧತಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

ವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್, ಬಿ.ಯು. ಗೀತಾ ವಾಣಿಜ್ಯ ಸಂಸ್ಥೆಗೆ 7000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂಓದಿ:ಚುನಾವಣಾ ಅಕ್ರಮ ಆರೋಪ: ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣ ರದ್ದು - Shashikala Jolle

Last Updated : Apr 7, 2024, 9:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.