ETV Bharat / state

ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ ಗೌಡ ಆಸ್ತಿ ಮೌಲ್ಯ 135 ಕೋಟಿ ರೂ.ಗೂ ಹೆಚ್ಚು - Congress candidate Rajeev Gowda

author img

By ETV Bharat Karnataka Team

Published : Apr 4, 2024, 10:35 AM IST

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್‌ ಗೌಡ ಅವರ ಆಸ್ತಿ ಮೌಲ್ಯ ಈ ಕೆಳಗಿನಂತಿದೆ.

Congress candidate Rajeev Gowda
ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ ಗೌಡ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್‌ ಗೌಡ ಅವರು ಚರಾಸ್ತಿ, ಸ್ಥಿರಾಸ್ತಿ ಸೇರಿ ತಮ್ಮ ಕುಟುಂಬ ಒಟ್ಟು 135 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ತಮ್ಮ ಬಳಿ 4 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ ಖಾತೆಯ ಠೇವಣಿ, ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ, ಷೇರು ಬಂಡವಾಳ, 32 ಲಕ್ಷ ರೂ.ಗಳ ಕಾರು ಸೇರಿದಂತೆ ಒಟ್ಟು 7.84 ಕೋಟಿ ರೂ. ಚರಾಸ್ತಿ ಇದೆ. ಪತ್ನಿ ಬಳಿ 2.50 ಲಕ್ಷ ರೂ. ನಗದು, ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ, ಷೇರು ಬಂಡವಾಳ, ಚಿನ್ನಾಭರಣ, ಕಾರು ಸೇರಿದಂತೆ ಒಟ್ಟು 6.85 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ಪುತ್ರಿ ಬಳಿ 2.2 ಲಕ್ಷ ರೂ. ಚರಾಸ್ತಿ ಇರುವುದಾಗಿ ಚುನಾವಣಾಧಿಕಾರಿಗೆ ನಿನ್ನೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಬಂಗಾರಪೇಟೆ ತಾಲೂಕು ವ್ಯಾಪ್ತಿಯ ಮೂರು ಕಡೆ ಇರುವ ಸುಮಾರು 14 ಎಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.50ರಷ್ಟು ಪಾಲಿದ್ದು, ಇದರ ಮಾರುಕಟ್ಟೆ ಬೆಲೆ 1 ಕೋಟಿ ರೂ. ಆಗಿದೆ. ದೇವಸಂದ್ರದಲ್ಲಿ 8 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, ಚರ್ಚ್‌ ಸ್ಟ್ರೀಟ್‌ನ ಕಟ್ಟಡವೊಂದರಲ್ಲಿ 5 ಕೋಟಿ ರೂ. ಮೌಲ್ಯದ ಪಾಲು, ಸುಮಾರು 14 ಕೋಟಿ ರೂ. ಮೌಲ್ಯದ ವಾಸದ ಮನೆಗಳು ಸೇರಿ ಒಟ್ಟು ತಮ್ಮ ಬಳಿ 26.74 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ ಕೂಡ 1.21 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, ಬೆಂಗಳೂರಿನ ತ್ಯಾಗರಾಜನಗರದಲ್ಲಿ 86,875 ಚದರ ಅಡಿ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ ಶೇ.50ರಷ್ಟು ಪಾಲು ಇದ್ದು, ಇದರ ಮಾರುಕಟ್ಟೆ ಮೌಲ್ಯ 92.57 ಕೋಟಿ ರೂ.ಗಳಾಗಿದೆ. ಜೊತೆಗೆ 1.26 ಕೋಟಿ ರೂ. ಮೌಲ್ಯದ ಮನೆ ಸೇರಿ ಒಟ್ಟು 92.75 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಂಗಳಮುಖಿಯರಿಂದ ವಿಶೇಷ ಮತದಾನ ಜಾಗೃತಿ ಜಾಥಾ - Voting Awareness by Transgenders

ETV Bharat Logo

Copyright © 2024 Ushodaya Enterprises Pvt. Ltd., All Rights Reserved.