ETV Bharat / state

ಇಂದು ಕಾಮೆಡ್-ಕೆ ಯುಜಿಇಟಿ: 1.18 ಲಕ್ಷ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ - COMEDK UGET

author img

By ETV Bharat Karnataka Team

Published : May 12, 2024, 7:33 AM IST

ಕಂಪ್ಯೂಟರ್ ಆಧಾರಿತ ಕಾಮೆಡ್-ಕೆ ಯುಜಿಇಟಿ ಪರೀಕ್ಷೆ ಇಂದು ನಡೆಯಲಿದ್ದು, 1.18 ಲಕ್ಷ ಅಭ್ಯರ್ಥಿಗಳು ಹಾಜರಾಗುವ ಸಾಧ್ಯತೆ ಇದೆ.

ಕಾಮೆಡ್-ಕೆ ಯುಜಿಇಟಿ ಪರೀಕ್ಷೆ
ಕಾಮೆಡ್-ಕೆ ಯುಜಿಇಟಿ ಪರೀಕ್ಷೆ (ETV Bharat)

ಬೆಂಗಳೂರು: ಇಂದು ನಡೆಯಲಿರುವ ಕಾಮೆಡ್-ಕೆ ಯುಜಿಇಟಿಗೆ ಸುಮಾರು 1.18 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ರಾಜ್ಯದ ಖಾಸಗಿ ಕಾಲೇಜುಗಳು ಮತ್ತು ಆಯ್ದ ದೇಶಾದ್ಯಂತದ ವಿಶ್ವವಿದ್ಯಾನಿಲಯಗಳ ಎಂಜಿನಿಯರಿಂಗ್ ಸೀಟುಗಳಿಗೆ ಈ ಪರೀಕ್ಷೆ ನಡೆಯುತ್ತದೆ.

ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. 28 ರಾಜ್ಯಗಳ, 189 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಅವಧಿಗಳಲ್ಲಿ ಪರೀಕ್ಷೆ ನಡೆಯುತ್ತದೆ.

ಬೆಳಿಗ್ಗೆ 8:30ರಿಂದ 11:30ರವರೆಗೆ, ಮಧ್ಯಾಹ್ನ 1ರಿಂದ 4ರವರೆಗೆ ಮತ್ತು ಸಂಜೆ 5.30ರಿಂದ 8.30ರವರೆಗೆ ಪರೀಕ್ಷೆಗಳು ನಿಗದಿಯಾಗಿವೆ.

ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿರುವುದರಿಂದ ಡ್ರೆಸ್ ಕೋಡ್ ಆಯಾ ರಾಜ್ಯ ಸರ್ಕಾರದ ರೀತಿನೀತಿಗಳಂತೆ ಇರಲಿದೆ.

ಅಭ್ಯರ್ಥಿಗಳು ಲಾಗಿನ್‌ ಮಾಡಿ ಡೌನ್‌ಲೋಡ್ ಮಾಡಿರುವ ಪ್ರವೇಶ ಪತ್ರದ ಜೊತೆಗೆ ಇತ್ತೀಚಿನ ಎರಡು ಪಾಸ್‌ಪೋರ್ಟ್ ಭಾವಚಿತ್ರಗಳು, ಅಪ್ಲಿಕೇಶನ್‌ನಲ್ಲಿ ನಮೂದಿಸಿರುವಂತಹ ಪುರಾವೆಗಳೊಂದಿಗೆ ಪರೀಕ್ಷೆಗೆ ಹಾಜರಾಗಬೇಕಿದೆ ಎಂದು ಕಾಮೆಡ್-ಕೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕಾನೂನು ಕಾಲೇಜುಗಳ ಮಾನ್ಯತೆ ನವೀಕರಣದ ವಿವರ ವೆಬ್ಸೈಟ್​​​ನಲ್ಲಿ ಪ್ರಕಟಿಸುವಂತೆ ಬಿಸಿಐಗೆ ಹೈಕೋರ್ಟ್ ನಿರ್ದೇಶನ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.