ETV Bharat / state

ಚಲುವರಾಯಸ್ವಾಮಿ ವಿರುದ್ಧ ಮಾನಹಾನಿಕರ ಹೇಳಿಕೆ ಆರೋಪ: ಸುರೇಶ್ ಗೌಡ ವಿರುದ್ಧ ವಿಚಾರಣೆಗೆ ನ್ಯಾಯಾಲಯ ಸೂಚನೆ - Civil court

author img

By ETV Bharat Karnataka Team

Published : Apr 7, 2024, 9:55 AM IST

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸುರೇಶ್​​​​​ ಗೌಡ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಸಿವಿಲ್​ ನ್ಯಾಯಾಲಯ ಸೂಚನೆ ನೀಡಿದೆ.

ಸಿವಿಲ್​ ನ್ಯಾಯಾಲಯ
ಸಿವಿಲ್​ ನ್ಯಾಯಾಲಯ

ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ 300-400 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ಧ ನಾಗಮಂಗಲ ಜೆಡಿಎಸ್​ ಮಾಜಿ ಶಾಸಕ ಸುರೇಶ್​​​​​ ಗೌಡ ವಿರುದ್ಧ ಮಾನಹಾನಿ ಆರೋಪದಲ್ಲಿ ಕ್ರಿಮಿನಲ್​​ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಸಿವಿಲ್​ ನ್ಯಾಯಾಲಯ ಸೂಚನೆ ನೀಡಿದೆ.

ಸಚಿವ ಚಲುವರಾಯಸ್ವಾಮಿ ಸಲ್ಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ 42ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್​​​​​ ನ್ಯಾಯಾಲಯದ ನ್ಯಾಯಾಧೀಶರು ಈ ಸೂಚನೆ ನೀಡಿದ್ದಾರೆ. ಅಲ್ಲದೇ, ಆರೋಪಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಸಮನ್ಸ್​​ ಜಾರಿ ಮಾಡಲು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸುರೇಶ್‌ಗೌಡ ಅವರು "ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ 300-400 ಕೋಟಿ ರೂ.ಗಳ ಭ್ರಷ್ಟಾಚಾರ ಮಾಡಿದ್ದಾರೆ. ಈ ಹಣವನ್ನು ಏರ್‌ಲಿಫ್ಟ್ ಮಾಡಿಸಿದ್ದಾರೆ. ಸ್ನೇಹಿತರ ಮುಖಾಂತರ ಬೆಳ್ಳೂರು ಕ್ರಾಸ್​ ಮತ್ತು ಬೆಂಗಳೂರಿನ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದಂತಹ ರಘುವೀರ್‌ಗೌಡ, ಪೆಟ್ರೋಲ್ ಬಂಕ್‌ನ ಮಾಲೀಕರಾದ ನರೇಶ್ ಮುಖಾಂತರ ಎಲ್ಲ ವ್ಯವಹಾರಗಳನ್ನು ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಸರ್ಕಾರಿ ನೌಕರರ ವರ್ಗಾವಣೆ ಮಾಡಿಸಲು 150 ಕೋಟಿ ರೂ.ಗಳು, ಕುಡಿಯುವ ಯೋಜನೆ (ಜಲಧಾರೆ) 100 ಕೋಟಿ ರೂ. ಸೇರಿ ಒಟ್ಟು 300-400 ಕೋಟಿ ರೂ.ಗಳ ಭ್ರಷ್ಟಾಚಾರ ಆಗಿದೆ ಎಂದಿದ್ದಾರೆ. ಅಲ್ಲದೇ, ಏಕ ವಚನದಲ್ಲಿ ಮಾತನಾಡಿ ಅವಮಾನ ಮಾಡಿದ್ದಾರೆ. ಈ ಸಂಬಂಧದ ಸುದ್ದಿ 2023ರ ಆಗಸ್ಟ್ 17 ರಂದು ಪ್ರಕಟವಾಗಿದೆ. ಇದರಿಂದ ಸಮಾಜದಲ್ಲಿ ಅವಮಾನ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಲುವರಾಯಸ್ವಾಮಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೆ.ಎಸ್‌. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲು - K S Eshwarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.