ETV Bharat / state

ನಿಪ್ಪಾಣಿ ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ - ಪೊಲೀಸರಿಂದ ಬಿಗಿ ಭದ್ರತೆ

author img

By ETV Bharat Karnataka Team

Published : Mar 9, 2024, 3:19 PM IST

Updated : Mar 9, 2024, 4:14 PM IST

ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ ಎಂದು ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿದ್ದಾರೆ.

Etv Bharatbomb-threat-letter-to-nippani-ram-mandir
ಚಿಕ್ಕೋಡಿ: ನಿಪ್ಪಾಣಿ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ - ಪೊಲೀಸರಿಂದ ಬಿಗಿ ಭದ್ರತೆ

ನಿಪ್ಪಾಣಿ ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ

ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ನಿಪ್ಪಾಣಿಯ ಶ್ರೀ ರಾಮ ಮಂದಿರ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಫೆ.27 ಹಾಗೂ ಮಾ.7 ರಂದು ಬೆದರಿಕೆ ಪತ್ರಗಳು ಶ್ರೀರಾಮ ಮಂದಿರ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಪತ್ತೆಯಾಗಿದ್ದವು.

ಮುಂದಿನ 20, 21ನೇ ತಾರೀಖಿನ ಒಳಗಡೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುವುದಾಗಿ ಪತ್ರ ಬರೆಯಲಾಗಿದೆ. ಸದ್ಯ ಪತ್ರ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಶ್ರೀರಾಮ ಮಂದಿರದ ಅರ್ಚಕ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟ ಬೆದರಿಕೆ ಹಿನ್ನೆಲೆ ಒಂದು ವ್ಯಾನ್​ ಡಿಆರ್ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು 14 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೇವಸ್ಥಾನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತನ ಎರಡು ವಿಡಿಯೋ ಬಿಡುಗಡೆ ಮಾಡಿದ ಎನ್​ಐಎ

Last Updated : Mar 9, 2024, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.