ETV Bharat / state

ಪಗಾರ ಕೊಡದಿದ್ದಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ: ರೆಸ್ಟೋರೆಂಟ್ ಮಾಜಿ ನೌಕರ ವಶಕ್ಕೆ - Hoax Bomb Call

author img

By ETV Bharat Karnataka Team

Published : Mar 28, 2024, 9:40 AM IST

ರೆಸ್ಟೋರೆಂಟ್​ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿ ಅದೇ ರೆಸ್ಟೋರೆಂಟ್​ನ ಮಾಜಿ ಸಿಬ್ಬಂದಿ ಎಂಬುದು ಗೊತ್ತಾಗಿದೆ.

Etv Bharat
Etv Bharat

ಬೆಂಗಳೂರು: ಸಂಬಳ ಕೊಡದಿದ್ದಕ್ಕೆ ಕುಡಿದ ನಶೆಯಲ್ಲಿ ರೆಸ್ಟೋರೆಂಟ್​​ನಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಣಸವಾಡಿ ನಿವಾಸಿ ವೇಲು ಎಂಬಾತ ಆರೋಪಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ತಡರಾತ್ರಿ ಮಹದೇವಪುರದ ಪಾಸ್ತಾ ರೆಸ್ಟೋರೆಂಟ್​​ಗೆ ಕರೆ ಮಾಡಿದ್ದ ಈತ, ರೆಸ್ಟೋರೆಂಟ್​ನಲ್ಲಿ ಬಾಂಬ್ ಇಡಲಾಗಿದ್ದು ಶೀಘ್ರದಲ್ಲೇ ಸ್ಫೋಟವಾಗಲಿದೆ ಎಂದು ಬೆದರಿಸಿದ್ದ. ಆತಂಕಗೊಂಡ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದು ರೆಸ್ಟೋರೆಂಟ್ ಪೂರ್ತಿ ಶೋಧ ಕಾರ್ಯ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು.

ಬಾಂಬ್ ಬೆದರಿಕೆ ಕರೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ, ಬೆದರಿಕೆ ಹಾಕಿದವ ಇಂದಿರಾನಗರದ ರೆಸ್ಟೋರೆಂಟ್​ನ ಬ್ರ್ಯಾಂಚ್​ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ನೌಕರ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 9 ನಿಮಿಷದೊಳಗೆ ರಾಮೇಶ್ವರಂ ಕೆಫೆ ಪ್ರವೇಶಿಸಿ ನಿರ್ಗಮಿಸಿದ್ದ ಶಂಕಿತ ವ್ಯಕ್ತಿ

ಮೂರು ತಿಂಗಳ ಹಿಂದೆ ವೇಲು ಕೆಲಸ ಬಿಟ್ಟಿದ್ದ. ಕುಡಿತಕ್ಕೆ ದಾಸನಾಗಿದ್ದು, ಕೆಲಸ ಅವಧಿಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ. ಹೀಗಾಗಿ ಸಂಬಳ ನೀಡಿರಲಿಲ್ಲ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಮಹದೇವಪುರದಲ್ಲಿ ಪಾಸ್ತಾ ರೆಸ್ಟೋರೆಂಟ್​​ಗೆ ಕರೆ ಮಾಡಿ ಹುಸಿ ಬಾಂಬ್ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತನ ಎರಡು ವಿಡಿಯೋ ಬಿಡುಗಡೆ ಮಾಡಿದ ಎನ್​ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.