ETV Bharat / state

ಬೆಳಗಾವಿ: ವಿವಾದಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಮಹಿಳೆಯರು

author img

By ETV Bharat Karnataka Team

Published : Feb 18, 2024, 9:35 AM IST

ಮಹಿಳೆಯರು ವಿವಾದಿತ ಜಮೀನಿನಲ್ಲಿ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಬೆಳಗಾವಿ ತಾಲೂಕಿನ ಕವಳೇವಾಡಿ ಗ್ರಾಮದಲ್ಲಿ ಜರುಗಿದೆ.

ಬೆಳಗಾವಿ  Belagavi  ಜಮೀನಿನ ವಿವಾದ  Dispute over land  ವಿವಾದಿತ ಜಮೀನಿನಲ್ಲಿ ಅಂತ್ಯಕ್ರಿಯೆ
ಬೆಳಗಾವಿ: ವಿವಾದಿತ ಜಮೀನಿನಲ್ಲಿ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮಹಿಳೆಯರು

ಬೆಳಗಾವಿ: ವಿವಾದಿತ ಜಮೀನಿನಲ್ಲಿ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮಹಿಳೆಯರು

ಬೆಳಗಾವಿ: ವಿವಾದಿತ ಸ್ಥಳದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಹಿಳೆಯರೇ ನೆರವೇರಿಸಿದ ಘಟನೆ ಬೆಳಗಾವಿ ತಾಲೂಕಿನ ಕವಳೇವಾಡಿ ಗ್ರಾಮದಲ್ಲಿ ನಡೆದಿದೆ. ಕವಳೇವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅನಾರೋಗ್ಯದಿಂದ ತುಕಾರಾಮ್ ಮೋರೆ ಎಂಬುವವರು ಮೃತಪಟ್ಟಿದ್ದರು. ಸ್ಮಶಾನ ಭೂಮಿ ಇಲ್ಲದ ಕಾರಣಕ್ಕೆ ಗ್ರಾಮಸ್ಥರು, ವ್ಯಕ್ತಿಯೊಬ್ಬರ ಸ್ವಂತ ಜಾಗದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ಜಮೀನು ಮಾಲೀಕ ವಿರೋಧ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಲ್ಲಿಯೇ ಶವವಿಟ್ಟು ಪ್ರತಿಭಟಿಸಿದರು.

ಗ್ರಾಮದಲ್ಲಿ ಸ್ಮಶಾನದ ಭೂಮಿ ಇಲ್ಲದ ಕಾರಣಕ್ಕೆ ಈ ಮೊದಲು ಸ್ಥಳೀಯ ವ್ಯಕ್ತಿಯೊಬ್ಬರು ಜಮೀನಿನಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಇದೇ ಜಾಗರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಆದರೆ, ಕೆಲ ದಿನಗಳ ಹಿಂದೆ ಜಾಗದ ಮಾಲೀಕ ಓಮನಿ ಗಾವಡೆ ಅವರ ಕೋರ್ಟ್​ ಮೆಟ್ಟಿಲೇರಿದ್ದರು. ಇದರಿಂದಾಗಿ ಕೋರ್ಟ್​ನಲ್ಲಿ ಆದೇಶ ಓಮನಿ ಗಾವಡೆ ಅವರ ಪರವಾಗಿ ಬಂದಿತ್ತು. ಹೀಗಾಗಿ ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರವನ್ನು ಮಾಡಬೇಡಿ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದರಿಂದ ಗಲಾಟೆ ನಡೆಯಿತು.

ಗ್ರಾಮಸ್ಥರು ಹಾಗೂ ಜಮೀನು ಮಾಲೀಕ ಮಧ್ಯೆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಆದರೆ, ಅದು ಕೂಡ ವಿಫಲವಾಗಿದ್ದರಿಂದ ವಿವಾದಿತ ಜಾಗದಿಂದ ಗ್ರಾಮಸ್ಥರು ತೆರಳಿದ್ದರು. ಆಗ ಗ್ರಾಮದ ಮಹಿಳೆಯರು ಚಿತೆಯ ಮೇಲೆ ಶವವಿಟ್ಟು ಅಗ್ನಿಸ್ಪರ್ಶವನ್ನು ಮಾಡಲು ಮುಂದಾದರು. ಜಮೀನು ಮಾಲೀಕ ಓಮಿನಿ ಗಾವಡೆ ತೀವ್ರ ವಿರೋಧದ ನಡುವೆಯೂ ಮಹಿಳೆಯರು ಶವದ ಬಳಿ ನಿಂತು ಅಂತಿಮ ವಿಧಿ ವಿಧಾನ ಪೂರೈಸಿ, ಸ್ವತಃ ತಾವೇ ಮಂತ್ರಗಳನ್ನು ಹೇಳಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಗ್ರಾಮದ ಮಹಿಳೆ ಲಕ್ಷ್ಮೀ ಯಶವಂತಪುರಿ ಮಾತನಾಡಿ, ''ನಮ್ಮ ಜಾಗದಲ್ಲಿ ನೀವು ಅಂತ್ಯಕ್ರಿಯೆ ಮಾಡಬೇಡಿ ಎಂದು ಜಮೀನು ಮಾಲೀಕ ಹೇಳಿದರು. ಆದರೆ, ಐದನೂರು ವರ್ಷದಿಂದ ನಮ್ಮ ಹಿರಿಯರು ಇಲ್ಲಿಯೇ ಅಂತ್ಯಕ್ರಿಯೆ ಮಾಡಿಕೊಂಡು ಬಂದಿದ್ದಾರೆ. ಈಗ ಏಕಾಏಕಿ ಇಲ್ಲಿ ಮಾಡಬ್ಯಾಡ ಎಂದರೆ ಹೇಗೆ? ನಾವು ಎಲ್ಲಿ ಅಂತ್ಯಕ್ರಿಯೆ ಮಾಡೋದು? ಹಾಗಾಗಿ, ಮಹಿಳೆಯರೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಮುಂದೆ ಸ್ಮಶಾನ ಭೂಮಿ ಸಮಸ್ಯೆ ಆಗದಂತೆ ಜಿಲ್ಲಾಡಳಿತ ನಮಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ಬಿಡಿಎ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.