ETV Bharat / state

ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಿದರೆ, ಅಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಪ್ರಮುಖವಾಗುತ್ತೆ: ಸತೀಶ್ ಜಾರಕಿಹೊಳಿ

author img

By ETV Bharat Karnataka Team

Published : Jan 27, 2024, 4:42 PM IST

Updated : Jan 28, 2024, 1:01 PM IST

ಶೆಟ್ಟರ್ ಹೋಗಿದ್ದರಿಂದ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ. ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದರೆ ಅಲ್ಲಿ ಸತೀಶ್ ಜಾರಕಿಹೊಳಿ, ಜಗದೀಶ ಶೆಟ್ಟರ್ ಹೆಸರು ಲೆಕ್ಕ ಹಾಕುವುದಿಲ್ಲ. ಬದಲಿಗೆ ಪಕ್ಷದ ಲೆಕ್ಕ ಹಿಡಿಯಲಾಗುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Minister Satish Jarkiholi spoke to the media.
ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಹಾವೇರಿ: ಕಾಂಗ್ರೆಸ್​​ನಿಂದ ಬೇರೆ ಪಕ್ಷಕ್ಕೆ ಯಾರು ಹೋಗುತ್ತಾರೆ ಎನ್ನುವುದನ್ನು ಹೇಳಲಿಕ್ಕಾಗದು, ಅವರಿಗೆ ಹೋಗುವ ಮನಸ್ಸಿದ್ದರೆ ನಮ್ಮಿಂದ ತಡೆಯಲು ಆಗುವುದಿಲ್ಲ. ಈಗಷ್ಟೇ ಜಗದೀಶ ಶೆಟ್ಟರ್​ ಹೋಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಲಕ್ಷ್ಮಣ ಸವದಿ ಬಿಜೆಪಿ ನೆಕ್ಟ್​ ಟಾರ್ಗೆಟ್ ಆಗಿದ್ದಾರೆ ಎನ್ನುವ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಬಿಟ್ಟಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಯಾವ ಕ್ಷೇತ್ರದಲ್ಲಿ ನಿಲ್ಲುವರೋ ಅವರಿಗೆ ಬಿಟ್ಟಿರುವ ವಿಚಾರ, ಅವರ ಪಕ್ಷ ಅದನ್ನು ತೀರ್ಮಾನ ಮಾಡುತ್ತದೆ. ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್‌ನಿಂದ ಬಿಜೆಪಿ ಕಡೆಗೆ ಹೋಗುತ್ತವೆ ಎನ್ನುವುದನ್ನು ಹೇಳಲಿಕ್ಕೆ ಆಗುವುದಿಲ್ಲ. ಚುನಾವಣೆ ಬಂದಾಗ ನೋಡೋಣ ಯಾರು ಯಾವ ಕಡೆ ಮತ ಹಾಕುತ್ತಾರೆ ಎಂದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು: ಕಾಂಗ್ರೆಸ್‌ನಲ್ಲಿದ್ದವರು ಕಾಂಗ್ರೆಸ್‌ನಲ್ಲಿರುತ್ತಾರೆ ಎಂಬ ಆಶಾಭಾವನೆ ನಮಗಿದೆ. ಜಗದೀಶ ಶೆಟ್ಟರ್ ಅವರು ಸ್ವಲ್ಪ ದಿನ ಕಾಂಗ್ರೆಸ್​​​ನಲ್ಲಿ ಇರಬೇಕಿತ್ತು. ಅವರು ಹೋಗಿದ್ದು ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಜಗದೀಶ್ ಶೆಟ್ಟರ್ ಬೆಳಗಾವಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದರೇ ಅಲ್ಲಿ ವ್ಯಕ್ತಿ ಮಾತು ಬರುವುದಿಲ್ಲ. ಅಲ್ಲಿ ಸತೀಶ್ ಜಾರಕಿಹೊಳಿ ಜಗದೀಶ್​ ಶೆಟ್ಟರ್ ಹೆಸರು ಲೆಕ್ಕ ಹಾಕುವುದಿಲ್ಲ. ಬದಲಿಗೆ ಪಕ್ಷದ ಲೆಕ್ಕ ಹಿಡಿಯಲಾಗುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಒಬ್ಬರಿಂದ ಏನೂ ಮಾಡಲಿಕ್ಕೆ ಆಗುವುದಿಲ್ಲ. ಎಂದು ಅಭಿಮತ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಜಾರಕಿಹೊಳಿ ಪವರ್ ಸೆಂಟರ್:ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಜಾರಕಿಹೊಳಿ ಪವರ್ ಸೆಂಟರ್ ಆಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಆ ರೀತಿ ಏನು ಇಲ್ಲ. ಸಮಾನ ಮನಸ್ಕರು ಸೇರಿದ್ದೆವು. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಪವರ್ ಸೆಂಟರ್ ಏನು ಇಲ್ಲ. ನಮಗೆ ಈಗ ಲೋಕಸಭೆ ಚುನಾವಣೆ ಮುಖ್ಯವಾಗಿದೆ. ಚುನಾವಣೆ ಮುಗಿದ ಬಳಿಕ ನೋಡೋಣ, ಸದ್ಯಕ್ಕೆ ಅದರ ಅವಶ್ಯಕತೆಯೂ ಇಲ್ಲ. ಚುನಾವಣೆ ಮುಗಿದ ಮೇಲೆ ಈ ಕುರಿತು ಹೈಕಮಾಂಡ್​ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ನೀವು ಸಿಎಂ ಆಗುವ ಆಸೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ಪ್ರಶ್ನೆಯೇ ಇಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದರು. ಬಿಜೆಪಿಯವರು ಚುನಾವಣೆಯಲ್ಲಿ ರಾಮ ಮಂದಿರ ಹೆಸರು ಹೇಳಿ ಜನರನ್ನು ಸೆಳೆಯುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ, ನಮಗೂ ನಮ್ಮದೇ ಆದ ಮತ ಬ್ಯಾಂಕ ಇದೆ. ಆ ಮತಗಳನ್ನು ಎನ್​​ಕ್ಯಾಶ್​ ​ ಮಾಡಿಕೊಳ್ಳಲಾಗುವುದು. ಸಚಿವ ರಾಜಣ್ಣ ನೀಡಿರುವ ಹೇಳಿಕೆಗೆ ಹೈಕಮಾಂಡ್ ಕ್ರಮ ಕೈಗೊಳ್ಳುವ ಕುರಿತಂತೆ ನಾನೇನೂ ಹೇಳಲು ಬರುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇದನ್ನೂಓದಿ:ಬಿಜೆಪಿ ಕಾರ್ಯಕಾರಿಣಿ, ಎದುರಾಳಿಗಳ ಲಘು ಪರಿಗಣನೆ ಬೇಡ: ಬಿ.ವೈ. ವಿಜಯೇಂದ್ರ

Last Updated : Jan 28, 2024, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.