ETV Bharat / state

ಅತ್ತ ಸಿಎಂ - ಡಿಸಿಎಂ ಸಿಟಿ ರೌಂಡ್ಸ್: ಇತ್ತ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ತಲೆ ಬಿಸಿ - TRAFFIC JAM IN BENGALURU

author img

By ETV Bharat Karnataka Team

Published : May 22, 2024, 4:44 PM IST

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರು ಸಿಟಿ ರೌಂಡ್ಸ್ ನಡೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

Traffic jam on different roads Bangalore
ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದು (Etv Bharat)

ಬೆಂಗಳೂರು: ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದರೆ, ಅತ್ತ ಬೆಂಗಳೂರಿಗರು ಟ್ರಾಫಿಕ್ ಜಾಮ್​ ಉಂಟಾಗಿ ಜನ ಸಾಮಾನ್ಯರು, ವಾಹನ ಸವಾರರು ಕಿರಿ ಕಿರಿ ಅನುಭವಿಸಿದರು.

ಸಿಎಂ ಸಿಟಿ ರೌಂಡ್ಸ್ ಹಿನ್ನೆಲೆ ಬೆಂಗಳೂರಿನ ವಿವಿಧೆಡೆ ಸಂಚಾರದಲ್ಲಿ ವ್ಯತ್ಯಯವಾಯಿತು. ಸಿಎಂ ಸಂಚರಿಸಿದ ರಸ್ತೆಗಳಲ್ಲಿ ಬಹಳಷ್ಟು ಟ್ರಾಫಿಕ್ ಜಾಮ್​ ಉಂಟಾಯಿತು. ಪ್ರಮುಖವಾಗಿ ಮೈಸೂರು ರಸ್ತೆ, ಬನಶಂಕರಿ ದೇಗುಲ, ಜೆ.ಪಿ.ನಗರ, ದಾಲ್ಮಿಯಾ ಜಂಕ್ಷನ್, ಬನ್ನೇರು ಘಟ್ಟ ರಸ್ತೆ, ವಿಜಯಾ ಬ್ಯಾಂಕ್ ಲೇಔಟ್, ಕೋಡಿಚಿಕ್ಕನಹಳ್ಳಿ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಟ್ರಾಫಿಕ್​ ಜಾಮ್ ಆಗಿ ಜನರು ಸಂಕಟ ಅನುಭವಿಸಿದರು.

ರಸ್ತೆಗಳಲ್ಲಿ ಉದ್ದನೆಯ ಟ್ರಾಫಿಕ್ ಜಾಮ್ ಉಂಟಾಗಿ ವಾಹನ‌ ಸವಾರರು ಪರದಾಡಬೇಕಾಯಿತು. ಸಿಎಂ ಸಿದ್ದರಾಮಯ್ಯ ಹೋಗುವ ರಸ್ತೆಗಳಲ್ಲಿ ಜೀರೋ ಟ್ರಾಫಿಕ್ ಮಾಡಿರುವ ಕಾರಣ ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.‌ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಜನರು ಸಂಚರಿಸಲು ವಿಳಂಬ ಆಯಿತು.

ಸಿಎಂ ಸಿಟಿ ರೌಂಡ್ಸ್ ಅಂಗವಾಗಿ ಪ್ರಮುಖವಾಗಿ ಮೈಸೂರು ರಸ್ತೆ, ಬನಶಂಕರಿ ದೇಗುಲ, ಜೆ.ಪಿ.ನಗರ, ದಾಲ್ಮಿಯಾ ಜಂಕ್ಷನ್, ಬನ್ನೇರು ಘಟ್ಟ ರಸ್ತೆ, ವಿಜಯಾ ಬ್ಯಾಂಕ್ ಲೇಔಟ್, ಕೋಡಿಚಿಕ್ಕನಹಳ್ಳಿ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಂಚಾರ ನಡೆಸಿದರು. ಸಾಮಾನ್ಯವಾಗಿ ವಾಹನ‌ದಟ್ಟಣೆ ಇರುವ ಈ ರಸ್ತೆಗಳಲ್ಲಿ ಸಿಎಂ ಸಿಟಿ ರೌಂಡ್ಸ್ ಮಾಡಿದ್ದರಿಂದ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡು ಬಂದಿತು.

ಇದನ್ನೂಓದಿ:ಸಿಎಂ ಸಿಟಿ ರೌಂಡ್ಸ್: ರಾಜಕಾಲುವೆ ಕಾಮಗಾರಿಗಳ ಪರಿಶೀಲನೆ ಬಳಿಕ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳೇನು? - Siddaramaiah City Rounds

ETV Bharat Logo

Copyright © 2024 Ushodaya Enterprises Pvt. Ltd., All Rights Reserved.