ETV Bharat / state

ಎಲ್ಲಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ: ಡಿಸಿಎಂ ಡಿಕೆಶಿ

author img

By ETV Bharat Karnataka Team

Published : Feb 24, 2024, 6:37 PM IST

ಕುಮಾರ ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದ್ದಾರೆ. ಅದರಂತೆ ಎಲ್ಲ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್​ ಪಕ್ಷಕ್ಕೆ ಬನ್ನಿ ಎಂದು ಡಿಕೆ ಶಿವಕುಮಾರ್​ ಆಹ್ವಾನಿಸಿದರು.

All party workers  Congress party  DCM DK Shivakumar  ಕಾಂಗ್ರೆಸ್ ಪಕ್ಷ  ಡಿಸಿಎಂ ಡಿಕೆ ಶಿವಕುಮಾರ್​
ಎಲ್ಲಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ: ಡಿಸಿಎಂ ಡಿಕೆಶಿ
ಡಿಸಿಎಂ ಡಿಕೆಶಿ ಮತ್ತು ಗೋಪಾಲಕೃಷ್ಣ ಬೇಳೂರು ಹೇಳಿಕೆ

ಶಿವಮೊಗ್ಗ: ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಉದ್ಘಾಟಿಸಿದರು. ಸಮಾವೇಶವನ್ನು ದೀಪ ಬೆಳಗಿಸಿ, ಹೊಂಬಾಳೆಯನ್ನು ಬಿಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಅಲ್ಲಮಪ್ರಭು ಮೈದಾನದಲ್ಲಿ ಗ್ಯಾರಂಟಿ ಸಮಾವೇಶವನ್ನು ನಡೆಸಲಾಗುತ್ತಿದೆ. ಸಮಾವೇಶದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಹಿಸಿದ್ದಾರೆ.

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಆರ್‌.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ್, ಡಿಸಿ ಎಸ್ಪಿ ಸೇರಿದಂತೆ ಗ್ಯಾರಂಟಿ ಫಲಾನುಭವಿಗಳಾದ ಮಹಿಳೆಯರು ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದಕ್ಕೂ ಮುನ್ನ ವಚನಕಾರ ಅಲ್ಲಮ ಪ್ರಭು ಮೈದಾನದ ಮುಂಬಾಗ ಅಲ್ಲಮ ಪ್ರಭುರವರ ವಚನಗಳ ಫಲಕವನ್ನು ಅನಾವರಣವನ್ನು ಹಾಗೂ ಶಕ್ತಿ ಯೋಜನೆಗೆ ಕೆಎಸ್​ಆರ್​ಟಿಸಿಯ 10 ಬಸ್​ಗಳಿಗೆ ಚಾಲನೆಯನ್ನು ಡಿಸಿಎಂ ಶಿವಕುಮಾರ್ ನೀಡಿದರು.

ಎಲ್ಲಾ ಪಕ್ಷದ ಕಾರ್ಯಕರ್ತರ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ: ಎಲ್ಲಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಹ್ವಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಪಕ್ಷದ ಸಿದ್ಧಾಂತ ಒಪ್ಪಿ ಯಾರಾದರೂ ಸಹ ಬರಬಹುದು. ಎಲ್ಲಾ ಪಕ್ಷದ ಕಾರ್ಯಕರ್ತರು ಟೈಮ್ ವೇಸ್ಟ್ ಮಾಡಬೇಡಿ, ವಯಸ್ಸು ಆಗ್ತಾ ಇರುತ್ತದೆ. ನನಗೆ ಈಗ 62 ನೇ ವಯಸ್ಸಿನ ಕಡೆ ಹೋಗುತ್ತಿದ್ದೇನೆ. ಅದೇ ರೀತಿ ಎಲ್ಲಾರಿಗೂ ವಯಸ್ಸಾಗುತ್ತಿರುತ್ತದೆ. ಇದರಿಂದ ಎಲ್ಲಾರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು. ಇಷ್ಟು ದಿನ ಬೇರೆ ಪಕ್ಷದ ಶಾಸಕರನ್ನು, ನಾಯಕರನ್ನು ಪಕ್ಷಕ್ಕೆ ಕರೆ ತರುವ ಮಾತನನ್ನು ಆಡುತ್ತಿದ್ದರು. ಆದರೆ ಡಿ.ಕೆ. ಶಿವಕುಮಾರ್ ಅವರು ಈಗ ಪಕ್ಷದ ಕಾರ್ಯಕರ್ತರನ್ನೆ ಪಕ್ಷಕ್ಕೆ ಬರಲು ಆಹ್ವಾನ ನೀಡುತ್ತಿರುವುದು ನಿಜಕ್ಕೂ ವಿಶೇವಾಗಿದೆ. ಬೇರೆ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಬಂದಂತೆ, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರಾ ಎಂದು ಕಾದು ನೋಡಬೇಕಿದೆ.

ಮೇಲ್ಮನೆಯಲ್ಲಿ ನಮ್ಮ ಬಿಲ್ ಪಾಸು ಮಾಡಿಸುತ್ತೇವೆ: ದೂರದ ಆಲೋಚನೆ ಮಾಡಿ, ದೇವಾಲಯಗಳಿಗೆ ಸಹಾಯ ಮಾಡಬೇಕು ಎಂದು ಹೊಸ ಬಿಲ್ ಪಾಸ್ ಮಾಡೋಕೆ ಪ್ರಯತ್ನ ಮಾಡಿದ್ದೆವು. ಆದರೆ ಬಿಲ್ ಪಾಸ್ ಆಗಿಲ್ಲ. ಮುಂದೆ ಬಿಲ್ ಪಾಸ್ ಆಗುತ್ತದೆ. ಅರ್ಚಕರಿಗೆ ಒಳ್ಳೆಯದು ಮಾಡೋಕೆ ಹೊರಟಿದ್ದೆವು. ಆದ್ರೆ ಎರಡು ಪಾರ್ಟಿಯವರು ವಿರೋಧ‌ ಮಾಡಿದ್ದಾರೆ. ದೇವಾಲಯದ ಜೀರ್ಣೋದ್ಧಾರ ಮಾಡಲು ಪ್ರಯತ್ನ ಮಾಡಿದ್ದೆವು. ಬಿಜೆಪಿಯವರು ಧರ್ಮ, ದೇವಾಲಯಗಳಿಗೆ ವಿರೋಧಿ ಎಂದು ಅವರೇ ಸಾಬೀತು ಮಾಡಿದ್ದಾರೆ. ಬಿಲ್ ಪಾಸ್ ಮಾಡೋದು ಯಾರು ತಪ್ಪಿಸಲು ಸಾಧ್ಯವಿಲ್ಲ. ಬಿಲ್ ಪಾಸ್ ಮಾಡೇ ಮಾಡುತ್ತೆವೆ. ಸಂಕಲ್ಪ ಮಾಡಿದ್ದೀವಿ, ದೇವಾಲಯ ಅಭಿವೃದ್ಧಿ ಮಾಡುತ್ತೇವೆ. ಅರ್ಚಕರು ಇದನ್ನು ಗೌರವಿಸಿದ್ದಾರೆ. ಅವರ ಸಮ್ಮೇಳನಕ್ಕೆ ನಾವು ಹೋಗುತ್ತೇವೆ ಎಂದರು.

ಕುಮಾರ ಬಂಗಾರಪ್ಪ ಸೇರ್ಪಡೆ ಬಗ್ಗೆ ಕಾಂಗ್ರೆಸ್​ ಹೇಳಿದ್ದು ಹೀಗೆ: ಮಾಜಿ ಸಚಿವ ಕುಮಾರ ಬಂಗಾರಪ್ಪನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ಕೈಗಾರಿಕ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕುಮಾರ ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಯುತ್ತಿದೆ. ಯಡಿಯೂರಪ್ಪನವರು ಪಕ್ಷ ಬಿಡದಂತೆ ಕಟ್ಟಿಹಾಕೊಂಡಿದ್ದಾರೆ. ನಾವು ಹಗ್ಗ ಕಟ್ಟಲು ಹೋಗಿದ್ದೆವು. ಹಗ್ಗ ಕಟ್ ಆಗಿದೆ ಎಂದರು.

ಪಕ್ಷ ಅಂತಾ ಬಂದಾಗ ಸಹೋದರ ಅಂತ ಬರಲ್ಲ ಎಂದು ಕುಮಾರ ಬಂಗಾರಪ್ಪ ಸೇರ್ಪಡೆ ಕುರಿತು ಮಧು ಬಂಗಾರಪ್ಪ ಆಕ್ಷೇಪ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದರು. ಅದೇ ರೀತಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಗುವ ಸಾಧ್ಯತೆ ಇದೆ ಎಂದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಏಕವಚನ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳು ಜ್ಞಾನ ಇಟ್ಟುಕೊಂಡು ಮಾತಾಡಬೇಕು. ಹಿರಿಯ ಸಂಸದರು ಗೌರವದಿಂದ ಇರಬೇಕು. ಅನಂತ ಕುಮಾರ ಹೆಗಡೆ ಹತಾಶರಾಗಿ ಮಾತನಾಡುತ್ತಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ ತಲೆಕೆಟ್ಟಿದೆ. ಅವರಿಗೆ ಟಿಕೆಟ್ ಸಿಗಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರೆ ಟೀಕಿಸಿದರು. ಇನ್ನು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಬೇಳೂರು ವ್ಯಕ್ತಪಡಿಸಿದರು.

ಓದಿ: ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.