ETV Bharat / state

ಹಾಸನದಿಂದ ಜೀರೋ ಟ್ರಾಫಿಕ್​ನಲ್ಲಿ​ ವಿಶೇಷ ಚೇತನ ಬಾಲಕ ಬೆಂಗಳೂರಿಗೆ ಶಿಫ್ಟ್​ - Zero Traffic

author img

By ETV Bharat Karnataka Team

Published : May 25, 2024, 3:23 PM IST

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಾಸನ ಮೂಲದ ಬಾಲಕನನ್ನು ಜೀರೋ ಟ್ರಾಫಿಕ್​ ವ್ಯವಸ್ಥೆಯೊಂದಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸಾಗಿಸಲಾಗಿದೆ.

ಜೀರೋ ಟ್ರಾಫಿಕ್​
ಜೀರೋ ಟ್ರಾಫಿಕ್​ (ETV Bharat)

ಹಾಸನ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 14 ವರ್ಷದ ವಿಶೇಷ ಚೇತನ ಬಾಲಕನನ್ನು ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ​ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಅಮ್ಜದ್ ಪಾಷಾ ಮತ್ತು ರಜೀಯಾ ಬೇಗಂ ದಂಪತಿ ಪುತ್ರ ಹದಿನಾಲ್ಕು ವರ್ಷದ ಮಹಮದ್ ಕೈಫ್ ಕಳೆದ ನಾಲ್ಕು ದಿನಗಳಿಂದ ಹಿಮ್ಸ್​ನ ಶ್ರೀಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರದಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸಾಗಿಸಲಾಯಿತು.

ಜೀರೋ ಟ್ರಾಫಿಕ್​ ವ್ಯವಸ್ಥೆಯಿಂದ 3 ಗಂಟೆಯಲ್ಲಿ ಜಯದೇವ ಆಸ್ಪತ್ರೆಗೆ ವಿಶೇಷ ಆಂಬ್ಯುಲೆನ್ಸ್​ ಮೂಲಕ ಸಾಗಿಸಲಾಗಿದೆ. ಒಟ್ಟು ಮೂರು ಆಂಬ್ಯುಲೆನ್ಸ್ ಜೊತೆ ಪೊಲೀಸ್ ವಾಹನವು ಕೂಡ ಸಾಗಿತು. ಈ ವೇಳೆ ರಸ್ತೆ ಉದ್ದಗಲಕ್ಕೂ ಜೀರೋ ಟ್ರಾಫಿಕ್​ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನದ ಯುವತಿಯ ಎದೆಯಲ್ಲಿ ಭಾರತೀಯನ ಹೃದಯ ಮಿಡಿತ: ಚೆನ್ನೈನಲ್ಲಿ ಯಶಸ್ವಿ ಕಸಿ ಚಿಕಿತ್ಸೆ - INDIAN HEART BEATS Pakistan Girl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.