ETV Bharat / state

ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತನ ಟ್ರ್ಯಾಕ್ಟರ್​ ಸವಾಲು ಸ್ವೀಕರಿಸಿದ ಬಿಜೆಪಿ ಕಾರ್ಯಕರ್ತ - FARMERS BETTING ON RESULT

author img

By ETV Bharat Karnataka Team

Published : May 15, 2024, 12:28 PM IST

ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರೈತ ರವೀಂದ್ರ ಲೋಕಸಭಾ ಚುನಾವಣೆಗಾಗಿ ತನ್ನ ಟ್ರ್ಯಾಕ್ಟರನ್ನೇ ಬಾಜಿ ಕಟ್ಟಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಈ ಕಟ್ಟಿರುವ ಬಾಜಿಯನ್ನು ಬಿಜೆಪಿ ಕಾರ್ಯಕರ್ತರೊಬ್ಬರು ಸ್ವೀಕರಿಸಿದ್ದಾರೆ.

BJP WORKER ACCEPTED  FARMER BETTING ON ELECTION RESULT  CONGRESS WORKER  SHIVAMOGGA
ಕಾಂಗ್ರೆಸ್ ಕಾರ್ಯಕರ್ತನ ಟ್ರ್ಯಾಕ್ಟರ ಸವಾಲು ಸ್ವೀಕರಿಸಿದ ಬಿಜೆಪಿ ಕಾರ್ಯಕರ್ತ (ಕೃಪೆ: ETV Bharat)

ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿದ ನಂತರ ಈಗ ಎಲ್ಲಾ ಪಕ್ಷಗಳು ತಮ್ಮ ಗೆಲುವು ಹಾಗೂ ಗೆಲುವಿನ ಅಂತರದ ಬಗ್ಗೆ ಚರ್ಚೆ ನಡೆಸುತ್ತಿವೆ. ಈ ನಡುವೆ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಪರಸ್ಪರ ಬಾಜಿ ಕಟ್ಟುತ್ತಿದ್ದಾರೆ‌.

ಕೆಲ ದಿನಗಳ ಹಿಂದೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ರೈತ ರವೀಂದ್ರ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಅವರು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ತಮ್ಮ ಬಳಿಯ ಟ್ರ್ಯಾಕ್ಟರ್​ ಅನ್ನು ಪಣಕ್ಕೆ ಇಟ್ಟಿದ್ದರು. ಕಾಂಗ್ರೆಸ್ ಕಾರ್ಯಕರ್ತ ರವೀಂದ್ರ ಅವರು ಹಾಕಿದ ಈ ಸವಾಲನ್ನು ಶಿಕಾರಿಪುರ ಪಟ್ಟಣದ ರೈತ ಮಂಜುನಾಥ್ ಸ್ವೀಕಾರ ಮಾಡಿದ್ದಾರೆ.

ಮಂಜುನಾಥ್​ ಅವರು ಗೀತಾ ಶಿವರಾಜ್​ಕುಮಾರ್ ಅವರು ಗೆದ್ದೇ ಗೆಲ್ಲುತ್ತಾರೆಂದು ತಮ್ಮ ಟ್ರ್ಯಾಕ್ಟರ ಅನ್ನು ಪಣಕ್ಕೆ ಇಟ್ಟಿದ್ದಾರೆ. ನಾವು ಅವರ ಸವಾಲನ್ನು ಸ್ವೀಕಾರ ಮಾಡುತ್ತೇವೆ. ನಮ್ಮ ಅಭ್ಯರ್ಥಿ ಬಿ‌.ವೈ. ರಾಘವೇಂದ್ರ ಅವರು ಗೆಲ್ಲುವುದಷ್ಟೇ ಅಲ್ಲ, ಬಹುಮತದಿಂದ ದಿಗ್ವಿಜಯ ಸಾಧಿಸುತ್ತಾರೆ. ರವೀಂದ್ರ ಅವರು ಯಾವ ಟ್ರ್ಯಾಕ್ಟರ ಪಣಕ್ಕೆ ಇಡುತ್ತಾರೂ ನಾವು ಅದೇ ಟ್ರ್ಯಾಕ್ಟರ ಅನ್ನು ಬಾಜಿ ಕಟ್ಟುತ್ತೇವೆ. ಅಂದ್ರೆ ಹಳೆ ಟ್ರ್ಯಾಕ್ಟರ್​ ಆದ್ರೆ ಹಳೇ ಟ್ರ್ಯಾಕ್ಟರ್​ ಅಥವಾ ಹೊಸ ಟ್ರ್ಯಾಕ್ಟರ್​ ಅಂದ್ರೆ ಹೊಸ ಟ್ರ್ಯಾಕ್ಟರ್ ಅನ್ನು ನಾವು ಪಣಕ್ಕೆ ಇಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಕಾರ್ಯಕರ್ತನ ಸವಾಲಿಗೆ ಬಿಜೆಪಿ ಕಾರ್ಯಕರ್ತ ಸವಾಲನ್ನು ಸ್ವೀಕಾರ ಮಾಡಿದಂತೆ ಆಗಿದೆ.

ಕಾಂಗ್ರೆಸ್ ಕಾರ್ಯಕರ್ತ ರವೀಂದ್ರ ಸವಾಲು ಹಾಕಿದಾಗ ಅದನ್ನು ಬಿಜೆಪಿ ಕಾರ್ಯಕರ್ತರು ಸ್ವೀಕಾರ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದರಿಂದ ಪ್ರೇರೇಪಣೆ ಪಡೆದು ನಾನು ರವೀಂದ್ರ ಅವರ ಸವಾಲನ್ನು ಸ್ವೀಕಾರ ಮಾಡಿರುವುದಾಗಿ 'ಈಟಿವಿ ಭಾರತ'ಗೆ ಸವಾಲು ಸ್ವೀಕಾರ ಮಾಡಿರುವ ಮಂಜುನಾಥ ತಿಳಿಸಿದ್ದಾರೆ.

ಓದಿ: ಶಿವಮೊಗ್ಗ: ಗೀತಾ ಶಿವರಾಜ್​ಕುಮಾರ್ ಗೆಲ್ತಾರೆಂದು ಹೊಸ ಟ್ರ್ಯಾಕ್ಟರನ್ನೇ ಪಣಕ್ಕಿಟ್ಟ ರೈತ! - FARMER BETTING ON ELECTION RESULT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.