ETV Bharat / sports

ಕಗಿಸೊ ರಬಾಡ ಪಾಡ್‌ಕಾಸ್ಟ್‌ ವೇಳೆ ವಿರಾಟ್​ ಡ್ಯಾನ್ಸ್​; ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್ - Kohli Makes Guest Appearance

author img

By ETV Bharat Karnataka Team

Published : May 9, 2024, 4:16 PM IST

Updated : May 9, 2024, 4:31 PM IST

ಪಂಜಾಬ್ ಕಿಂಗ್ಸ್ ತಂಡದ ವೇಗಿ ಕಗಿಸೊ ರಬಾಡ ಪಾಡ್‌ಕಾಸ್ಟ್‌ ವೇಳೆ ಆರ್​ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ​ ಡ್ಯಾನ್ಸ್​ ಮಾಡುತ್ತಾ ಎಂಟ್ರಿ ಕೊಟ್ಟು ಅತಿಥಿಯಾಗಿ ಕಾಣಿಸಿಕೊಂಡ ವಿಡಿಯೋ ಸೆರೆಯಾಗಿದೆ.

Kagiso Rabada,  Virat Kohli
ಕಗಿಸೊ ರಬಾಡ, ವಿರಾಟ್ ಕೊಹ್ಲಿ (IANS)

ಹೈದರಾಬಾದ್: ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಮೈದಾನದ ಒಳಗೆ ಮತ್ತು ಹೊರಗೆ ಆಗಾಗ್ಗೆ ತಮಾಷೆ ಮಾಡುತ್ತಲೇ ಇರುತ್ತಾರೆ. ತಮ್ಮ ಬ್ಯಾಟ್ ಮಾತ್ರವಲ್ಲದೇ, ಕೆಲವೊಮ್ಮೆ ಕ್ರೇಜಿ ವರ್ತನೆಗಳಿಂದಲೂ ರನ್​ ಮಿಷನ್​ ಸುದ್ದಿ ಆಗುತ್ತಾರೆ. ಇದೀಗ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಪಾಡ್‌ಕಾಸ್ಟ್‌ ವೇಳೆ ವಿರಾಟ್​ ಡ್ಯಾನ್ಸ್​ ಮಾಡಿ ತಮಾಷೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್​ ಕೊಹ್ಲಿ ಈಗ ಐಪಿಎಲ್​ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಪ್ರಮುಖ ಆಟಗಾರರಾಗಿದ್ದಾರೆ. ಕಗಿಸೊ ರಬಾಡ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್​ ಆಗಿದ್ದಾರೆ. ಇಂದು ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನವೇ ವಿರಾಟ್ ಹಾಗೂ ರಬಾಡ ಒಟ್ಟಿಗೆ ಇರುವ ದೃಶೃಗಳು ಗಮನ ಸೆಳೆದಿವೆ.

ಈ ವಿಡಿಯೋ ಪ್ರಕಾರ, 'ವಿಲೋ ಟಾಕ್' ಎಂಬ ಪಾಡ್‌ಕಾಸ್ಟ್​ನಲ್ಲಿ ಕಗಿಸೊ ರಬಾಡ ಮಾತನಾಡುತ್ತಿದ್ದರು. ಈ ವೇಳೆ, ವೇಗಿ ರಬಾಡ ಮುಂದೆ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಕೊಹ್ಲಿ ಕಾಣಸಿಕೊಂಡಿದ್ದರಿಂದ ರಬಾಡ ಅಚ್ಚರಿ ಪಟ್ಟಿದ್ದಾರೆ. ಅಲ್ಲದೇ, ಪಾಡ್‌ಕ್ಯಾಸ್ಟ್​ನಲ್ಲಿ ಸಂವಾದ ಮಾಡುತ್ತಲೇ ರಬಾಡ, ವಿರಾಟ್ ಕೊಹ್ಲಿ ಬಂದ್ರು, ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹೇಳುವುದು ಕೇಳಿಬಹುದು. ಇಷ್ಟೇ ಅಲ್ಲ, ಪಾಡ್‌ಕಾಸ್ಟ್​ ಸಂದರ್ಶನಕಾರರೊಂದಿಗೂ ವಿರಾಟ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ.

ಇಂದು ಮಹತ್ವದ ಪಂದ್ಯ: ಐಪಿಎಲ್​ ಟೂರ್ನಿಯಲ್ಲಿ ಇಂದು ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಯಾವುದೇ ತಂಡ ಇಂದಿನ ಮ್ಯಾಚ್​ ಗೆದ್ದ ಮಾತ್ರ ಪ್ಲೇ ಆಫ್​ ಕನಸು ಜೀವಂತವಾಗಿರಲಿದೆ. ಸೋತ ತಂಡಕ್ಕೆ ಪ್ಲೇ ಆಫ್​ ಬಾಗಿಲು ಮುಚ್ಚಲಿದೆ. ಆದ್ದರಿಂದ ಎರಡೂ ತಂಡಗಳಿಗೆ ಇದು ಮಾಡು ಇಲ್ಲ ಮಡಿ ಪಂದ್ಯವಾಗಿದೆ.

ಅಂಕ ಪಟ್ಟಿಯಲ್ಲಿ ಆರ್​ಸಿಬಿ ಮತ್ತು ಪಂಜಾಬ್ ತಲಾ 8 ಪಾಯಿಂಟ್ಸ್​ ಹೊಂದಿವೆ. ಆದರೆ, ರನ್​ರೇಟ್ ಆಧಾರದ ಮೇಲೆ ಪಂಜಾಬ್​ಕ್ಕಿಂತ ಬೆಂಗಳೂರು ಒಂದು ಸ್ಥಾನ ಮೇಲಿದೆ. ಉಭಯ ತಂಡಗಳು ಇದುವರೆಗೆ ತಲಾ 11 ಪಂದ್ಯಗಳನ್ನು ಆಡಿವೆ. ಇದರಲ್ಲಿ 4 ಪಂದ್ಯಗಳಲ್ಲಿ ಗೆದ್ದು 7ರಲ್ಲಿ ಸೋಲು ಕಂಡಿವೆ. ಹೀಗಾಗಿ ಬೆಂಗಳೂರು, ಪಂಜಾಬ್​ ಕ್ರಮವಾಗಿ 7 ಮತ್ತು 8ನೇ ಸ್ಥಾನ ಹೊಂದಿವೆ.

ಇದನ್ನೂ ಓದಿ: IPLನಲ್ಲಿಂದು ಪಂಜಾಬ್​ VS ಬೆಂಗಳೂರು ಫೈಟ್​: ಉಭಯ ತಂಡಗಳಿಗೆ ಮಾಡು ಇಲ್ಲ ಮಡಿ ಪಂದ್ಯ

Last Updated : May 9, 2024, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.