ETV Bharat / sports

ಐಪಿಎಲ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕಿಂಗ್​ ​​ಕೊಹ್ಲಿ! - Virat Kohli

author img

By ANI

Published : May 12, 2024, 7:25 PM IST

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಆರ್​ಸಿಬಿಯ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲಿದ್ದಾರೆ.

ಐಪಿಎಲ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕಿಂಗ್​ ​​ಕೊಹ್ಲಿ!
ಐಪಿಎಲ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕಿಂಗ್​ ​​ಕೊಹ್ಲಿ! (ETV Bharat)

ಹೈದರಾಬಾದ್: ಐಪಿಎಲ್​ನ 62ನೇ ಪಂದ್ಯದಲ್ಲಿಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ತುಂಬಾ ವಿಶೇಷವಾಗಿದೆ. ತಮ್ಮ ಹೆಸರಿನಲ್ಲಿ ಎರಡು ದೊಡ್ಡ ದಾಖಲೆಗಳನ್ನು ಅವರು ಬರೆಯಲಿದ್ದು, ಐಪಿಎಲ್ ಇತಿಹಾಸದಲ್ಲಿ ಯಾವೊಬ್ಬ ಆಟಗಾರನೂ ಮಾಡದ ದಾಖಲೆ ಮಾಡುವ ತವಕದಲ್ಲಿದ್ದಾರೆ.

ಕೊಹ್ಲಿ ದಾಖಲೆ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಇಂದಿನ ಪಂದ್ಯ ವಿರಾಟ್ ಕೊಹ್ಲಿ ವೃತ್ತಿ ಜೀವನದ 250ನೇ ಪಂದ್ಯವಾಗಲಿದೆ. ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ನಾಲ್ಕನೇ ಆಟಗಾರ ಎಂಬ ದಾಖಲೆ ಕೊಹ್ಲಿ ಬರೆಯಲಿದ್ದಾರೆ. ಮತ್ತೊಂದೆಡೆ ಐಪಿಎಲ್​ನಲ್ಲಿ ಒಂದೇ ತಂಡಕ್ಕಾಗಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಮಾಡಲಿದ್ದಾರೆ. ಈ ಮೊದಲು ಐಪಿಎಲ್‌ನಲ್ಲಿ ಯಾವುದೇ ಆಟಗಾರರು ಒಂದೇ ತಂಡಕ್ಕಾಗಿ ಇಷ್ಟು ಪಂದ್ಯಗಳನ್ನು ಆಡಿಲ್ಲ.

ಕೊಹ್ಲಿ ಐಪಿಎಲ್​ ದಾಖಲೆ: 2008ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕೊಹ್ಲಿ ಆರ್​ಸಿಬಿಯ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಅವರು 38.71 ಸರಾಸರಿಯಲ್ಲಿ 7897 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 55 ಅರ್ಧ ಶತಕ ಹಾಗೂ 8 ಶತಕಗಳನ್ನು ಅವರು ಸಿಡಿಸಿದ್ದಾರೆ. 113* ಹೈಸ್ಕೋರ್​ ಆಗಿದೆ. ಪ್ರಸಕ್ತ ಋತುವಿನಲ್ಲಿ 12 ಪಂದ್ಯಗಳನ್ನು ಆಡಿರುವ ಕೊಹ್ಲಿ 634 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕ ಮತ್ತು 1 ಶತಕ ಸೇರಿದೆ. ಸದ್ಯ ಸೀಸನ್​ನ ಹೈಸ್ಕೋರ್ ಆಗಿ ಆರೆಂಜ್ ಕ್ಯಾಪ್​ ಅನ್ನು ಹೊಂದಿದ್ದಾರೆ.

ಅತಿಹೆಚ್ಚು ಐಪಿಎಲ್​ ಪಂದ್ಯಗಳಾಡಿದ ಆಟಗಾರರು: ಅತಿ ಹೆಚ್ಚು ಐಪಿಎಲ್​ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೂ 262 ಪಂದ್ಯಗಳನ್ನು ಆಡಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ (256), ದಿನೇಶ್ ಕಾರ್ತಿಕ್ (254), ವಿರಾಟ್ ಕೊಹ್ಲಿ (249), ರವೀಂದ್ರ ಜಡೇಜಾ (238) ನಂತರ ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ: IPL: ಆರ್​ಸಿಬಿ VS ಡೆಲ್ಲಿ ಕಾದಾಟ: ಮಾಡು ಇಲ್ಲ ಮಡಿ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ - RCB VS DC

ETV Bharat Logo

Copyright © 2024 Ushodaya Enterprises Pvt. Ltd., All Rights Reserved.