ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು ಜನನ; ವಿಭಿನ್ನವಾಗಿ ಹೆಸರಿಟ್ಟ ವಿರುಷ್ಕಾ ಜೋಡಿ

author img

By ETV Bharat Karnataka Team

Published : Feb 20, 2024, 10:25 PM IST

ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ

ಟೀಮ್​ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಗಂಡು ಮಗು ಜನಿಸಿದೆ.

ಹೈದರಾಬಾದ್ : ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ವಿರುಷ್ಕಾ ದಂಪತಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಜೂನಿಯರ್​ ಕೊಹ್ಲಿಗೆ ವಿಭಿನ್ನವಾಗಿ "ಅಕಾಯ್​" ಎಂದು ಹೆಸರಿಟ್ಟಿದ್ದಾರೆ.

ವಿರಾಟ್​ ಕೊಹ್ಲಿ ತಮ್ಮ ಪೋಸ್ಟ್​ನಲ್ಲಿ " ಕಳೆದ ಫೆಬ್ರವರಿ 15 ರಂದು ಬಹಳ ಸಂತೋಷದಿಂದ ನಮ್ಮ ಎರಡನೇ ಮಗುವನ್ನು ಬರಮಾಡಿಕೊಂಡೆವು, ವಮಿಕಾ ಈಗ ಅಕ್ಕ ಆಗಿದ್ದಾಳೆ. ನಮ್ಮ ಮಗನಿಗೆ ಅಕಾಯ್​ ಎಂದು ಹೆಸರಿಟ್ಟಿದ್ದೇವೆ. ಈ ವೇಳೆ ನಿಮ್ಮ ಹಾರೈಕೆ, ಆಶೀರ್ವಾದ ನಮಗೆ ಬೇಕು. ಜೊತೆಗೆ ದಯವಿಟ್ಟು ನಮ್ಮ ಪ್ರೈವೆಸಿಯನ್ನು ಗೌರವಿಸಿ ಎಂದು ಹೇಳಿದ್ದಾರೆ. "ಅಕಾಯ್" ಎಂದರೆ ಹುಣ್ಣಿಮೆ ಚಂದ್ರ ಎಂದರ್ಥ.

2021 ಜನವರಿ 11 ರಂದು ವಿರಾಟ್‌ ಮತ್ತು ಅನುಷ್ಕಾ ದಂಪತಿಗಳಿಗೆ ಮೊದಲು ಮಗಳು ವಮಿಕಾ ಜನಿಸಿದ್ದಳು. ಆ ನಂತರದಲ್ಲಿ ಈಗ ಮಗ ಹುಟ್ಟಿದ್ದಾನೆ. ಈವರೆಗೂ ತಮ್ಮ ಮೊದಲ ಮಗು ವಮಿಕಾಳ ಫೋಟೋವನ್ನು ಎಲ್ಲಿಯೂ ರಿವೀಲ್​ ಮಾಡಿಲ್ಲ. ಆದರೂ ಐಪಿಎಲ್​ ಸಂದರ್ಭದಲ್ಲಿ ವಮಿಕಾ ಮುಖ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಎಲ್ಲೆಡೆ ವೈರಲ್​ ಕೂಡ ಆಗಿತ್ತು. ಒಂದಷ್ಟು ಅಭಿಮಾನಿಗಳು ಮಗು ಕೊಹ್ಲಿ ತರ ಇದೆ ಅಂದರೆ, ಇನ್ನೊಂದಷ್ಟು ಅಭಿಮಾನಿಗಳು ಅನುಷ್ಕಾ ತರ ಇದೆ ಎಂದಿದ್ದರು.

ಇದನ್ನೂ ಓದಿ : 2ನೇ ಮಗುವಿನ ನಿರೀಕ್ಷೆಯಲ್ಲಿ 'ವಿರುಷ್ಕಾ' ದಂಪತಿ: ಮಾಹಿತಿ ಖಚಿತಪಡಿಸಿದ ಎಬಿ ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.