ಅಂಡರ್‌ಡಾಗ್ಸ್ ಹಣೆಪಟ್ಟಿಯೊಂದಿಗೆ ಡಬ್ಲ್ಯುಪಿಎಲ್‌ ಪ್ರವೇಶಿಸಲು ಬೇಸರವಿಲ್ಲ: ಯುಪಿ ವಾರಿಯರ್ಸ್ ನಾಯಕಿ ಅಲೀಸಾ ಹೀಲಿ

author img

By ETV Bharat Karnataka Team

Published : Feb 23, 2024, 7:51 PM IST

Updated : Feb 24, 2024, 11:34 AM IST

ಅಂಡರ್‌ಡಾಗ್ಸ್ ಹಣೆಪಟ್ಟಿಯೊಂದಿಗೆ ಡಬ್ಲ್ಯುಪಿಎಲ್‌ ಪ್ರವೇಶಿಸಲು ಬೇಸರವಿಲ್ಲ

ಯುಪಿ ವಾರಿಯರ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಕಷ್ಟು ಸಮತೋಲನ ಹೊಂದಿದೆ ಎಂದು ತಂಡದ ನಾಯಕಿ ಅಲೀಸಾ ಹೀಲಿ ತಿಳಿಸಿದ್ದಾರೆ.

ಬೆಂಗಳೂರು: ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಅಂಡರ್‌ಡಾಗ್ಸ್ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯಲು ನಮಗೆ ಯಾವುದೇ ಬೇಸರವಿಲ್ಲ ಎಂದು ಯುಪಿ ವಾರಿಯರ್ಸ್ ತಂಡದ ನಾಯಕಿ ಅಲೀಸಾ ಹೀಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಡರ್ ಡಾಗ್ಸ್ ಟ್ಯಾಗ್‌ನಿಂದ ಆರಂಭಿಸಿ ದೊಡ್ಡ ಫ್ರಾಂಚೈಸಿಗಳನ್ನ ನಾಕೌಟ್ ಮಾಡಬಲ್ಲ ನಂಬಿಕೆ ನಮಗಿದೆ, ಸಂತೋಷವಿದೆ ಎಂದು ಹೀಲಿ ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಉತ್ತಮ ಆರಂಭದ ನಿರೀಕ್ಷೆ ಹೊಂದಿರುವ ಯುಪಿ ವಾರಿಯರ್ಸ್ ತಂಡದ ಕುರಿತು ಮಾತನಾಡಿದ ನಾಯಕಿ ಅಲೀಸಾ ಹೀಲಿ, ''ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಕಷ್ಟು ಸಮತೋಲನ ಹೊಂದಿದೆ. ಚಾಮರಿ ಅಟಪಟ್ಟು ಸೇರ್ಪಡೆ ಬಳಿಕ‌ ಆಡುವ ಹನ್ನೊಂದರ ಆಯ್ಕೆಯ ಬಗ್ಗೆ ಸವಾಲುಗಳು ಇರುವುದು ಸಹಜ. ಆದರೆ ಇಂಥಹ ಸವಾಲುಗಳು ತಂಡಕ್ಕೆ ನಿಜವಾಗಿಯೂ ಉತ್ತಮ ಬೆಳವಣಿಗೆ ಎಂದರು. ನಿಜವಾಗಿಯೂ ಸ್ಪರ್ಧೆಯುದ್ದಕ್ಕೂ ನಮಗೆ ಇದು ಕ್ರಿಯಾತ್ಮಕ ತಂಡವಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಅನೇಕ ಉತ್ತಮ ಆಟಗಾರರಿದ್ದು, ತಮ್ಮ ತಾಕತ್ತೇನು ಎಂಬುದನ್ನ ಜಗತ್ತಿಗೆ ತೋರಿಸಲು ಕಾಯುತ್ತಿದ್ದಾರೆ ಎಂದು ಹೀಲಿ ಭರವಸೆ ವ್ಯಕ್ತಪಡಿಸಿದರು.

ತಂಡದಲ್ಲಿನ ವಾತಾವರಣದಲ್ಲಿ ಎಲ್ಲರೂ ಆನಂದಮಯವಾಗಿ ಸಮಯವನ್ನು ಕಳೆಯುವುದು ಮುಖ್ಯ ಎಂದು ವಿವರಿಸಿದ ಅವರು "WPLನಲ್ಲಿ ಸಾಕಷ್ಟು ಒತ್ತಡವಿದೆ ಮತ್ತು ಒಟ್ಟಾರೆಯಾಗಿ, ಇದು ಬಹಳಷ್ಟು ಯುವ ಆಟಗಾರರಿಗೆ ಹೊಸ ಅನುಭವವಾಗಿದೆ. ಈ ಗುಂಪಿನಲ್ಲಿ ಕಳೆದ ವರ್ಷ ಬಹಳಷ್ಟು ಆಟಗಾರರು ಪಂದ್ಯಾವಳಿಯನ್ನು ಆನಂದಿಸಿದ್ದಾರೆ ಮತ್ತು ಈ ವರ್ಷ ಸಹ ಅದು ಭಿನ್ನವಾಗಿರುವುದಿಲ್ಲ ಎಂದು ಭಾವಿಸುತ್ತೇನೆ'' ಎಂದರು.

ಏತನ್ಮಧ್ಯೆ ತಂಡದ ಮುಖ್ಯ ಕೋಚ್ ಜಾನ್ ಲೆವಿಸ್, ಭಾರತದಲ್ಲಿ ಕ್ರಿಕೆಟ್ ಬೆಳೆಸಲು ಸಹಾಯ ಮಾಡುವುದು ಇಡೀ ಪಂದ್ಯಾವಳಿಯ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಅಭಿವೃದ್ಧಿಗೆ ಸಹಾಯ ಮಾಡುವ ಸ್ಪರ್ಧೆಯಲ್ಲಿ ನಾನು ಸದಾ ನಂಬಿಕೆಯುಳ್ಳವನು. ತಂಡ ಮತ್ತು ತಂಡಗಳಲ್ಲಿ ಆಟಗಾರರ ಸ್ಲಾಟ್‌ಗಳ ನಡುವಿನ ಸ್ಪರ್ಧೆಯು ಖಂಡಿತವಾಗಿಯೂ ಗುಣಮಟ್ಟವನ್ನು ಹೆಚ್ಚಿಸುತ್ತದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಬ್ಲ್ಯುಪಿಎಲ್‌ನ ಎರಡನೇ ಸೀಸಸ್​ನಲ್ಲಿ ಹೊಸ ಕಿಟ್​ನೊಂದಿಗೆ ಮರಳಿರುವ ಯುಪಿ ವಾರಿಯರ್ಸ್ ಫೆಬ್ರವರಿ 24 ರಂದು ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಪ್ರಾರಂಭಿಸಲಿದೆ.

ಇದನ್ನೂ ಓದಿ: ರಾಂಚಿ ಟೆಸ್ಟ್​: ಚೊಚ್ಚಲ ಪಂದ್ಯದಲ್ಲೇ ಆಕಾಶ್​ ದೀಪ್​ ಮಿಂಚು, ಇಂಗ್ಲೆಂಡ್​ 112ಕ್ಕೆ 5 ವಿಕೆಟ್​

Last Updated :Feb 24, 2024, 11:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.