ETV Bharat / sports

ಅಂಡರ್ 19 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಭಾರತ

author img

By ETV Bharat Karnataka Team

Published : Feb 3, 2024, 7:24 AM IST

ಶುಕ್ರವಾರ ಮಂಗುವಾಂಗ್ ಓವಲ್‌ನಲ್ಲಿ ನಡೆದ ಐಸಿಸಿ ಪುರುಷರ ಅಂಡರ್​​ -1 ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತೀಯ ಕಿರಿಯರ ತಂಡ ಕೊನೆಯ ಸೂಪರ್​ ಸಿಕ್ಸ್​​ ಪಂದ್ಯದಲ್ಲಿ ನೇಪಾಳವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಒಟ್ಟು ಐದು ಪಂದ್ಯಗಳನ್ನು ಆಡಿರುವ ಉದಯ್ ಸಹರನ್ ನೇತೃತ್ವದ ತಂಡ, ಐದು ತಂಡಗಳನ್ನು ಸೋಲಿಸಿ ಇದೀಗ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

U-19 World Cup: India Enter into Semi-Final, Outplay Nepal by 132 runs
U-19 World Cup: India Enter into Semi-Final, Outplay Nepal by 132 runs

ಬ್ಲೋಮ್‌ಫಾಂಟೈನ್: ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಅವರ ಅಮೋಘ ಶತಕ ಮತ್ತು ಸೌಮಿ ಪಾಂಡೆ ಅವರ ಆಕ್ರಮಣಕಾರಿ ಬೌಲಿಂಗ್​ ದಾಳಿಯ ನೆರವಿನಿಂದ ಭಾರತದ ಕಿರಿಯರ ತಂಡವು ಐಸಿಸಿ ಪುರುಷರ ಅಂಡರ್ -19 ವಿಶ್ವಕಪ್​ ಸೆಮಿಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿತು. ಬ್ಲೋಮ್‌ಫಾಂಟೈನ್​ನ ಮಂಗೌಂಗ್ ಓವಲ್ ಮೈದಾನದಲ್ಲಿ ನಡೆದ ತನ್ನ ದ್ವಿತೀಯ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಎದುರಾಳಿ ನೇಪಾಳವನ್ನು 132 ರನ್ನುಗಳಿಂದ ಸೋಲಿಸಿದ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ.

ಒಟ್ಟು ಐದು ಪಂದ್ಯಗಳನ್ನು ಆಡಿರುವ ಉದಯ್ ಸಹರನ್ ನೇತೃತ್ವದ ಭಾರತೀಯ ಕಿರಿಯರ ತಂಡ, ಐದು ತಂಡಗಳನ್ನು ಸೋಲಿಸಿದ್ದು, ಇಲ್ಲಿ ಗಮನಾರ್ಹ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ಉದಯ್‌ ಸಹಾರಣ್‌ ಮತ್ತು ಸಚಿನ್‌ ದಾಸ್‌ ಅವರ ಆಕರ್ಷಕ ಶತಕದ ಸಾಹಸದಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್​ಗೆ 297 ರನ್‌ ಕೂಡಿ ಹಾಕಿತು. ಭಾರತ ನೀಡಿದ ಈ ಬೃಹತ್​ ಸವಾಲು ಬೆನ್ನು ಹತ್ತಿದ ನೇಪಾಳದ ಕಿರಿಯರ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರಂಭದಲ್ಲಿ ಚಾಣಾಕ್ಷತನದಿಂದ ಆಡಿದ ನೇಪಾಳ, ಬಳಿಕ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಭಾರತದ ಸೌಮಿ ಪಾಂಡೆ ಅವರ ಮಾರಕ ಬೌಲಿಂಗ್​ ದಾಳಿಗೆ ಒಬ್ಬೊಬ್ಬರೇ ಪೆವಿಲಿಯನ್​ ಪರೇಡ್​ ನಡೆಸಿದರು. ವೇಗಿ ರಾಜ್ ಲಿಂಬಾನಿ, ಅರ್ಶಿನ್ ಕುಲಕರ್ಣಿ ಮತ್ತು ಮುರುಗನ್ ಅಭಿಷೇಕ್ ಅವರ ಅಮೋಘ ಬೌಲಿಂಗ್​ ದಾಳಿ ಕೂಡ ತಂಡಕ್ಕೆ ವರದಾನವಾಯಿತು. ಈ ಪಂದ್ಯದಲ್ಲಿ ಭಾರತದ ಪರ ಸೌಮ್ಯ ಪಾಂಡೆ 10 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಒಟ್ಟು ಐದು ಪಂದ್ಯಗಳಲ್ಲಿ 12 ವಿಕೆಟ್ ಪಡೆದ ಪಾಂಡೆ, ದಕ್ಷಿಣ ಆಫ್ರಿಕಾದ ಪ್ರಭಾವಿ ವೇಗಿ ಕ್ವೆನಾ ಮಫಕಾ (18 ವಿಕೆಟ್) ಬಳಿಕ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಸಾಧ್ಯವಾದಷ್ಟು ಕ್ರೀಸ್‌ನಲ್ಲಿ ಉಳಿಯಲು ಪರದಾಡಿದ ನೇಪಾಳದ ನಾಯಕ ದೇವ್ ಖಾನಲ್ (33) ಸ್ವಲ್ಪ ಮಟ್ಟಿನ ಆಟ ಪ್ರದರ್ಶಿಸಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. 10 ಮತ್ತು 11ನೇ ಕ್ರಮಾಂಕದ ಬ್ಯಾಟರ್‌ಗಳಾದ ಆಕಾಶ್ ಚಂದ್ (19) ಮತ್ತು ದುರ್ಗೇಶ್ ಗುಪ್ತಾ (29) ಅವರು ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ದ ಕಾರಣ ಅನಿವಾರ್ಯವಾಗಿ ಸೋಲಿನ ಕಹಿ ಉಣಬೇಕಾಯಿತು. ಕೊನೆಯ ವಿಕೆಟ್‌ಗೆ 69 ಎಸೆತಗಳಲ್ಲಿ ಔಟ್​ ಆಗದೇ 45 ರನ್‌ಗಳ ಜೊತೆಯಾಟ ಆಡಿದ ಚಂದ್ ಮತ್ತು ಗುಪ್ತಾ ತಮ್ಮದೇ ತಂಡಕ್ಕೆ ಮುಳುವಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತದ ಕಿರಿಯರ ತಂಡ ಉತ್ತಮ ಆರಂಭವೇ ಪಡೆಯಿತು. ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿದು ಆದರ್ಶ್ ಸಿಂಗ್ (21) ಮತ್ತು ಅರ್ಶಿನ್ ಕುಲಕರ್ಣಿ (18) ಸಣ್ಣ ಮೊತ್ತವಾದರೂ ತಂಡಕ್ಕೆ ಉತ್ತಮ ತಳಪಾಯ ಹಾಕಿಕೊಟ್ಟರು. ಬಳಿಕ ಬಂದ ಪ್ರಿಯಾಂಶು ಮೊಲಿಯಾ (19) ಹೆಚ್ಚು ಹೊತ್ತು ನಿಲ್ಲದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದ ಸಚಿನ್ ಧಾಸ್ ಮತ್ತು ನಾಯಕ ಉದಯ್ ಸಹರಾನ್ ಅವರ ಜೋಡಿಯು ಆಕರ್ಷಕ ಶತಕಗಳೊಂದಿಗೆ ತಂಡ ಗೆಲುವಿನ ದಡ ಸೇರಿತು. ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್​ಗೆ 297 ರನ್‌ ಕೂಡಿ ಹಾಕಿತು.

ಧಾಸ್ 101 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 116 ರನ್ ಗಳಿಸಿದರೆ, ಸಹರಾನ್ 107 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ಸಹಿತ 100 ರನ್ ಗಳಿಸಿ ನಾಯಕನ ಆಟವಾಡಿದರು. 4ನೇ ವಿಕೆಟಿಗೆ 202 ಎಸೆತಗಳಿಂದ 215 ರನ್‌ ಪೇರಿಸಿದ ಈ ಜೋಡಿ ನೂತನ ದಾಖಲೆ ಬರೆಯಿತು.

ಇದನ್ನೂ ಓದಿ: ದ್ವಿಶತ​ಕದ ಸನಿಹ ಜೈಸ್ವಾಲ್​: ಮೊದಲ ದಿನದಾಟದ ಅಂತ್ಯಕ್ಕೆ 336 ರನ್​ಗಳಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.