ETV Bharat / sports

ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್- ಚಿರಾಗ್ ಜೋಡಿ, ಪ್ಯಾರಿಸ್​ ಒಲಿಂಪಿಕ್ಸ್​ಗೆ ಭರ್ಜರಿ ಸಿದ್ಧತೆ

author img

By ETV Bharat Karnataka Team

Published : Mar 11, 2024, 9:41 AM IST

ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಜೋಡಿಯಾದ ಸಾತ್ವಿಕ್- ಚಿರಾಗ್ ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭರ್ಜರಿಯಾಗಿಯೇ ತಯಾರಾಗಿದೆ.

ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ
ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ

ಪ್ಯಾರಿಸ್: ವಿಶ್ವದ ನಂ.1 ಬ್ಯಾಡ್ಮಿಂಟನ್​ ಜೋಡಿ, ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಫ್ರೆಂಚ್​ ಓಪನ್​ ಡಬಲ್ಸ್​ ಪ್ರಶಸ್ತಿ ಗೆದ್ದರು. ಇದು ಅವರ ಎರಡನೇ ಪ್ರಶಸ್ತಿಯಾಗಿದೆ. ಭಾನುವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಚೀನಾ ತೈಪೆಯ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ವಿರುದ್ಧ 21-11, 21-17 ನೇರ ಗೇಮ್‌ಗಳಿಂದ ಜಯ ಸಾಧಿಸಿದರು.

ವಿಶ್ವದ ನಂ.1 ಭಾರತೀಯ ಜೋಡಿಯು 2022 ರಲ್ಲಿ ಫ್ರೆಂಚ್​ ಓಪನ್​ ಪ್ರಶಸ್ತಿಯನ್ನು ಗೆದ್ದಿತ್ತು. 2019 ಮತ್ತು 2023 ರಲ್ಲಿ ರನ್ನರ್ ಅಪ್ ಆಗಿತ್ತು. ಜೊತೆಗೆ ಈ ವರ್ಷದ ಮೊದಲ ಪ್ರಶಸ್ತಿಯನ್ನು ಬಾಚಿಕೊಂಡಿತು. ಇದಕ್ಕೂ ಮೊದಲು ನಡೆದ ಮಲೇಷ್ಯಾ ಸೂಪರ್ 1000, ಇಂಡಿಯಾ ಸೂಪರ್ 750 ನಲ್ಲಿ ರನ್ನರ್​ ಅಪ್​ ಆಗಿದ್ದರು. ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಚೀನೀ ಜೋಡಿ ವಿರುದ್ಧ ಪಾರಮ್ಯ: ಚೀನಾ ಜೋಡಿಯ ವಿರುದ್ಧ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ಜೋಡಿ ನಿಖರ ಪಾರಮ್ಯ ಮೆರೆಯಿತು. ಮೊದಲ ಗೇಮ್​ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಸಾಚಿ ಜೋಡಿ ವಿರಾಮದ ವೇಳೆಗೆ 11-6 ರಲ್ಲಿದ್ದರು. ಬಳಿಕ ಚೀನೀ ಜೋಡಿಯನ್ನು ತಪ್ಪು ಮಾಡುವಂತೆ ಆಟವಾಡಿ 14-6 ಮುನ್ನಡೆ ಪಡೆದರು. ಬಳಿಕ 21-11 ರಲ್ಲಿ ಮೊದಲ ಗೇಮ್​ ಅನ್ನು ವಶಕ್ಕೆ ಪಡೆದರು.

ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ಗಳಾದ ಸಾಚಿ ಜೋಡಿ ಎರಡನೇ ಗೇಮ್​ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಲೀ ಮತ್ತು ಯಾಂಗ್ ಜೋಡಿ 4-1 ಮುನ್ನಡೆ ಸಾಧಿಸಿತು. ಈ ವೇಳೆ ಉತ್ತಮ ಸ್ಮ್ಯಾಷ್​ಗಳನ್ನು ಬಾರಿಸುವ ಮೂಲಕ ಭಾರತೀಯ ಜೋಡಿ 11-9 ರಲ್ಲಿ ಮುನ್ನಡೆ ಪಡೆದರು. ಪೈಪೋಟಿಯಲ್ಲೇ ಸಾಗಿದ ಸೆಟ್​ನಲ್ಲಿ ಚೀನಿ ಜೋಡಿ ಕೂಡ ಉತ್ತಮ ಆಟವಾಡಿತು. ಆದರೆ, ಛಲ ಬಿಡಿದ ಸಾಚಿ ಜೋಡಿ 21-17 ರಲ್ಲಿ ಗೇಮ್​ ಮುಗಿಸಿದರು.

7ನೇ ವಿಶ್ವ ಪ್ರಶಸ್ತಿ ವಿಜೇತ: ಇದು ಭಾರತೀಯರ ಏಳನೇ ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಕಳೆದ ಒಂದು ವಾರದಲ್ಲಿ ಆಡಿದ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಚೀನಾದ ಲೀ ಮತ್ತು ಯಾಂಗ್ ವಿರುದ್ಧ 2-0 ಮುನ್ನಡೆ ಸಾಧಿಸಿತು.

ಇದು ಭಾರತೀಯರ ಏಳನೇ ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಕಳೆದ ಒಂದು ವಾರದಲ್ಲಿ ಆಡಿದ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಚೀನಾದ ಲೀ ಮತ್ತು ಯಾಂಗ್ ವಿರುದ್ಧ 2-0 ಮುನ್ನಡೆ ಸಾಧಿಸಿತು.

ಸಾತ್ವಿಕ್ ಮತ್ತು ಚಿರಾಗ್ ವರ್ಷದ ಮೂರನೇ ಟೂರ್ನಿಯಲ್ಲಿ ಗೆಲುವು ಸಾಧಿಸಿದರು. ಮುಖ್ಯ ತರಬೇತುದಾರ ಪುಲ್ಲೇಲ ಗೋಪಿಚಂದ್ ಸಾಚಿ ಜೋಡಿ ಫ್ರೆಂಚ್​ ಪ್ರಶಸ್ತಿ ಗೆಲ್ಲುತ್ತಾರೆ ಎಂಬ ಭವಿಷ್ಯವನ್ನು ನಿಜ ಮಾಡಿದರು. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿತು.

ಇದನ್ನೂ ಓದಿ: ಭಾರತೀಯ ಯುವ ಕ್ರಿಕೆಟಿಗರಿಗೆ ​ದ್ರಾವಿಡ್ ಸಲಹೆ ಏನು?:​ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.