ETV Bharat / sports

ಐಪಿಎಲ್​ 2024: ಪಂಬಾಬ್​​​ಗೆ 175 ರನ್​ಗಳ ಟಾರ್ಗೆಟ್​; ಡೆಲ್ಲಿ ಪರ ಕೊನೆಯಲ್ಲಿ ಅಬ್ಬರಿಸಿದ ​​ಅಭಿಷೇಕ್ ಪೊರೆಲ್ - Punjab Kings vs Delhi Capitals

author img

By ETV Bharat Karnataka Team

Published : Mar 23, 2024, 3:29 PM IST

Updated : Mar 23, 2024, 6:19 PM IST

ಐಪಿಎಲ್​ 2024ರ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್​​ಗಳನ್ನು ಕಳೆದುಕೊಂಡು ಪಂಜಾಬ್​ ಕಿಂಗ್ಸ್ ವಿರುದ್ಧ ಅಂತಿಮವಾಗಿ 174 ರನ್​ಗಳನ್ನು ಗಳಿಸಿದೆ.​

ಪಂಬಾಜ್​ ಕಿಂಗ್ಸ್​
ಪಂಬಾಜ್​ ಕಿಂಗ್ಸ್​

ಮೊಹಾಲಿ : 17ನೇ ಆವೃತ್ತಿ ಐಪಿಎಲ್​ನ ಮೊದಲ ಡಬಲ್​ ಡೆಕರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಗೆ ಡೆಲ್ಲಿ ಕ್ಯಾಪಿಟಲ್ಸ್​ 175 ರನ್​ಗಳ ಟಾರ್ಗೆಟ್​ ನೀಡಿದೆ. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 174 ರನ್​ಗಳನ್ನು ಗಳಿಸಲಷ್ಟೇ ಡೆಲ್ಲಿ ಶಕ್ತವಾಯಿತು. ಕೊನೆಯ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ​ಅಭಿಷೇಕ್ ಪೊರೆಲ್ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್​ ನೆರವಿನಿಂದ 10 ಬಾಲ್​ಗಳಲ್ಲಿ 32 ರನ್​ ಗಳಿಸಿದರು.

ಪಂಜಾಬ್​ ಪರ ಅದ್ಭುತವಾಗಿ ಬೌಲಿಂಗ್​ ಮಾಡಿದ ಹರ್ಷಲ್​ ಪಟೇಲ್, ಅರ್ಷದೀಪ್ ಸಿಂಗ್ ತಲಾ 2 ವಿಕೆಟ್​ ಪಡೆದರೆ, ​ಕಗಿಸೋ ರಬಾಡ, ರಾಹುಲ್​ ಚಹರ್​ ಮತ್ತು ಹರ್‌ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್​ ಕಬಳಿಸಿದರು. ಚಂಡೀಗಢ್​ನ ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಟಾಸ್​ ಸೋತು ಬ್ಯಾಟಿಂಗ್​ ಗಿಳಿದ ಡೆಲ್ಲಿ ಕ್ಯಾಪಿಟಲ್ಸ್​ ಪರ ಡೇವಿಡ್​ ವಾರ್ನರ್​ ಮತ್ತು ಮಿಚೆಲ್​ ಮಾರ್ಷ್​ ಇನ್ನಿಂಗ್ಸ್​ ಆರಂಭಿಸಿದರು. ಮೊದಲ ಹಂತದಲ್ಲೇ ಉತ್ತಮ ರನ್​ ಕಲೆ ಹಾಕಿದ ಈ ಜೋಡಿ ಬೌಂಡರಿ, ಸಿಕ್ಸರ್​ ಹೊಡೆದು ಮಿಂಚಿತು. ಆದರೇ ವೇಗವಾಗಿ ರನ್​ ಗಳಿಸುತ್ತಿದ್ದ ಮಿಚೆಲ್​ ಮಾರ್ಷ್ (20)​ ಅರ್ಷದೀಪ್ ಸಿಂಗ್​ ಬೌಲಿಂಗ್​ನಲ್ಲಿ ಏರಿಯಲ್ ಶಾಟ್ ಆಡಲು ಹೋಗಿ ರಾಹುಲ್​ ಚಹರ್​ಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇತ್ತ ವಾರ್ನರ್, ಶಾಯ್ ಹೋಪ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್​ ಪ್ರದರ್ಶನ ತೋರಿದರು.

ಈ ವೇಳೆ, ದಾಳಿಗಿಳಿದ ಹರ್ಷಲ್​ ಪಟೇಲ್ ಬೌನ್ಸರ್​ ಬಾಲ್​ ಹಾಕಿ ವಾರ್ನರ್​ (29) ನನ್ನು ಔಟ್ ಮಾಡಿದರು.​ 16 ತಿಂಗಳ ನಂತರ ಕ್ರಿಕೆಟ್​ಗೆ ಮರಳಿದ ಸ್ಟಾರ್​ ಬ್ಯಾಟರ್​ ಮತ್ತು ವಿಕೆಟ್​ ಕೀಪರ್​ ರಿಷಬ್​ ಪಂತ್​ ಕ್ರೀಸ್​ ಆಗಮಿಸಿದರು. ಈ ಹಂತದಲ್ಲಿ ನಿಧನಗತಿಯಲ್ಲಿ ಬ್ಯಾಟ್​ ಬೀಸಿದ ​ ಶಾಯ್​ ಹೋಪ್​ ಮತ್ತು ಪಂತ್​ ಬೃಹತ್​ ರನ್​ ಗಳಿಸುವ ಸೂಚನೆ ನೀಡಿದರು. ಆರ್ಕಷಕ ಎರಡು ಸಿಕ್ಸರ್​, ಎರಡು ಬೌಂಡರಿ ಬಾರಿಸಿದ ಹೋಪ್​ (33) ಕಗಿಸೋ ರಬಾಡ ಓವರ್​ನಲ್ಲಿ ವಿಕೆಟ್​ ನೀಡಿ ಪೆವಿಲಿಯನ್​​ನತ್ತ ಹೆಜ್ಜೆ ಹಾಕಿದರು.

ಬಳಿಕ ಬಂದ ರಿಕಿ ಭುಯಿ (8) ಕೂಡ ಹರ್‌ಪ್ರೀತ್ ಬ್ರಾರ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸುವ ಮೂಲಕ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲುವ ಧೈರ್ಯ ತೋರಲಿಲ್ಲ. ಇನ್ನೊಂದೆಡೆ ಪಂತ್ (18)​ ಕೂಡ ಎರಡು ಬೌಂಡರಿಗಳಿಸಿ ಹರ್ಷಲ್​ಗೆ ವಿಕೆಟ್​ ನೀಡಿದರು. ಉಳಿದಂತೆ ಯಾವುದೇ ಆಟಗಾರ ಪಂಜಾಬ್​ ಬೌಲಿಂಗ್​ನಲ್ಲಿ ದಿಟ್ಟವಾಗಿ ಎದುರಿಸುವಲ್ಲಿ ವಿಫಲರಾದರು. ಟ್ರಿಸ್ಟಾನ್ ಸ್ಟಬ್ಸ್ (8) ವಿಕೆಟ್​ ಅನ್ನು ರಾಹುಲ್​ ಚಹರ್ ಪಡೆದರು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸುತ್ತಿದ್ದ ಆಕ್ಷರ್​ ಪಟೇಲ್ (21) ಔಟ್​ಗೆ ಬಲಿಯಾಗಬೇಕಾಯಿತು.​ ಸುಮಿತ್ ಕುಮಾರ್ (2) ವಿಕೆಟ್​ ಅನ್ನು ಅರ್ಷದೀಪ್ ಸಿಂಗ್ ಉರಳಿಸಿದರು. ಅಂತಿಮವಾಗಿ ಡೆಲ್ಲಿಗಾಗಿ ಅಭಿಷೇಕ್ ಪೊರೆಲ್ (32) ನಾಟ್​ಔಟ್​ ಆಗಿ ಉಳಿದರೆ, ಕುಲದೀಪ್ ಯಾದವ್ (1) ರನ್ ಔಟ್​ ಆಗಿ ವಿಕೆಟ್​ ಕಳೆದುಕೊಂಡರು.

ತಂಡಗಳು : ಡೆಲ್ಲಿ ಕ್ಯಾಪಿಟಲ್ಸ್ : ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಬ್ ಪಂತ್(ನಾಯಕ ಮತ್ತು ವಿಕೀ), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ

ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೀ) ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ಶಶಾಂಕ್ ಸಿಂಗ್

ಇದನ್ನೂ ಓದಿ : ಐಪಿಎಲ್​ 2024: ಆರಂಭಿಕ ಪಂದ್ಯದಲ್ಲೇ ಎಡವಿದ ಆರ್​ಸಿಬಿ; ಸಿಎಸ್​ಕೆಗೆ 6 ವಿಕೆಟ್​ಗಳ ಜಯ​ - CSK beat RCB

Last Updated : Mar 23, 2024, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.