ETV Bharat / sports

500 ವಿಕೆಟ್​: ರಾಜ್​ಕೋಟ್​ನಲ್ಲಿ ಇತಿಹಾಸ ಬರೆಯಲಿರುವ ಸ್ಪಿನ್​ ಜಾದೂಗಾರ ಅಶ್ವಿನ್​

author img

By ETV Bharat Karnataka Team

Published : Feb 15, 2024, 7:44 AM IST

ರಾಜ್​ಕೋಟ್​​ನಲ್ಲಿ 1 ವಿಕೆಟ್​ ಪಡೆದರೆ ಭಾರತದ ಸ್ಪಿನ್ನರ್​ ಆರ್​.ಅಶ್ವಿನ್ 500 ವಿಕೆಟ್​ ಪಡೆದ ವಿಶ್ವದ 9ನೇ ಮತ್ತು ಭಾರತದ ಎರಡನೇ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ.

ಸ್ಪಿನ್​ ಜಾದೂಗಾರ ಅಶ್ವಿನ್​
ಸ್ಪಿನ್​ ಜಾದೂಗಾರ ಅಶ್ವಿನ್​

ರಾಜ್​ಕೋಟ್​(ಗುಜರಾತ್​) : ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯ ಇಂದಿನಿಂದ ರಾಜ್​ಕೋಟ್​​ನಲ್ಲಿ ಆರಂಭವಾಗಲಿದೆ. 1-1 ರಲ್ಲಿ ಸಮಬಲವಾಗಿರುವ ಸರಣಿಯಲ್ಲಿ ಉಭಯ ತಂಡಗಳು ಮುನ್ನಡೆ ಸಾಧಿಸಲು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಸನ್ನಾಹದಲ್ಲಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 499 ವಿಕೆಟ್​ ಗಳಿಸಿರುವ ಅಶ್ವಿನ್​ 1 ವಿಕೆಟ್​ ಪಡೆದಲ್ಲಿ 500 ವಿಕೆಟ್​ ಪಡೆದ ಬೌಲರ್​ಗಳ ಕ್ಲಬ್​ಗೆ ಸೇರಲಿದ್ದಾರೆ. ಜೊತೆಗ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆಯಲಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್​ ವೇಳೆ ಅವರು ಈ ಸಾಧನೆಯಿಂದ ವಂಚಿತರಾಗಿದ್ದರು. 236 ಇನಿಂಗ್ಸ್‌ ಮೂಲಕ 619 ವಿಕೆಟ್‌ಗಳನ್ನು ಪಡೆದಿರುವ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಟ್ರಂಪ್​ ಕಾರ್ಡ್​ ಆಗಿರುವ ಅಶ್ವಿನ್ ಸದ್ಯ ಆಡುತ್ತಿರುವ ಆಟಗಾರರ ಪೈಕಿ ಎರಡನೇ ಅತ್ಯಧಿಕ ವಿಕೆಟ್​ ಟೇಕರ್​ ಆಗಿದ್ದಾರೆ. ಆಸ್ಟ್ರೇಲಿಯಾದ ನಾಥನ್​ ಲಿಯಾನ್​ 238 ಇನಿಂಗ್ಸ್​ಗಳಿಂದ 517 ವಿಕೆಟ್​ ಗಳಿಸಿದ್ದಾರೆ. ಅಶ್ವಿನ್​ 97 ಪಂದ್ಯಗಳಲ್ಲಿ 499 ವಿಕೆಟ್​ಗಳನ್ನು ಸಂಪಾದಿಸಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿದಲ್ಲಿ 500 ವಿಕೆಟ್​ ಪಡೆದ ವಿಶ್ವದ 9ನೇ ಮತ್ತು ಭಾರತದ ಎರಡನೇ ಬೌಲರ್ ಆಗಲಿದ್ದಾರೆ.

ನನ್ನ ತವರಲ್ಲಿ ಅಶ್ವಿನ್ ದಾಖಲೆ: ಆರ್​.ಅಶ್ವಿನ್​ರ ದಾಖಲೆಯ ಇನಿಂಗ್ಸ್​ಗೆ ಸಾಕ್ಷಿಯಾಗಲಿರುವ ರಾಜ್​ಕೋಟ್​ ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾರ ತವರಾಗಿದೆ. ಕೇರಂ ಸ್ಪೆಷಲಿಸ್ಟ್​ ತಮ್ಮ ವಿಶೇಷ ಸಾಧನೆಯನ್ನು ನನ್ನ ತವರಲ್ಲೇ ಮಾಡಲಿದ್ದಾರೆ ಎಂದು ಜಡೇಜಾ ಹೇಳಿದ್ದಾರೆ.

ಅಶ್ವಿನ್ ಅವರು ತಮ್ಮ 500 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಲು ಕೇವಲ 1 ವಿಕೆಟ್ ಅಂತರದಲ್ಲಿದ್ದಾರೆ. ನಾನು ಅವರ ಬೌಲಿಂಗ್​ಗಾಗಿ ಕಾಯುತ್ತಿದ್ದೇನೆ. ತವರು ಕ್ರೀಡಾಂಗಣವಾದ ರಾಜ್‌ಕೋಟ್‌ನಲ್ಲಿ ಈ ದಾಖಲೆ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ರಾಜ್‌ಕೋಟ್‌ನ ಅಶ್ವಿನ್​ ಅವರು ಖಂಡಿತವಾಗಿಯೂ 500 ವಿಕೆಟ್‌ಗಳನ್ನು ಪೂರೈಸುತ್ತಾರೆ. ಕಳೆದ 12-13 ವರ್ಷಗಳಿಂದ ನಾನು ಅವರ ಜೊತೆಗೂಡಿ ಆಟವಾಡುತ್ತಿದ್ದೇನೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಗಳಿಸಿದ್ದು ದೊಡ್ಡ ಸಾಧನೆ. ಕಳೆದ ಪಂದ್ಯದಲ್ಲೇ ಈ ಸಾಧನೆ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ. ಆದರೆ, ನನ್ನ ತವರು ರಾಜ್‌ಕೋಟ್‌ನಲ್ಲಿ ಅಶ್ವಿನ್ ಈ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ, 2ನೇ ಟೆಸ್ಟ್​ನಲ್ಲಿ ಗಾಯಕ್ಕೀಡಾಗಿದ್ದ ಚೇತರಿಸಿಕೊಂಡಿದ್ದು, 3ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಕೆಎಲ್ ರಾಹುಲ್​ 3ನೇ ಪಂದ್ಯದಿಂದ ತಪ್ಪಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 3ನೇ ಟೆಸ್ಟ್: ಹೊಸ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್, ಆ್ಯಂಡರ್ಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.