ETV Bharat / sports

ಅಂಡರ್​ 19 ವಿಶ್ವಕಪ್​ ಸೆಮಿಫೈನಲ್​: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಗೆ 1 ವಿಕೆಟ್​ ರೋಚಕ ಜಯ

author img

By PTI

Published : Feb 8, 2024, 11:01 PM IST

ಅಂಡರ್​19 ವಿಶ್ವಕಪ್ ಸೆಮಿಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿದೆ.

ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಗೆ 1 ವಿಕೆಟ್​ನ ರೋಚಕ ಜಯ
ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಗೆ 1 ವಿಕೆಟ್​ನ ರೋಚಕ ಜಯ

ಅಂಡರ್​-19 ವಿಶ್ವಕಪ್​ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಆಸ್ಟ್ರೇಲಿಯಾ 1 ವಿಕೆಟ್​ನಿಂದ​ ರೋಚಕ ಗೆಲುವು ಸಾಧಿಸಿತು. ಬೆನೋನಿಯಲ್ಲಿ ನಡೆದ ಈ ಪಂದ್ಯದದಲ್ಲಿ ಆಸೀಸ್​ ನಾಯಕ ಹಫ್ ವೆಬ್‌ಗೆನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮತ್ತೊಂದೆಡೆ ಬ್ಯಾಟಿಂಗ್​ಗಿಳಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 48.5 ಓವರ್‌ಗಳಲ್ಲಿ 179 ರನ್‌ಗಳಿಗೆ ಸರ್ವಪತನ ಕಂಡಿತು. ಕಳಪೆ ಆರಂಭ ಪಡೆದ ಪಾಕ್​ ತಂಡದ ಸ್ಕೋರ್​ 76 ಆಗಿದ್ದ ವೇಳೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಅಝನ್​ ಅವೈಸ್​ (52), ಅರಾಫತ್​ ಮಿನ್ಹಾಸ್​ (52) ಅರ್ಧಶತಕ ಸಿಡಿಸಿ 179 ಗಡಿ ತಲುಪಲು ನೆರವಾದರು.

180 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 164 ರನ್ ಗಳಿಸಿದ್ದ ವೇಳೆ 9 ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ 24 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿತ್ತು. ಈ ವೇಳೆ ರಾಫ್ ಮ್ಯಾಕ್‌ಮಿಲನ್ ಮತ್ತು ಕ್ಯಾಲಮ್ ವಿಡ್ಲರ್ ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಸ್ಟ್ರೇಲಿಯಾ ಪರ ಹ್ಯಾರಿ ಡಿಕ್ಸನ್ 75 ಎಸೆತಗಳಲ್ಲಿ 50 ರನ್ ಗಳಿಸಿದರೆ, ಆಲಿವರ್ ಪೀಕ್ 49 ರನ್ ಗಳ ಇನ್ನಿಂಗ್ಸ್ ಆಡಿದರು. ಟಾಮ್ ಕ್ಯಾಂಪ್ಬೆಲ್ 42 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಆಸ್ಟ್ರೇಲಿಯಾ ತಂಡ 2018ರ ನಂತರ ಅಂಡರ್​19 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದೆ. ಕಾಂಗರೂ ಪಡೆ ಈ ಹಿಂದೆ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಒಟ್ಟು ಐದು ಬಾರಿ ಫೈನಲ್ ಪ್ರವೇಶಿಸಿತ್ತು. ಇದೀಗ ಫೆಬ್ರವರಿ 11ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು ಎದುರಿಸಲಿದೆ.

ಇದನ್ನೂ ಓದಿ: 3ನೇ ಟೆಸ್ಟ್: ಹೊಸ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್, ಆ್ಯಂಡರ್ಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.