ETV Bharat / sports

ಫುಡ್ ಡೆಲಿವರಿ ಬಾಯ್​ನಿಂದ ಐಎಸ್​​ಪಿಎಲ್​ ವರೆಗೆ; ಸವಾಲುಗಳನ್ನು ಮೆಟ್ಟಿ ನಿಂತ ಕ್ರಿಕೆಟರ್​ ಆಕಾಶ್ ಗೌತಮ್

author img

By ETV Bharat Karnataka Team

Published : Mar 16, 2024, 7:45 AM IST

ತನ್ನ ಜೀವನದ ಕಠಿಣ ಸವಾಲುಗಳನ್ನ ಎದುರಿಸಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಕಾಶ್​ ಗೌತಮ್​ರ ಯಶೋಗಾಥೆ ಇಲ್ಲಿದೆ.

ಫುಡ್ ಡೆಲಿವರಿ ಬಾಯ್​ನಿಂದ ಹಿಡಿದು ಐಎಸ್​ಪಿಎಲ್​ ವರೆಗೂ ಸವಾಲುಗಳನ್ನು ಮೆಟ್ಟಿ ನಿಂತ ಕ್ರಿಕೆಟರ್​ ಆಕಾಶ್ ಗೌತಮ್
ಫುಡ್ ಡೆಲಿವರಿ ಬಾಯ್​ನಿಂದ ಹಿಡಿದು ಐಎಸ್​ಪಿಎಲ್​ ವರೆಗೂ ಸವಾಲುಗಳನ್ನು ಮೆಟ್ಟಿ ನಿಂತ ಕ್ರಿಕೆಟರ್​ ಆಕಾಶ್ ಗೌತಮ್

ಮುಂಬೈ/ಬೆಂಗಳೂರು: ತನ್ನ ನೆಚ್ಚಿನ ಕ್ರೀಡೆಯಲ್ಲಿ ಗರಿಷ್ಠ ಉತ್ತುಂಗವನ್ನು ತಲುಪುವುದು ಪ್ರತಿಯೊಬ್ಬ ಆಟಗಾರನ ಕನಸು. ಈ ಪ್ರಯಾಣದಲ್ಲಿ ಅಚಲವಾದ ಸಮರ್ಪಣೆ, ಅನೇಕ ವರ್ಷಗಳ ತರಬೇತಿ, ಕಠಿಣ ಸವಾಲುಗಳನ್ನ ಎದುರಿಸುವ ಕೆಲವೇ ಕೆಲವರು ಮಾತ್ರ ಅತ್ಯುನ್ನತ ಯಶಸ್ಸಿನ ವೈಭವವನ್ನು ಸವಿಯುತ್ತಾರೆ. ಪ್ರಸ್ತುತ ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಆಡುತ್ತಿರುವ 17 ವರ್ಷ ವಯಸ್ಸಿನ ಆಕಾಶ್ ಗೌತಮ್ ಇದಕ್ಕೆ ಉತ್ತಮ ಉದಾಹರಣೆ.

ಐಎಸ್‌ಪಿಎಲ್‌ ಟೂರ್ನಿಯ ಹರಾಜಿನಲ್ಲಿ ಕೆವಿಎನ್ ಬೆಂಗಳೂರು ಸ್ಟ್ರೈಕರ್ಸ್ ತಂಡ ಆಕಾಶ್ ಗೌತಮ್ ಅವರನ್ನು 3.4 ಲಕ್ಷಕ್ಕೆ ಖರೀದಿಸಿತ್ತು. ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಕಾಶ್ ಗೌತಮ್, 2.5ರ ಎಕಾನಮಿಯಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ‌ ಮಿಂಚಿದ್ದಾರೆ. ಯುವ ಆಟಗಾರನ ಪ್ರದರ್ಶನ ಟೂರ್ನಿಯ ಹೈಲೈಟ್ ಅಂಶಗಳಲ್ಲಿ ಒಂದಾಗಿದೆ. ಆದರೆ ನೋಯ್ಡಾದ ಬೀದಿಗಳಿಂದ ಐಎಸ್‌ಪಿಎಲ್‌ ಟೂರ್ನಿಯವರೆಗಿನ ಅವರ ಹಾದಿ ಸುಲಭದ್ದಾಗಿರಲಿಲ್ಲ.

ತಮ್ಮ ಕ್ರಿಕೆಟ್ ಪಯಣದ ಕುರಿತು ಮಾತನಾಡಿದ ಆಕಾಶ್, ''ನೋಯ್ಡಾದ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ತಮ್ಮ ಅಣ್ಣನ ಕ್ರಿಕೆಟ್ ಆಟವನ್ನ ಹತ್ತಿರದಿಂದ ಕಂಡ ಆಕಾಶ್, ಕ್ರಿಕೆಟ್‌ನ್ನೆ ಆರಾಧಿಸಲಾರಂಭಿಸಿದೆ ಎಂದು ನೆನಪಿಸಿಕೊಂಡರು. ಹಿರಿಯ ಸಹೋದರ ಕ್ರಿಕೆಟ್‌ನಲ್ಲಿದ್ದರು ಮತ್ತು ಅದು ನನಗೆ ಸ್ಫೂರ್ತಿ ನೀಡಿತು. ಒಮ್ಮೆ ಭುಜದ ಗಾಯದಿಂದ ಅಣ್ಣ ಕ್ರಿಕೆಟ್ ತ್ಯಜಿಸಬೇಕಾಯಿತು. ಆದರೆ ನನಗೆ ಅಕಾಡೆಮಿಗೆ ಸೇರಿ ಆಟ ಮುಂದುವರಿಸಲು ಆತ ಹೇಳಿದ. ಆ ನಂತರ ದೆಹಲಿಯ ಸರ್ಕಾರಿ ಶಾಲೆಗೆ ಸೇರಿಕೊಂಡೆ.

ಕ್ರಿಕೆಟ್​ ಜತೆಗೆ ವಿದ್ಯಾಭ್ಯಾಸದತ್ತಲೂ ಗಮನ ಹರಿಸುತ್ತಿದ್ದೆ. ಬಳಿಕ ಕೋವಿಡ್ ಕಾರಣದಿಂದ ಒಂದು ವರ್ಷದ ನಂತರ ನಾನು ನೋಯ್ಡಾದ ಮತ್ತೊಂದು ಅಕಾಡೆಮಿಗೆ ಸೇರಿಕೊಂಡೆ. ಮೊದಲಿಗೆ ಸಾಕಷ್ಟು ಹೋರಾಟವನ್ನು ಎದುರಿಸಿದೆ. ಅಕಾಡೆಮಿಗೆ 3500 ರೂ. ಮಾಸಿಕ ಶುಲ್ಕವನ್ನು ಪಾವತಿಸಲು ಎರಡು ವರ್ಷಗಳ ಕಾಲ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದೇನೆ. ಅಕಾಡೆಮಿಯ ಮುಖ್ಯಸ್ಥರು ನನ್ನ ಕೆಲಸದ ಬಗ್ಗೆ ತಿಳಿದ ನಂತರ ನನ್ನ ಶುಲ್ಕವನ್ನು ಕಡಿಮೆ ಮಾಡಿದರು ಮತ್ತು ನಿಧಾನವಾಗಿ ಅದನ್ನು ಮನ್ನಾ ಮಾಡಿದರು'' ಎಂದು ತಮ್ಮ ಕಷ್ಟದ ದಿನಗಳನ್ನ ನೆನೆದರು.

"ನನ್ನ ಕುಟುಂಬದವರು ನಾನು ಸರ್ಕಾರಿ ಕೆಲಸಕ್ಕೆ ಸೇರಬೇಕೆಂದು ಬಯಸಿದ್ದರು. ಆದರೆ ನನ್ನ ಗಮನ ಯಾವಾಗಲೂ ಕ್ರಿಕೆಟ್ ಆಡುವುದರಲ್ಲಿತ್ತು. ನನ್ನಲ್ಲಿರುವ ಸಾಮರ್ಥ್ಯಗಳೊಂದಿಗೆ ನಾನು ಖಂಡಿತವಾಗಿಯೂ ಕ್ರೀಡೆಯಲ್ಲಿ ನನ್ನದೇ ಹೆಸರು ಸಂಪಾದಿಸುವುದು ಖಚಿತವಾಗಿತ್ತು'' ಎಂದು ಅವರು ತಿಳಿಸಿದರು.

ಐಎಸ್‌ಪಿಎಲ್‌ ಜರ್ನಿ: ಐಎಸ್‌ಪಿಎಲ್‌ ಟ್ರಯಲ್ಸ್​ನಲ್ಲಿ ಭಾಗಿಯಾಗಲು ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಲು ಸಹ ನನಗೆ ಆಸಕ್ತಿ ಇರಲಿಲ್ಲ. ಅರ್ಜಿ ಶುಲ್ಕ 1,200/- ರೂ. ಹಣ ಸಹ ನನ್ನ ಬಳಿ ಇರಲಿಲ್ಲ. ಆದರೆ ನನ್ನ ಪರವಾಗಿ ಫಾರ್ಮ್ ಅನ್ನು ಭರ್ತಿ ಮಾಡಿದವನು ನನ್ನ ಸಹೋದರ. ಕ್ರಿಕೆಟ್‌ನ ಈ ಸ್ವರೂಪದಲ್ಲಿ ಗುರುತಿಸಿಕೊಳ್ಳಲು ಅನೇಕರು ಹೆಣಗಾಡುತ್ತಿದ್ದಾರೆ. ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಐಎಸ್‌ಪಿಎಲ್‌ ಸುವರ್ಣ ಅವಕಾಶವವಾಗಿದೆ. ಸಾವಿರಾರು ಅಭಿಮಾನಿಗಳ ಮುಂದೆ ಆಡುವುದು ನಿಜಕ್ಕೂ ವಿಶೇಷವಾಗಿದೆ. ಮತ್ತು ಇಷ್ಟೊಂದು ಅಭಿಮಾನಿಗಳ ಕ್ರೀಡಾಂಗಣಕ್ಕೆ ಬಂದು ಟೆನಿಸ್ ಬಾಲ್ ಕ್ರಿಕೆಟ್ ಅನ್ನು ಆನಂದಿಸುತ್ತಾರೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಸ್ಟ್ರೀಟ್ ಕ್ರಿಕೆಟ್‌ಗೆ ಮನ್ನಣೆ ಸಿಗುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಆಕಾಶ್ ಸಂತಸ ಹಂಚಿಕೊಂಡರು.

ಇದನ್ನೂ ಓದಿ: WPL 2024 : ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟ ಬೆಂಗಳೂರು ವನಿತೆಯರು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.