ವಾರದ ರಾಶಿ ಭವಿಷ್ಯ: ಕೌಟುಂಬಿಕ ಆರ್ಥಿಕತೆ ಸುಧಾರಣೆ, ಸಂಸಾರದಲ್ಲಿ ಸಂತಸ

author img

By ETV Bharat Karnataka Team

Published : Jan 21, 2024, 3:59 PM IST

ವಾರದ ರಾಶಿ ಭವಿಷ್ಯ

ಜ.21 ರಿಂದ 27ರವರೆಗಿನ ವಾರದ ಭವಿಷ್ಯ ಹೀಗಿದೆ.

ಮೇಷ: ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ನೆರವನ್ನು ನೀವು ಪಡೆಯಲಿದ್ದೀರಿ. ಆದರೆ ಏನಾದರೂ ಕಾರಣಕ್ಕಾಗಿ ಒತ್ತಡವು ಕಾಣಿಸಿಕೊಳ್ಳಬಹುದು. ನೀವು ಹೊಸ ಮನೆಯನ್ನು ಖರೀದಿಸಲು ಯೋಚಿಸುವುದಾದರೆ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಹಳೆಯ ಕೆಲಸಕ್ಕೆ ಅಂಟಿಕೊಂಡರೆ ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದೇಶದಿಂದ ಆಮದು ರಫ್ತು ಕೆಲಸ ಮಾಡುವವರಿಗೆ ಶುಭ ಸುದ್ದಿ ದೊರೆಯಲಿದೆ. ಮನೆಯಿಂದ ಆನ್ಲೈನ್‌ ಕೆಲಸ ಮಾಡುವ ಜನರು ಒಳ್ಳೆಯ ಲಾಭ ಗಳಿಸಲಿದ್ದಾರೆ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ವೃಷಭ: ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ಪ್ರೇಮ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ಯಾವುದೇ ಕೆಲಸಕ್ಕಾಗಿ ಸಾಲವನ್ನು ಪಡೆಯಲು ಇಚ್ಛಿಸುವವರು ಅದನ್ನು ಈ ವಾರದಲ್ಲಿ ಸುಲಭವಾಗಿ ಪಡೆಯಲಿದ್ದಾರೆ. ಈ ಸಮಯವು ಹೂಡಿಕೆಗೆ ಅನುಕೂಲಕರ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನೀವು ಯಾವುದಾದರೂ ಡೀಲ್​​ನಿಂದ ಸಾಕಷ್ಟು ಲಾಭವನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ಕೆಲಸದ ಬದಲಾವಣೆಯ ಕುರಿತು ಸಾಕಷ್ಟು ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಹೆಚ್ಚು ಗಮನ ನೀಡಲು ಸಾಧ್ಯವಾಗದು. ಇದರಿಂದಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಅವರು ವಿಫಲರಾಗಲಿದ್ದಾರೆ. ನೀವು ಕೆಲವೊಂದು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಗೆಲುವು ಸಾಧಿಸಲಿದ್ದೀರಿ. ಕೆಲವು ಗೆಳೆಯರ ದುಷ್ಟ ಸಂಗದ ಕಾರಣ ಸಮಸ್ಯೆಯುಂಟಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಿಕೊಳ್ಳಲಿದ್ದೀರಿ.

ಮಿಥುನ: ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಿರುಕು ದೂರಗೊಂಡು ಸಂಬಂಧದಲ್ಲಿ ಆಪ್ತತೆಯು ಬೆಳೆಯಲಿದೆ. ಗೆಳೆಯನೊಬ್ಬನ ಕಾರಣ ಪ್ರೇಮ ಸಂಬಂಧದಲ್ಲಿ ಒಂದಷ್ಟು ಗೊಂದಲ ಕಾಣಿಸಿಕೊಳ್ಳಬಹುದು. ನಿಮ್ಮ ಮನೆಯ ಅಲಂಕಾರಕ್ಕಾಗಿ ಒಂದಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಯಾವುದೇ ವಹಿವಾಟನ್ನು ಜಾಣ್ಮೆಯಿಂದ ನಡೆಸುವುದು ಒಳ್ಳೆಯದು. ಉದ್ಯೋಗದಲ್ಲಿರುವವರು ತಮ್ಮ ಹಿರಿಯರು ಅಥವಾ ಬಾಸ್‌ ಜೊತೆಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಿಸಬೇಕು. ನೀವು ಹೊಸ ಉದ್ಯೋಗವಕಾಶವನ್ನು ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡದೆ ಇರಬಹುದು. ಮನಸ್ಸಿನಲ್ಲಿ ಅನೇಕ ವಿಚಾರಗಳು ಕಾಡಬಹುದು. ಹೊಸ ಉದ್ಯೋಗ ಅರಸಲು ಈ ಸಮಯ ಅನುಕೂಲಕರ. ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ನೀವು ಒಳ್ಳೆಯ ವೈದ್ಯರನ್ನು ಸಮಾಲೋಚಿಸಿದರೆ ಒಳ್ಳೆಯದು. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ಕರ್ಕಾಟಕ: ಪ್ರೇಮ ಸಂಬಂಧದಲ್ಲಿ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ನಿಮ್ಮ ಅಗತ್ಯತೆಗಳಿಗಾಗಿ ನೀವು ಹಣವನ್ನು ಖರ್ಚು ಮಾಡಲಿದ್ದೀರಿ. ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವುದಾದರೆ ಸಮಯವು ಚೆನ್ನಾಗಿದೆ. ಆದಾಯದ ಅವಕಾಶಗಳು ಲಭಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದರೆ ನಿಮಗೆ ಒಳಿತಾಗಲಿದೆ. ಮನೆಯಿಂದ ದೂರವಿದ್ದು ಕೆಲಸ ಮಾಡುವವರು ತಮ್ಮ ಕುಟುಂಬವನ್ನು ಮಿಸ್‌ ಮಾಡಲಿದ್ದಾರೆ. ಮನೆಯಲ್ಲಿ ಹೊಸ ಅತಿಥಿಯು ಬರಲಿದ್ದು, ಇದರಿಂದಾಗಿ ಸಂತಸದ ವಾತಾವರಣ ನೆಲೆಸಲಿದೆ. ಯಾರಾದರೂ ಒಳ್ಳೆಯ ವ್ಯಕ್ತಿಯ ಸಹಾಯದಿಂದ ಬಾಕಿ ಉಳಿದಿರುವ ಹಣವನ್ನು ನೀವು ಪಡೆಯಲಿದ್ದೀರಿ.

ಸಿಂಹ: ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಸಂತಸ ಅನುಭವಿಸಲಿದ್ದಾರೆ. ಅವಿವಾಹಿತರಿಗೆ ಒಳ್ಳೆಯ ಸಂಬಂಧವು ದೊರೆಯಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಯಾವುದೇ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಉದ್ಯೋಗದಲ್ಲಿರುವ ಜನರು ತಮಗೆ ನೀಡಿರುವ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಅಧಿಕಾರಿಗಳೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಿಸುವುದು ಒಳ್ಳೆಯದು. ವಿದ್ಯಾರ್ಥಿಗಳು ಶಿಕ್ಷಕರ ಸಹಕಾರ ಪಡೆಯಲಿದ್ದಾರೆ. ಹೊಸ ವಿಷಯವನ್ನು ಕಲಿಯುವ ಆಸೆಯು ಈಡೇರಲಿದೆ. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಮನಸ್ಸಿನ ಸಮಾಧಾನಕ್ಕಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಒಂದಷ್ಟು ಸಮಯವನ್ನು ಕಳೆಯಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ರಾಜಕೀಯದಲ್ಲಿ ನೀವು ವೃತ್ತಿಯನ್ನು ರೂಪಿಸಲು ಎದುರು ನೋಡುತ್ತಿದ್ದರೆ ಯುವಜನರಿಗೆ ಸಮಯವು ಚೆನ್ನಾಗಿದೆ.

ಕನ್ಯಾ: ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಎಲ್ಲರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಹೆಚ್ಚಿನ ಕೌಟುಂಬಿಕ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬರಬಹುದು. ನಿಮ್ಮ ಮನೆಯ ದುರಸ್ತಿಗಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕಾಗಿ ನೀವು ಸಾಲವನ್ನು ಪಡೆಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಕಠಿಣ ಶ್ರಮ ಪಡಲಿದ್ದಾರೆ. ವಿದ್ಯಾರ್ಥಿಗಳು ವಿಷಯಗಳನ್ನು ಬದಲಾಯಿಸಲು ಬಯಸುವುದಾದರೆ ವಿಳಂಬ ಮಾಡಬೇಡಿ. ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಬಡ್ತಿ ಪಡೆಯುವುದಕ್ಕಾಗಿ ಅವಕಾಶ ದೊರೆಯಬಹುದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ನೀವು ಒಳ್ಳೆಯ ವೈದ್ಯರೊಬ್ಬರನ್ನು ಭೇಟಿಯಾಗುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಮಕ್ಕಳಿಂದ ನಿಮಗೆ ಸಂತಸ ಲಭಿಸಲಿದೆ. ನೀವು ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲಿದ್ದೀರಿ.

ತುಲಾ: ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಚಟುವಟಿಕೆಯಿಂದ ಕೂಡಿದ ನಿಮ್ಮ ದಿನಚರಿಯಿಂದ ಬಿಡುವನ್ನು ಪಡೆದು ಮಕ್ಕಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಲಿದ್ದೀರಿ. ಮಕ್ಕಳ ಜೊತೆ ಪ್ರವಾಸಕ್ಕೆ ಹೋಗಲಿದ್ದು ಮೋಜನ್ನು ಅನುಭವಿಸಲಿದ್ದೀರಿ. ಕುಟುಂಬದಲ್ಲಿ ನೆಲೆಸಿದ್ದ ಮನಸ್ತಾಪವು ಈ ವಾರದಲ್ಲಿ ದೂರಗೊಳ್ಳಲಿದೆ. ಮನೆಯ ಅಗತ್ಯತೆಗಾಗಿ ಒಂದಷ್ಟು ಶಾಪಿಂಗ್‌ ಮಾಡಬಹುದು. ಜಮೀನು ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಲು ಸಮಯವು ಚೆನ್ನಾಗಿದೆ. ಬಾಕಿ ಉಳಿದಿರುವ ನಿಮ್ಮ ಹಣವನ್ನು ಪಡೆಯಲಿದ್ದೀರಿ. ಗೆಳೆಯರ ಸಹಾಯದಿಂದ ಆದಾಯ ಗಳಿಸಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಮನಸ್ಸಿನ ಸಮಾಧಾನಕ್ಕಾಗಿ ಒಂದಷ್ಟು ಸಮಯವನ್ನು ಏಕಾಂಗಿಯಾಗಿ ಕಳೆಯಲಿದ್ದೀರಿ. ಈ ವಾರದಲ್ಲಿ ನೀವು ಕೆಲಸವನ್ನು ಪಡೆಯಲಿದ್ದೀರಿ. ಇದರಿಂದ ನೀವು ಲಾಭ ಗಳಿಸಲಿದ್ದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ.

ವೃಶ್ಚಿಕ: ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವ ಜನರು ತಮ್ಮ ಭಾವನೆಗಳನ್ನು ಪ್ರೇಮಿಗೆ ವ್ಯಕ್ತಪಡಿಸಲಿದ್ದಾರೆ. ನೀವು ಯಾವುದಾದರೂ ಜಮೀನನ್ನು ಖರೀದಿಸಲು ಇಚ್ಛಿಸಿದ್ದರೆ ಮುಂದಕ್ಕೆ ಹೆಜ್ಜೆ ಇಡಿ. ಶೇರು ಮಾರುಕಟ್ಟೆಯಲ್ಲಿ ಈ ವಾರದಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಉಂಟಾಗದು. ಉದ್ಯೋಗದಲ್ಲಿರುವ ಜನರು ಅಧಿಕ ಆದಾಯದ ಹೊಸ ಕೆಲಸದ ಕೊಡುಗೆಯನ್ನು ಪಡೆಯಬಹುದು. ಆದರೆ ಹಳೆಯ ಕೆಲಸಕ್ಕೆ ಅಂಟಿಕೊಂಡಿರುವುದು ಒಳ್ಳೆಯದು. ವಿದ್ಯಾರ್ಥಿಗಳು ಅಧ್ಯಯನದ ಬದಲಾಗಿ ತಮ್ಮ ಗೆಳೆಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ. ಇದು ಅವರ ಅಧ್ಯಯನದಲ್ಲಿ ಅಡಚಣೆಯನ್ನುಂಟು ಮಾಡಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಬಹುದು. ನಿಮ್ಮ ದಿನಚರಿಯಲ್ಲಿ ಒಂದಷ್ಟು ವ್ಯಾಯಾಮ ಮತ್ತು ಯೋಗವನ್ನು ಸೇರಿಸಿಕೊಂಡರೆ ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಬಾಕಿ ಉಳಿದಿರುವ ತಮ್ಮ ವ್ಯವಹಾರ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ಈ ವಾರದಲ್ಲಿ ಯಶಸ್ವಿಯಾಗಲಿದ್ದಾರೆ.

ಧನು: ಕೌಟುಂಬಿಕ ಬದುಕಿನಲ್ಲಿ ಪ್ರೀತಿ ನೆಲೆಸಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಹೊಸ ಮನೆಯನ್ನು ಖರೀದಿಸಲಿದ್ದೀರಿ. ಅಪಾಯದ ಹೂಡಿಕೆಯನ್ನು ಮಾಡಬೇಡಿ. ಆತುರದ ನಿರ್ಧಾರವು ಹಾನಿಕಾರಕ ಎನಿಸಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಪೂರ್ವತಯಾರಿಯಲ್ಲಿ ವಿಳಂಬ ಎದುರಿಸಬಹುದು. ಹೀಗಾಗಿ ಅವರು ಮನೆಯಿಂದ ದೂರ ಸಾಗಿ ಅಧ್ಯಯನ ನಡೆಸಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಸಹೋದರರು ಅಥವಾ ಸಹೋದರಿಯರ ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಪರಿಚಯದ ವ್ಯಕ್ತಿಯೊಂದಿಗೆ ಮಾತನಾಡಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ಸಾಕಷ್ಟು ಚಟುವಟಿಕೆಗಳಿಂದ ಕೂಡಿದ ನಿಮ್ಮ ಸಮಯದ ನಡುವೆಯೂ ನಿಮ್ಮ ಅಚ್ಚುಮೆಚ್ಚಿನ ಚಟುವಟಿಕೆಗಳನ್ನು ನೀವು ಕೈಗೊಳ್ಳಲಿದ್ದೀರಿ.

ಮಕರ: ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯುವುದನ್ನು ಇಷ್ಟಪಡಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ಆದಾಯದ ಮೂಲಗಳಲ್ಲಿ ವೃದ್ಧಿ ಉಂಟಾಗಲಿದೆ. ಹಣ ಹರಿದು ಬರುವ ಅವಕಾಶಗಳು ಹೆಚ್ಚಿವೆ. ನಿಮ್ಮ ವ್ಯವಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಿದ್ದೀರಿ. ನಿಮ್ಮ ಬಾಸ್​​ನಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ನೀವು ಬೆಳಗಿನ ನಡಿಗೆ, ಯೋಗ ಮತ್ತು ಧ್ಯಾನವನ್ನು ಸೇರಿಸಲಿದ್ದೀರಿ. ಮನೆಗೆ ಹೊಸ ಅತಿಥಿ ಬರಲಿದ್ದು, ಇದರಿಂದಾಗಿ ಸಂತಸದ ವಾತಾವರಣ ನೆಲೆಸಲಿದೆ. ಒಬ್ಬ ಒಳ್ಳೆಯ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದೀರಿ.

ಕುಂಭ: ಪ್ರೇಮ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಮೂರನೇ ವ್ಯಕ್ತಿಯು ಹಸ್ತಕ್ಷೇಪ ಮಾಡುವ ಕಾರಣ ಸಮಸ್ಯೆ ಉಂಟಾಗಬಹುದು. ನೀವು ಮನೆಯ ಅಲಂಕಾರಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ನೀವು ಹೊಸ ಮನೆಯನ್ನು ಖರೀದಿಸಲು ಸಾಲ ಪಡೆಯಬಹುದು. ನೀವು ಜಮೀನು ಮತ್ತು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯಲಿದೆ. ನೀವು ಕೆಲಸವನ್ನು ಬದಲಾಯಿಸಲು ಬಯಸುವುದಾದರೆ ಇದು ಸಕಾಲ. ವಿದ್ಯಾರ್ಥಿಗಳು ಸಾಕಷ್ಟು ಏಕಾಗ್ರತೆಯಿಂದ ಅಧ್ಯಯನ ನಡೆಸಲಿದ್ದಾರೆ. ಆಗ ಮಾತ್ರವೇ ಅವರು ಯಶಸ್ಸನ್ನು ಗಳಿಸಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಿಕೊಂಡರೆ ಒಳ್ಳೆಯದು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ನಿರ್ಧರಿಸಲಿದ್ದಾರೆ. ನಿಮ್ಮ ಗೆಳೆಯರಿಂದ ಆದಾಯದ ಅವಕಾಶಗಳನ್ನು ಪಡೆಯಲಿದ್ದೀರಿ.

ಮೀನ: ಕೌಟುಂಬಿಕ ಬದುಕಿನಲ್ಲಿ ಸಂತಸ ಮತ್ತು ಶಾಂತಿ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ಸಂಬಂಧದಲ್ಲಿ ತಪ್ಪು ಗ್ರಹಿಕೆ ಉಂಟಾಗಬಹುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ಪ್ರೇಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ನೀವು ಬ್ಯಾಂಕಿನಿಂದ ಸಾಲವನ್ನು ಪಡೆಯಲು ಯೋಚಿಸುವುದಾದರೆ ನೀವು ಇದನ್ನು ಸುಲಭವಾಗಿ ಪಡೆಯಲಿದ್ದೀರಿ. ಶೇರು ಮಾರುಕಟ್ಟೆ ಮತ್ತು ಲಾಟರಿಯ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಕಠಿಣ ಶ್ರಮ ಪಟ್ಟರೆ ಮಾತ್ರವೇ ಯಶಸ್ಸನ್ನು ಗಳಿಸಲಿದ್ದಾರೆ. ಕೆಲಸ ಬದಲಾಯಿಸಲು ಇದು ಸಕಾಲವಲ್ಲ. ಸರ್ಕಾರಿ ಉದ್ಯೋಗಕ್ಕೆ ಇದು ಸಕಾಲವಲ್ಲ. ಯಾವುದೇ ಬದಲಾವಣೆಯನ್ನು ಎಚ್ಚರಿಕೆಯಿಂದ ಮಾಡಿ. ಹೊಸ ವಿಷಯವನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ. ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವನ್ನು ಸಾಧಿಸಲಿದ್ದಾರೆ. ಶಿಕ್ಷಕರ ನೆರವನ್ನು ಪಡೆಯಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.

ಇದನ್ನೂ ಓದಿ: ಭಾನುವಾರದ ಪಂಚಾಂಗ, ದಿನ ಭವಿಷ್ಯ: ಯಾರ ರಾಶಿಯಲ್ಲೇನಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.