14 ಅಂತಸ್ತಿನ ಕಟ್ಟಡ ಬೆಂಕಿಗಾಹುತಿ: 4 ಜನ ಸಾವು, 14ಕ್ಕೂ ಹೆಚ್ಚು ಜನ ನಾಪತ್ತೆ

author img

By PTI

Published : Feb 23, 2024, 4:26 PM IST

people missing  apartment block fire  eastern Spain  ಕಟ್ಟಡ ಬೆಂಕಿಗಾಹುತಿ  ಜನ ಸಾವು

ಸ್ಪೇನ್‌ನ ವೆಲೆನ್ಸಿಯಾದಲ್ಲಿ 14 ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅನೇಕ ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರೂ ಸಹ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರುವ ಶಂಕೆಯಿದೆ.

ವೆಲೆನ್ಸಿಯಾ, ಸ್ಪೇನ್​: ಗುರುವಾರ ನಗರದ ಅಪಾರ್ಟ್‌ಮೆಂಟ್​​ವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪ್ರಕಾರ, ಈ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. 14 ಅಂತಸ್ತಿನ ಅಪಾರ್ಟ್‌ಮೆಂಟ್ ಇದಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಬೆಂಕಿ ವ್ಯಾಪಿಸಿದೆ.

ನಾಲ್ಕು ಜನ ಸಾವು: ವರದಿಗಳ ಪ್ರಕಾರ, ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ ಸುಮಾರು 350 ಮಂದಿ ಮನೆಗಳಲ್ಲಿ ಸಿಲುಕಿಕೊಂಡಿದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಅನೇಕ ಜನರು ಮೇಲಿನ ಮಹಡಿಗಳಿಂದ ಜಿಗಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಕಿಯ ನಂತರ ಕೆಲವು ವಿಡಿಯೋಗಳು ಸಹ ವೈರಲ್​ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮಹಡಿಗಳಿಂದ ಕೆಳಗೆ ಜಿಗಿಯುತ್ತಿರುವುದು ನೋಡಬಹುದಾಗಿದೆ. ಆತನನ್ನು ರಕ್ಷಿಸಲು ಕೆಳಗೆ ಕೆಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅನೇಕ ಜನರು ತಮ್ಮ ಫ್ಲಾಟ್‌ನ ಬಾಲ್ಕನಿಯಲ್ಲಿ ಸಹಾಯಕ್ಕಾಗಿ ಮನವಿ ಮಾಡುತ್ತಿರುವುದು ಕಂಡುಬಂದಿತು. ಘಟನೆಯಲ್ಲಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿಯುವ ಆತಂಕ ಎದುರಾಗಿದೆ. ಕಠಿಣ ಪರಿಶ್ರಮದ ನಂತರ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಇದಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಇಡೀ ರಾತ್ರಿ ಶ್ರಮಿಸಿದರು. ಈ ಸಮಯದಲ್ಲಿ ಕಾಣೆಯಾದವರ ಬದುಕುಳಿಯುವ ಸಾಧ್ಯತೆಗಳು ಅತ್ಯಲ್ಪವೆಂದು ಅನುಮಾನ ವ್ಯಕ್ತವಾಗಿದೆ.

ಹೆಚ್ಚಾಗಬಹುದು ಸಾವಿನ ಸಂಖ್ಯೆ: ವೆಲೆನ್ಸಿಯಾದಲ್ಲಿ ಭಾರೀ ಬೆಂಕಿಯಿಂದಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಬಹುದು. ಗಾಯಗೊಂಡವರಲ್ಲಿ ಕೆಲವರು ಗಂಭೀರವಾಗಿದ್ದಾರೆ. ಈ ಅಪಘಾತದ ನಂತರ ಅನೇಕ ಜನರು ಕೂಡ ನಾಪತ್ತೆಯಾಗಿದ್ದಾರೆ.

ಮೇಯರ್​ ಹೇಳಿದ್ದು ಹೀಗೆ: 14 ಅಂತಸ್ತಿನ ಕಟ್ಟಡ ಕುಸಿಯುವ ಅಪಾಯ ಇದೆ ಮತ್ತು ಬೆಂಕಿಯ ನಿರಂತರ ಶಾಖ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಗಾಯಗೊಂಡ ಆರು ಜನರು ನಗರದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಅವರಲ್ಲಿ ನಾಲ್ವರು ಅಗ್ನಿಶಾಮಕ ದಳದವರಾಗಿದ್ದಾರೆ. ಕಟ್ಟಡದಲ್ಲಿ ಎಷ್ಟು ಜನರು ಇದ್ದರು ಎಂಬುದು ಇನ್ನು ಗೊತ್ತಾಗಿಲ್ಲ. ಆದರೆ ನೂರಾರು ಜನರು ತಮ್ಮ ಮನೆಗಳು ಮತ್ತು ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಕಟ್ಟಡದ ನಿವಾಸಿಗಳಿಗೆ ಹೋಟೆಲ್‌ಗಳಲ್ಲಿ, ಅವರ ಸಂಬಂಧಿಕರು ಅಥವಾ ನೆರೆಹೊರೆಯವರ ಮನೆಗಳಲ್ಲಿ ವಸತಿ ನೀಡಲಾಗಿದೆ ಎಂದು ವೇಲೆನ್ಸಿಯಾ ಮೇಯರ್ ಮಾರಿಯಾ ಜೋಸ್ ಕ್ಯಾಟಲಾ ಹೇಳಿದ್ದಾರೆ.

ಬೆಂಕಿ ನಂದಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗೆ ಸ್ಪೇನ್‌ನ ಮಿಲಿಟರಿ ತುರ್ತು ಘಟಕದಿಂದ ಸುಮಾರು 90 ಸೈನಿಕರು ಮತ್ತು 40 ಅಗ್ನಿಶಾಮಕ ಟ್ರಕ್‌ಗಳನ್ನು ಸಹ ನಿಯೋಜಿಸಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಮೇಯರ್​ ಹೇಳಿದರು.

ಓದಿ: ಹಣ ದೋಚಲು ಬ್ಯಾಂಕ್​ಗೆ ನುಗ್ಗಿದ ಖದೀಮರು: ಕ್ಯಾಷಿಯರ್​ ಮೇಲೆ ಗುಂಡಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.